ETV Bharat / sports

3ನೇ ಟೆಸ್ಟ್​ ಪಂದ್ಯದಲ್ಲಿ ಓಪನರ್​ ಆಗಿ ಜಾನಿ ಬೈರ್ಸ್ಟೋವ್ ಕಣಕ್ಕಿಳಿಯಲಿ: ಸ್ಟೀವ್ ಹಾರ್ಮಿಸನ್

ಮೊದಲ ಟೆಸ್ಟ್‌ನಲ್ಲಿ ಸೋಲು ಕಂಡಿದ್ದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಕಮ್​​ಬ್ಯಾಕ್​ ಮಾಡುವ ಮೂಲಕ ಆಂಗ್ಲ ಪಡೆಗೆ ಪ್ರತ್ಯುತ್ತರ ನೀಡಿತ್ತು. ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿವೆ.

Jonny Bairstow
ಜಾನಿ ಬೈರ್ಸ್ಟೋವ್
author img

By

Published : Feb 17, 2021, 11:49 AM IST

ಲಂಡನ್: ಭಾರತ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯಕ್ಕೆ ಇಸಿಬಿ ಇಂಗ್ಲೆಂಡ್ ತಂಡವನ್ನು ಪ್ರಕಟಿಸಿದೆ. ಮೊದಲೆರಡು ಟೆಸ್ಟ್​ ಪಂದ್ಯಗಳಿಂದ ಹೊರಗುಳಿದಿದ್ದ ಬೈರ್ಸ್ಟೋವ್, ಮಾರ್ಕ್​ವುಡ್​ ತಂಡಕ್ಕೆ ಮರಳಿದ್ದರೆ, ಆಲ್​ರೌಂಡರ್​ ಮೋಯಿನ್ ಅಲಿ ತಂಡದಿಂದ ಹೊರಗುಳಿದಿದ್ದಾರೆ.

ಅಹಮದಾಬಾದ್‌ನಲ್ಲಿ ಭಾರತ ವಿರುದ್ಧದ ಹಗಲು-ರಾತ್ರಿ ಮೂರನೇ ಟೆಸ್ಟ್‌ನಲ್ಲಿ ಜಾನಿ ಬೈರ್ಸ್ಟೋವ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ ಎಂದು ಇಂಗ್ಲೆಂಡ್‌ನ ಮಾಜಿ ವೇಗಿ ಸ್ಟೀವ್ ಹಾರ್ಮಿಸನ್ ಹೇಳಿದ್ದಾರೆ.

ಮೊದಲ ಟೆಸ್ಟ್‌ನಲ್ಲಿ ಸೋಲು ಕಂಡಿದ್ದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಕಮ್​​ಬ್ಯಾಕ್​ ಮಾಡುವ ಮೂಲಕ ಆಂಗ್ಲ ಪಡೆಗೆ ಪ್ರತ್ಯುತ್ತರ ನೀಡಿತ್ತು. ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿವೆ.

ಓದಿ : 3ನೇ ಟೆಸ್ಟ್​ಗೆ ಇಂಗ್ಲೆಂಡ್ ತಂಡ ಪ್ರಕಟ: ಮಾರ್ಕ್​ವುಡ್​, ಬೈರ್ಸ್ಟೋವ್​ ಕಮ್​ಬ್ಯಾಕ್, ಮೋಯಿನ್ ಅಲಿ ಔಟ್

ಆದರೆ ಎರಡು ಟೆಸ್ಟ್​ ಪಂದ್ಯಗಳಲ್ಲಿ ಇಂಗ್ಲೆಂಡ್​ ಓಪನರ್​ಗಳಾದ ಡೊಮ್ ಸಿಬ್ಲಿ ಮತ್ತು ರೋರಿ ಬರ್ನ್ಸ್ ಹೇಳಿಕೊಳ್ಳುವಂತಹ ಆರಂಭ ನೀಡದ ಕಾರಣ, ಮೂರನೇ ಟೆಸ್ಟ್​ ಪಂದ್ಯದಲ್ಲಿ ಬೈರ್ಸ್ಟೋವ್, ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಸ್ಟೀವ್ ಹಾರ್ಮಿಸನ್ ಹೇಳಿದ್ದಾರೆ.

ಸ್ಟೀವ್ ಹಾರ್ಮಿಸನ್
ಸ್ಟೀವ್ ಹಾರ್ಮಿಸನ್

" ಇಂಗ್ಲೆಂಡ್​ ತಂಡದ ಆರಂಭಿಕರು ಶ್ರೀಲಂಕಾ ಮತ್ತು ಭಾರತ ನೆಲದಲ್ಲಿ ಹೇಳಿಕೊಳ್ಳುವಂತಹ ಆರಂಭ ನೀಡಿಲ್ಲ. ಇದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿರಬಹುದು. ಆದ್ದರಿಂದ ಭಾರತ ವಿರುದ್ಧದ ಡೇ / ನೈಟ್ ಟೆಸ್ಟ್ ಪಂದ್ಯದಲ್ಲಿ ಬೈರ್ಸ್ಟೋವ್ ರನ್ನ ಆರಂಭಿಕರಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಸ್ಟೀವ್ ಹಾರ್ಮಿಸನ್ ಹೇಳಿದ್ದಾರೆ.

ಶ್ರೀಲಂಕಾದಲ್ಲಿ ನಡೆದ ಟೆಸ್ಟ್​ ಸರಣಿಯಲ್ಲಿ ಗೆಲುವಿನ ಪ್ರಮುಖ ಪಾತ್ರ ವಹಿಸಿದ್ದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಬೈರ್ಸ್ಟೋವ್ 3 ನೇ ಸ್ಥಾನದಲ್ಲಿ ಬ್ಯಾಟಿಂಗ್​ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.