ಮುಂಬೈ: ಕೋವಿಡ್ ಹಾವಳಿಯ ನಡುವೆ ಭಾರತದ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳು ಚಾರ್ಟರ್ಡ್ ವಿಮಾನದಲ್ಲಿ ಇಂದು ಮುಂಜಾನೆ ಇಂಗ್ಲೆಂಡ್‌ಗೆ ಹೊರಟಿವೆ. ಇದೇ ಮೊದಲ ಬಾರಿಗೆ ಪುರುಷ ಮತ್ತು ಮಹಿಳಾ ತಂಡಗಳು ಒಟ್ಟಿಗೆ ಪ್ರಯಾಣ ಬೆಳೆಸಿವೆ.
ಮುಂಬೈ ವಿಮಾನ ನಿಲ್ದಾಣದಿಂದ ನಿರ್ಗಮಿಸುವ ಮುನ್ನ ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್ ಹಾಗೂ ಮಹಿಳಾ ಕ್ರಿಕೆಟಿಗರಾದ ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ಅವರ ಫೋಟೋಗಳನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಧಿಕೃತ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
-
#TeamIndia pic.twitter.com/mhmyJFc0H8
— BCCI (@BCCI) June 2, 2021 " class="align-text-top noRightClick twitterSection" data="
">#TeamIndia pic.twitter.com/mhmyJFc0H8
— BCCI (@BCCI) June 2, 2021#TeamIndia pic.twitter.com/mhmyJFc0H8
— BCCI (@BCCI) June 2, 2021
ಎರಡೂ ತಂಡಗಳ ಆಟಗಾರರು ಲಂಡನ್‌ಗೆ ಆಗಮಿಸಿದ ಬಳಿಕ ಸೌತಾಂಪ್ಟನ್‌ಗೆ ತೆರಳಲಿದ್ದು, ಅಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೌತಾಂಪ್ಟನ್‌ನಲ್ಲಿ ಅವರು ಕಡ್ಡಾಯವಾಗಿ ಕ್ವಾರಂಟೈನ್ಗೆ ಒಳಗಾಗಬೇಕಿದೆ.
ಜೂನ್ 18ರಿಂದ ಸೌತಾಂಪ್ಟನ್‌ನಲ್ಲಿ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ವಿರಾಟ್ ಕೊಹ್ಲಿ ನೇತೃತ್ವದ ಭಾರತದ ತಂಡ ಆಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ಗೆ ಆಯ್ಕೆಯಾಗಿರುವುದಕ್ಕೆ ಕೊಹ್ಲಿ ಸಂತಸ ವ್ಯಕ್ತಪಡಿಸಿ ಮಾತನಾಡಿರುವ ವಿಡಿಯೋವನ್ನು ಸಹ ಬಿಸಿಸಿಐ ತನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
-
🗣️ Happy to have the opportunity to play the World Test Championship Final: #TeamIndia Captain @imVkohli ☺️ pic.twitter.com/jjFEwEisrD
— BCCI (@BCCI) June 2, 2021 " class="align-text-top noRightClick twitterSection" data="
">🗣️ Happy to have the opportunity to play the World Test Championship Final: #TeamIndia Captain @imVkohli ☺️ pic.twitter.com/jjFEwEisrD
— BCCI (@BCCI) June 2, 2021🗣️ Happy to have the opportunity to play the World Test Championship Final: #TeamIndia Captain @imVkohli ☺️ pic.twitter.com/jjFEwEisrD
— BCCI (@BCCI) June 2, 2021
ಏನಿದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್?
ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಟೆಸ್ಟ್ ಶ್ರೇಯಾಂಕದಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದ ತಂಡಗಳಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಾವಳಿಯನ್ನು ಆಡಿಸಲಾಗುತ್ತದೆ. ಈ ಬಾರಿಯ ಐಸಿಸಿ ಶ್ರೇಯಾಂಕದಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ನ್ಯೂಜಿಲ್ಯಾಂಡ್ ಎರಡನೇ ಸ್ಥಾನದಲ್ಲಿದೆ.
ಇನ್ನು ಮಹಿಳಾ ತಂಡವು ಜೂನ್ 16ರಿಂದ ಬ್ರಿಸ್ಟಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಒನ್-ಆಫ್ ಟೆಸ್ಟ್ (one-off Test) ಆಡಲಿದೆ. ಏಳು ವರ್ಷಗಳ ಬಳಿಕ ಭಾರತ-ಇಂಗ್ಲೆಂಡ್ ಮಹಿಳಾ ತಂಡಗಳು ಆಡುತ್ತಿರುವ ಟೆಸ್ಟ್ ಇದಾಗಿದೆ. ಇದರ ಬಳಿಕ ಇಂಗ್ಲೆಂಡ್ ವಿರುದ್ಧ ಮೂರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳನ್ನು ಆಡಲಿದೆ.
ಜುಲೈ 15ರಂದು ಮಹಿಳಾ ತಂಡದ ಇಂಗ್ಲೆಂಡ್ ಪ್ರವಾಸ ಕೊನೆಗೊಳ್ಳಲಿದ್ದು, ಪುರುಷ ತಂಡವು ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಐದು ಟೆಸ್ಟ್ ಪಂದ್ಯಗಳ ಸರಣಿಗಾಗಿ ಅಲ್ಲಿಯೇ ತಂಗಬೇಕಿದೆ.