ETV Bharat / sports

Ind vs Eng 2nd Test : ಭಾರತ ಮೊದಲ ಇನ್ನಿಂಗ್ಸ್​ನಲ್ಲಿ​ 329 ರನ್​​ಗೆ ಆಲೌಟ್​

author img

By

Published : Feb 14, 2021, 10:25 AM IST

ಎರಡನೇ ದಿನದಾಟಕ್ಕೆ ಕ್ರೀಸ್​ ಕಾಯ್ದುಕೊಂಡಿದ್ದ ರಿಷಬ್​ ಪಂತ್​, ಟೆಸ್ಟ್​ಗೆ ಪಾದಾರ್ಪಣೆ ಮಾಡಿರುವ ಅಕ್ಷರ್ ಪಟೇಲ್​ ಜೋಡಿ ದೊಡ್ಡ ಇನ್ನಿಂಗ್ಸ್​ ಕಟ್ಟುವಲ್ಲಿ ವಿಫಲವಾಯಿತು. ಅಕ್ಷರ್ ಪಟೇಲ್ 5 ರನ್​ಗಳಿಸಿ ಔಟಾದರು. 329 ರನ್​ಗಳಿಗೆ ಕೊಹ್ಲಿ ಪಡೆ ಆಲೌಟ್​ ಆಗಿದೆ.

post 329 on the board in the first innings of the 2nd INDvENG Test!
ಭಾರತ ಮೊದಲ ಇನ್ನಿಂಗ್ಸ್​ 329 ರನ್​​ಗೆ ಆಲೌಟ್​

ಚೆನ್ನೈ: ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್​ ವಿರುದ್ಧ ಎರಡನೇ ಟೆಸ್ಟ್​ ಪಂದ್ಯದ ಎರಡನೇ ದಿನದಾಟದಲ್ಲಿ ಭಾರತ ತಂಡ ಲಂಚ್​ ವೇಳೆಗೂ ಮುನ್ನವೇ 329 ರನ್​​ಗಳಿಗೆ ಆಲೌಟ್​ ಆಗಿದೆ.

ಎರಡನೇ ದಿನದಾಟಕ್ಕೆ ಕ್ರೀಸ್​ ಕಾಯ್ದುಕೊಂಡಿದ್ದ ರಿಷಬ್​ ಪಂತ್​, ಟೆಸ್ಟ್​ಗೆ ಪಾದಾರ್ಪಣೆ ಮಾಡಿರುವ ಅಕ್ಷರ್ ಪಟೇಲ್​ ಜೋಡಿ ದೊಡ್ಡ ಇನ್ನಿಂಗ್ಸ್​ ಕಟ್ಟುವಲ್ಲಿ ವಿಫಲವಾಯಿತು. ಅಕ್ಷರ್ ಪಟೇಲ್ 5 ರನ್​ಗಳಿಸಿ ಔಟಾದರು. ಇವರ ನಂತರ ಬಂದ ಯಾವೊಬ್ಬ ಆಟಗಾರರು ಎರಡಂಕಿ ಮೊತ್ತ ಗಳಿಸಿಲಿಲ್ಲ. ಇಶಾಂತ್​ ಶರ್ಮಾ 0, ಕುಲದೀಪ್​ ಯಾದವ್ 0, ಸಿರಾಜ್ 4 ರನ್​ಗಳಿಸಿ ಔಟಾದರು. ಅಜೇಯರಾಗಿ ಉಳಿದ ರಿಷಬ್ ಪಂತ್ 58* ರನ್​ಗಳಿ ಅಜೇಯರಾಗಿ ಉಳಿದರು.

ಇಂಗ್ಲೆಂಡ್ ಪರ ಜಾಕ್​ ಲೀಚ್ 2​, ಮೊಯಿನ್ ಅಲಿ ತಲಾ 4 ವಿಕೆಟ್​, ಒಲಿಸ್ಟೋನ್​ 3, ಜೋ ರೂಟ್​ ಒಂದು ವಿಕೆಟ್​ ಪಡೆದುಕೊಂಡಿದ್ದಾರೆ.

ಸತತ ವೈಫಲ್ಯಗಳಿಂದ ಲಯಕ್ಕೆ ಮರಳಿದ ರೋಹಿತ್​ ಶರ್ಮಾ ಅವರ ಅಮೋಘ ಶತಕದ (161) ನೆರವಿನಿಂದ ಎರಡನೇ ಟೆಸ್ಟ್​​ನ ಮೊದಲ ದಿನದಾಟದ ಮುಕ್ತಾಯಕ್ಕೆ ಭಾರತ ಉತ್ತಮ ಮೊತ್ತ ಪೇರಿಸಿತ್ತು. ಪ್ರಥಮ ಇನ್ನಿಂಗ್ಸ್​​ನ ಮೊದಲ ದಿನಕ್ಕೆ 6 ವಿಕೆಟ್ ಕಳೆದುಕೊಂಡು 300 ರನ್​ ಗಳಿಸಿರುವ ಭಾರತ, ಎರಡನೇ ದಿನದಾಟಕ್ಕೆ ಬ್ಯಾಟಿಂಗ್​ ಕಾಯ್ದಿರಿಸಿಕೊಂಡಿದೆ.

ಬೃಹತ್​ ಇನ್ನಿಂಗ್ಸ್​ ಕಟ್ಟುತ್ತಿದ್ದ ರೋಹಿತ್​ಗೆ ಜಾಕ್​ ಲೀಚ್​ ಅಡ್ಡಿಯಾದರು. 161 ರನ್​ ಗಳಿಸಿದ್ದ ಶರ್ಮಾ ಲೀಚ್​ ಬೌಲಿಂಗ್​​ನಲ್ಲಿ ಮೊಯಿನ್ ಅಲಿಗೆ ಕ್ಯಾಚ್​ ನೀಡಿದರು. ಅವರ ಇನ್ನಿಂಗ್ಸ್​​ನಲ್ಲಿ 18 ಬೌಂಡರಿಗಳು ಮತ್ತು 2 ಸಿಕ್ಸರ್​ ಮೂಡಿ ಬಂದಿವೆ. ಶರ್ಮಾ ನಿರ್ಗಮಿಸಿದ ನಂತರ ಮೊಯಿನ್​ ಅಲಿ ಓವರ್​​​ನಲ್ಲಿ ರಹಾನೆ (67) ಬೋಲ್ಡ್​ ಆದರು. ನಂತರ ಆರ್​.ಅಶ್ವಿನ್ ಕೂಡ 13 ರನ್​ ಗಳಿಸಿ ರೂಟ್​ ಬೌಲಿಂಗ್​​ನಲ್ಲಿ ಔಟಾದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.