ಹೈದರಾಬಾದ್ : ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ ನೀಡಿದ 337 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್, 43.3 ಓವರ್‌ಗಳಲ್ಲೇ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1ರ ಅಂತರದ ಸಮಬಲ ದಾಖಲಿಸಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದ ಅಂತ್ಯದ ನಂತರ ಅನೇಕ ದಾಖಲೆಗಳು ಸೃಷ್ಟಿಯಾಗಿವೆ.
- ಇಂಗ್ಲೆಂಡ್ ತಮ್ಮ ಇನ್ನಿಂಗ್ಸ್‌ನಲ್ಲಿ ಒಟ್ಟು 20 ಸಿಕ್ಸರ್‌ಗಳನ್ನು ಬಾರಿಸಿತು. ಏಕದಿನ ಪಂದ್ಯವೊಂದರಲ್ಲಿ ಭಾರತ ತಂಡದ ಸಿಡಿಸಿದ ವಿರುದ್ಧ ಗರಿಷ್ಠ ಸಿಕ್ಸರ್ ಇದಾಗಿದೆ. 2015 ರಲ್ಲಿ ದಕ್ಷಿಣ ಆಫ್ರಿಕಾ ಭಾರತದ ವಿರುದ್ಧ ಮುಂಬೈನಲ್ಲಿ 20 ಸಿಕ್ಸರ್ ಸಿಡಿಸಿತ್ತು.
- ಈ ಪಂದ್ಯದಲ್ಲಿ ಎರಡೂ ತಂಡಗಳು ಒಟ್ಟು 34 ಸಿಕ್ಸರ್‌ಗಳನ್ನ ಬಾರಿಸಿವೆ. ಭಾರತದಲ್ಲಿ ಆಡಿದ ಏಕದಿನ ಪಂದ್ಯಗಳಲ್ಲಿ ಇದು ಎರಡನೇ ಅತಿ ಹೆಚ್ಚು ಸಿಕ್ಸರ್ ಗಳಾಗಿವೆ. ಇದಕ್ಕೂ ಮುನ್ನ 2013 ರ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ 38 ಸಿಕ್ಸರ್ ಬಾರಿಸಿ ದಾಖಲೆ ನಿರ್ಮಿಸಿದೆ.
- ಈ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ 10 ಸಿಕ್ಸರ್ ಸಿಡಿಸಿದ್ದು, ಏಕದಿನ ಪಂದ್ಯಗಳಲ್ಲಿ ಭಾರತದ ವಿರುದ್ಧ ಒಬ್ಬ ಬ್ಯಾಟ್ಸ್ಮನ್ ಸಿಡಿಸಿದ ಎರಡನೇ ಅತಿ ಹೆಚ್ಚು ಸಿಕ್ಸರ್‌ಗಳಾಗಿವೆ.
- ಈ ಪಂದ್ಯದಲ್ಲಿ ಚೇಸ್‌ನಲ್ಲಿ ಜಾನಿ ಬೈರ್‌ಸ್ಟೋವ್ ಮತ್ತು ಜೇಸನ್ ರಾಯ್ ಆರಂಭಿಕ ವಿಕೆಟ್‌ಗೆ 110 ರನ್ ಸೇರಿಸಿದರು. ಏಕದಿನ ಮಾದರಿ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ಪರ 13 ಬಾರಿ ಶತಕದ ಜೊತೆಯಾಟವಾಡಿದ ಜೋಡಿ ಎನಿಸಿಕೊಂಡಿದೆ. ಜೋ ರೂಟ್ ಮತ್ತು ಇಯಾನ್ ಮಾರ್ಗನ್ ಜೋಡಿ 12 ಬಾರಿ ಶತಕದ ಜೊತೆಯಾಟವಾಡಿದೆ.
- ಈ ಪಂದ್ಯದಲ್ಲಿ ಒಟ್ಟು 4 ಶತಕದ ಜೊತೆಯಾಟ ಬಂದಿದ್ದು, ಇದು ಏಕದಿನ ಕ್ರಿಕೆಟ್‌ನಲ್ಲಿ ದಾಖಲೆಯಾಗಿದೆ.
- ಈ ಪಂದ್ಯದಲ್ಲಿ ಮತ್ತೊಮ್ಮೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆದಿಲ್ ರಶೀದಗೆ ವಿಕೆಟ್ ಒಪ್ಪಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆದಿಲ್ ರಶೀದ್ ಒಟ್ಟು 9 ಬಾರಿ ಔಟ್ ಮಾಡಿದ್ದಾರೆ. ಟಿಮ್ ಸೌಥಿ 10 ಬಾರಿ ವಿರಾಟ್ ಕೊಹ್ಲಿಯನ್ನ ಪೇವಲಿಯನ್ಗೆ ಅಟ್ಟಿದ್ದಾರೆ.
- ಕೆಎಲ್ ರಾಹುಲ್ ಮೂರು ಮಾದರಿಗಳಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಬಾರಿಸಿದ ಮೂರನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ಕ್ರಿಸ್ ಗೇಲ್ ಮತ್ತು ರೋಹಿತ್ ಶರ್ಮಾ ಈ ಮೈಲಿಗಲ್ಲು ಸಾಧಿಸಿದ್ದರು.
- ಈ ಪಂದ್ಯದಲ್ಲಿ ರಿಷಭ್ ಪಂತ್ ತಮ್ಮ ಇನ್ನಿಂಗ್ಸ್‌ನಲ್ಲಿ 7 ಸಿಕ್ಸರ್ ಬಾರಿಸಿದರು. ಇದು ಏಕದಿನ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಭಾರತೀಯ ಆಟಗಾರನು ಹೊಡೆದ ಗರಿಷ್ಠ ಸಿಕ್ಸರ್ಗಳಾಗಿದೆ.