ETV Bharat / sports

ಮುಂದಿನ ಟೆಸ್ಟ್ ಪಂದ್ಯಗಳಿಂದ ಜಸ್ಪ್ರೀತ್​ ಬುಮ್ರಾ ಔಟ್​!?

author img

By

Published : Feb 17, 2021, 10:17 AM IST

ಚೆಪಾಕ್‌ನಲ್ಲಿ ನಡೆದ ಎರಡನೇ ಟೆಸ್ಟ್‌ಗೆ ಬುಮ್ರಾಗೆ ವಿಶ್ರಾಂತಿ ನೀಡಲಾಗಿತ್ತು. ಈ ಪಂದ್ಯದಲ್ಲಿ ಭಾರತವು 317 ರನ್‌ಗಳಿಂದ ಜಯಗಳಿಸಿ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-1ರಿಂದ ಸಮವಾಗಿದೆ.

Jasprit Bumrah may be rested for white-ball matches against England
ಜಸ್ಪ್ರೀತ್​ ಬುಮ್ರಾ

ನವದೆಹಲಿ: ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಟೆಸ್ಟ್​​ ಸರಣಿಯ ಮುಂದಿನ ಎರಡು ಪಂದ್ಯಗಳಿಂದ ಟೀಮ್​ ಇಂಡಿಯಾದ ವೇಗದ ಬೌಲರ್​ ಜಸ್ಪ್ರೀತ್​ ಬುಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.

ಚೆಪಾಕ್‌ನಲ್ಲಿ ನಡೆದ ಎರಡನೇ ಟೆಸ್ಟ್‌ಗೆ ಬುಮ್ರಾಗೆ ವಿಶ್ರಾಂತಿ ನೀಡಲಾಗಿತ್ತು. ಈ ಪಂದ್ಯದಲ್ಲಿ ಭಾರತವು 317 ರನ್‌ಗಳಿಂದ ಜಯಗಳಿಸಿ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-1ರಿಂದ ಸಮವಾಗಿದೆ.

ಅಹಮದಾಬಾದ್​​ನಲ್ಲಿ ಮುಂದಿನ ಎರಡು ವೈಟ್​ ಬಾಲ್​​ ಟೆಸ್ಟ್​​ ಪಂದ್ಯಗಳಿಗೆ ಜಸ್ಪ್ರೀತ್​ ಬುಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಮುಖ್ಯ ಕೋಚ್ ರವಿಶಾಸ್ತ್ರಿ, ನಾಯಕ ವಿರಾಟ್ ಕೊಹ್ಲಿ ಮತ್ತು ಬೌಲಿಂಗ್ ಕೋಚ್ ಭಾರತ್ ಅರುಣ್ ಈ ಬಗ್ಗೆ ಸಮಾಲೋಚನೆ ನಡೆಸಿದ್ದು, ಮುಂದಿನ ಟಿ-20 ಹಾಗೂ ಏಕದಿನ ಪಂದ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಓದಿ : 3ನೇ ಟೆಸ್ಟ್​ಗೆ ಇಂಗ್ಲೆಂಡ್ ತಂಡ ಪ್ರಕಟ: ಮಾರ್ಕ್​ವುಡ್​, ಬೈರ್ಸ್ಟೋವ್​ ಕಮ್​ಬ್ಯಾಕ್, ಮೋಯಿನ್ ಅಲಿ ಔಟ್

"ಆಸ್ಟ್ರೇಲಿಯಾದ ಪ್ರವಾಸದ ಆರಂಭದಿಂದಲೂ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ (ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ತನಕ) ಸುಮಾರು 150 ಓವರ್‌ಗಳು ಸೇರಿದಂತೆ ಬುಮ್ರಾ ಈಗಾಗಲೇ 180 ಓವರ್‌ಗಳನ್ನು ಬೌಲ್ ಮಾಡಿದ್ದಾರೆ. ಈ ಕಾರಣದಿಂದಾಗಿ ಮುಂದಿನ ಹಲವು ಪಂದ್ಯಗಳಿಂದ ಬುಮ್ರಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.

"ಈಗಾಗಲೇ ವೈಟ್-ಬಾಲ್ ಟೆಸ್ಟ್​ ಪಂದ್ಯಗಳಿಗೆ ಮೊಹಮ್ಮದ್ ಶಮಿ, ಟಿ ನಟರಾಜನ್, ಸೈನಿ ತಂಡಕ್ಕೆ ಮರಳಿದ್ದು, ಭುವನೇಶ್ವರ್ ಕುಮಾರ್ ಕೂಡಾ ಪುನರಾಗಮನ ಮಾಡಬಹುದು. ಬುಮ್ರಾ ಈ ಬಾರಿಯ ಐಪಿಎಲ್​​ನಲ್ಲಿ ಕಣಕ್ಕಿಳಿಯಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.