ದುಬೈ: ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಬಾರಿ ಎಡವಟ್ಟು ಮಾಡಿಕೊಂಡಿದ್ದಾರೆ. ಚೆಂಡು ಬ್ಯಾಟ್ಗೆ ತಾಗದಿದ್ದರೂ ಅಂಪೈರ್ ಔಟೆಂದು ತೀರ್ಪು ನೀಡಿದ ಬೆನ್ನಲ್ಲೇ ಮೈದಾನ ದಿಂದ ಹೊರನಡದು ಆಸ್ಟ್ರೇಲಿಯಾ ಕೈಯಲ್ಲಿದ್ದ ಪಂದ್ಯ ಪಾಕಿಸ್ತಾನದ ಕಡೆಗೆ ತಿರುಗುವಂತೆ ಮಾಡಿದ್ದಾರೆ.
ಶದಬ್ ಖಾನ್ ಎಸೆದ 11ಓವರ್ನ ಮೊದಲ ಎಸೆತದಲ್ಲಿ ಈ ಅಚ್ಚರಿಯ ಘಟನೆ ನಡೆಯಿತು. ಶದಬ್ ಖಾನ್ ಎಸೆದ ಚೆಂಡನ್ನು ದಂಡಿಸುವಲ್ಲಿ ವಾರ್ನರ್ ವಿಫಲರಾದರು. ಆದರೆ ಬ್ಯಾಟ್ಗೆ ತಾಗಿದ ಶಬ್ದ ಕೇಳಿದ ಕೂಡಲೆ ಕೀಪರ್ ರಿಜ್ವಾನ್ ಮತ್ತು ಶದಬ್ ಜೋರಾಗಿ ಅಫೀಲ್ ಮಾಡಿದರು. ಅಂಪೈರ್ ಕೂಡ ಬೆರಳನ್ನೆತ್ತಿದರು. ಆದರೆ ವಾರ್ನರ್ ಹಿಂದೆ ಮುಂದೆ ಯೋಚಿಸದೆ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು.
ಆದರೆ ಟಿವಿ ರಿಪ್ಲೇನಲ್ಲಿ ಬ್ಯಾಟ್ಗೂ ಚೆಂಡಿಗೂ ಅಂತರ ಇರುವುದು ಸ್ಪಷ್ಟವಾಗಿ ಕಂಡುಬಂದಿತು. ಅಲ್ಟ್ರಾ ಎಡ್ಜ್ನಲ್ಲೂ ಬ್ಯಾಟ್ಗೆ ತಾಗಿದ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ. ವಾರ್ನರ್ ನಡೆದ ಕ್ರಿಕೆಟ್ ಅಭಿಮಾನಿಗಳಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆದರೆ ಬ್ಯಾಟ್ನ ಹ್ಯಾಂಡಲ್ನಲ್ಲಿ ಶಬ್ದ ಬಂದಿದ್ದರಿಂದ ವಾರ್ನರ್ ಹೊರ ನಡೆದಿರಬಹುದು ಎಂದು ಕೂಡ ಹೇಳಲಾಗುತ್ತಿದೆ.
ವಾರ್ನರ್ 30 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ಗಳ ನೆರವಿನಿಂದ 49 ರನ್ಗಳಿಸಿ ಔಟಾಗಿದ್ದರು. ಇವರ ದುಡುಕಿನ ನಿರ್ಧಾರದಿಂದ ಗೆಲುವಿನತ್ತ ಸಾಗುತ್ತಿದ್ದ ಆಸ್ಟ್ರೇಲಿಯಾ ದಿಢೀರ್ ಹಿನ್ನಡೆ ಅನುಭವಿಸಿತು. ಇವರ ಬೆನ್ನಲ್ಲೆ ಗ್ಲೇನ್ ಮ್ಯಾಕ್ಸ್ವೆಲ್(7) ಕೂಡ ರಿವರ್ಸ್ ಸ್ವೀಪ್ ಮಾಡುವ ಯತ್ನದಲ್ಲಿ ವಿಫಲರಾಗಿ ಔಟಾದರು.
ಇದನ್ನೂ ಓದಿ:T20 ಯಲ್ಲಿ ವೇಗದ 2500 ರನ್: ವಿರಾಟ್ ದಾಖಲೆ ಬ್ರೇಕ್ ಮಾಡಿದ ಬಾಬರ್ ಆಜಂ