ಹೈದರಾಬಾದ್ : ಭಾರತ ಮತ್ತು ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯ ಎಂ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಇಂದು ಆರಂಭವಾಗಿದೆ. ಟಾಸ್ ಗೆದ್ದ ರೂಟ್ ನೇತೃತ್ವದ ಆಂಗ್ಲ ಪಡೆ ಬ್ಯಾಟಿಂಗ್ ಆಯ್ದುಕೊಂಡಿದೆ.
-
Lunch in Chennai 🍲
— ICC (@ICC) February 5, 2021 " class="align-text-top noRightClick twitterSection" data="
England looked solid for the most part, before India took late wickets.
The visitors go in at 67/2. Whose session was that? 🤔#INDvENG | https://t.co/gnj5x4GOos pic.twitter.com/uRzK8rPqDb
">Lunch in Chennai 🍲
— ICC (@ICC) February 5, 2021
England looked solid for the most part, before India took late wickets.
The visitors go in at 67/2. Whose session was that? 🤔#INDvENG | https://t.co/gnj5x4GOos pic.twitter.com/uRzK8rPqDbLunch in Chennai 🍲
— ICC (@ICC) February 5, 2021
England looked solid for the most part, before India took late wickets.
The visitors go in at 67/2. Whose session was that? 🤔#INDvENG | https://t.co/gnj5x4GOos pic.twitter.com/uRzK8rPqDb
ಇಂಗ್ಲೆಂಡ್ ಪರ ಓಪನರ್ ಆಗಿ ಕಣಕ್ಕಿಳಿದ ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಕೊಟ್ಟರು. ಮೊದಲ ವಿಕೆಟ್ಗೆ 63 ರನ್ಗಳ ಜೊತೆಯಾಟವಾಡಿದರು. ರೋರಿ ಬರ್ನ್ಸ್ 33 ರನ್ಗಳಿಸಿದಾಗ ಅಶ್ವಿನ್ ಬೌಲಿಂಗ್ನಲ್ಲಿ ಪಂತ್ ಗೆ ಕ್ಯಾಚ್ ನೀಡಿ ಔಟಾದರು. 60 ಬೌಲ್ ಎದುರಿಸಿದ ಅವರು 2 ಬೌಂಡರಿ ಸಮೇತ 33 ರನ್ಗಳಿಸಿದರು. ಇನ್ನು ಬರ್ನ್ಸ್ ಔಟಾದ ಬಳಿಕ ಕ್ರೀಸ್ ಬಂದ ಲಾರೆನ್ಸ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. 5 ಬೌಲ್ ಎದುರಿಸಿದ ಅವರು ಬೂಮ್ರಾ ಬೌಲಿಂಗ್ನಲ್ಲಿ ಶ್ಯೂನಕ್ಕೆ ಔಟಾಗಿ ಪೇವಲಿಯನ್ ಹಾದಿ ಹಿಡಿದರು.
ಇನ್ನು ಸಿಬ್ಲಿ 26*, ಮತ್ತು ರೂಟ್ 4* ಕ್ರೀಸ್ನಲ್ಲಿದ್ದು ಮೊದಲ ವಿರಾಮದ ವೇಳೆಗೆ ಇಂಗ್ಲೆಂಡ್ ತಂಡದ ಮೊತ್ತ 67 ರನ್ ಕಲೆ ಹಾಕಿದೆ . ಇನ್ನು ಟೀಂ ಇಂಡಿಯಾ ಪರ ಬೂಮ್ರಾ ಮತ್ತು ಅಶ್ವಿನ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಓದಿ: ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್.. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಂಗ್ಲರು..