ETV Bharat / sports

ಎರಡನೇ ಟೆಸ್ಟ್​ ಪಂದ್ಯದಿಂದ ಜೋಫ್ರಾ ಆರ್ಚರ್ ಔಟ್​.. - ಚೆನ್ನೈ ಎಂ ಎ ಚಿದಂಬರಂ ಸ್ಟೇಡಿಯಂ

ಈ ಸಮಸ್ಯೆ ಹಿಂದಿನ ಗಾಯದ ಸಮಸ್ಯೆಗೆ ಸಂಬಂಧಿಸಿದಂತೆ ಕಾಣಿಸುತ್ತಿಲ್ಲ. ಹೀಗಾಗಿ, ಇಲ್ಲಿನ ಪರಿಸ್ಥಿತಿ ಗಾಯ ಬೇಗ ಗುಣ ಆಗಲು ನೆರವಾಗಲಿದೆ. ಅಹ್ಮದಾಬಾದ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ ವೇಳೆ ಆರ್ಚರ್ ಮೈದಾನಕ್ಕಿಳಿಯುವ ವಿಶ್ವಾಸವಿದೆ..

Jofra Archer
ಜೋಫ್ರಾ ಆರ್ಚರ್
author img

By

Published : Feb 12, 2021, 7:35 AM IST

ಚೆನ್ನೈ : ಇಂಗ್ಲೆಂಡ್ ತಂಡದ ವೇಗಿ ಜೋಫ್ರಾ ಆರ್ಚರ್ ಭಾರತ ವಿರುದ್ಧದ ಎರಡನೇ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ. ಆರ್ಚರ್​ಗೆ ಮೊಣಕೈ ಗಾಯವಾದ ಕಾರಣ ಮುಂದಿನ ಪಂದ್ಯವನ್ನಾಡುತ್ತಿಲ್ಲ. ಎರಡನೇ ಪಂದ್ಯವು ಕೂಡ ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಾಳೆಯಿಂದ ಆರಂಭವಾಗಲಿದೆ.

ನಾಳಿನ ಪಂದ್ಯದಲ್ಲಿ ಜೋಫ್ರಾ ಆರ್ಚರ್ ಆಡುತ್ತಿಲ್ಲ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ಇಸಿಬಿ) ಹೇಳಿದೆ. ಮೊದಲನೇ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಜೋಫ್ರಾ ಕೇವಲ 9 ಓವರ್ ಮಾಡಿದ್ದರು. ತಮ್ಮ ಬಲ ಮೊಣಕೈಗೆ ಇಂಜೆಕ್ಷನ್​​ ತೆಗೆದುಕೊಂಡಿದ್ದರಿಂದ ಆರ್ಚರ್​ ಮಂಕಾದಂತೆ ಕಾಣುತ್ತಿದ್ದಾರೆ ಎಂದು ಇಸಿಬಿ ತಿಳಿಸಿದೆ.

ಓದಿ: ಭಾರತದ ವಿರುದ್ಧದ ಟಿ-20 ಸರಣಿಗೆ 16 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದ ಇಂಗ್ಲೆಂಡ್​ ಕ್ರಿಕೆಟ್ ಮಂಡಳಿ

'ಈ ಸಮಸ್ಯೆ ಹಿಂದಿನ ಗಾಯದ ಸಮಸ್ಯೆಗೆ ಸಂಬಂಧಿಸಿದಂತೆ ಕಾಣಿಸುತ್ತಿಲ್ಲ. ಹೀಗಾಗಿ, ಇಲ್ಲಿನ ಪರಿಸ್ಥಿತಿ ಗಾಯ ಬೇಗ ಗುಣ ಆಗಲು ನೆರವಾಗಲಿದೆ. ಅಹ್ಮದಾಬಾದ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ ವೇಳೆ ಆರ್ಚರ್ ಮೈದಾನಕ್ಕಿಳಿಯುವ ವಿಶ್ವಾಸವಿದೆ' ಎಂದು ಇಸಿಬಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.