ಅಹಮದಾಬಾದ್: ಸತತ 4 ಪಂದ್ಯಗಳಲ್ಲಿ 3 ಬಾರಿ ಡಕ್ಔಟ್ ಆಗಿರುವ ಕನ್ನಡಿಗ ಕೆ.ಎಲ್ ರಾಹುಲ್ರನ್ನು ಚಾಂಪಿಯನ್ ಪ್ಲೇಯರ್ ಎಂದಿರುವ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೌರ್, ಕೇವಲ ಮೂರು ವೈಫಲ್ಯಗಳಿಂದ ಅವರನ್ನ ಟೀಕಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಕೆಎಲ್ ರಾಹುಲ್ ಕಳೆದ ಇಂಗ್ಲೆಂಡ್ ವಿರುದ್ಧದ 3 ಟಿ-20 ಪಂದ್ಯಗಳಿಂದ 1,0,0 ರನ್ಗಳಿಸಿ ಔಟಾಗಿದ್ದಾರೆ.
ಓದಿ: ರಾಹುಲ್ ಚಾಂಪಿಯನ್ ಪ್ಲೇಯರ್, ಆರಂಭಿಕನಾಗಿ ಮುಂದುವರಿಯುತ್ತಾರೆ: ಕನ್ನಡಿಗನ ಪರ ನಿಂತ ಕೊಹ್ಲಿ
" ಕಳೆದ ವರ್ಷದಲ್ಲಿ, ಕೆಎಲ್ ಟಿ-20 ಫಾರ್ಮೆಟ್ನಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು 40ಕ್ಕೂ ಹೆಚ್ಚು ಸರಾಸರಿಯಲ್ಲಿ 145 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿದ್ದಾರೆ. ಕೇವಲ ಮೂರು ವೈಫಲ್ಯಗಳು ಅವರ ಭವಿಷ್ಯ ಬದಲಾಯಿಸುವುದಿಲ್ಲ. ಟಿ-20 ಫಾರ್ಮೆಟ್ನಲ್ಲಿ ನಮ್ಮ ತಂಡದ ಅತ್ಯುತ್ತಮ ಬ್ಯಾಟ್ಸ್‌ಮನ್ ಅವರಾಗಿದ್ದಾರೆ. ಕಳೆದ ವರ್ಷದಲ್ಲಿ ಅವರು ನಮ್ಮ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ, ನಮ್ಮ ತಂಡ ಅವರನ್ನ ಬೆಂಬಲಿಸುವ ಸಮಯ, ಅವರು ಮತ್ತೆ ಫಾರ್ಮ್ಗೆ ಹಿಂತಿರುಗುತ್ತಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ”ಎಂದು ವರ್ಚುಯಲ್ ಪತ್ರಿಕಾಗೋಷ್ಠಿಯಲ್ಲಿ ರಾಥೌರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.