ETV Bharat / sports

ಮನಸ್ಥಿತಿ ಚೆನ್ನಾಗಿದ್ದರೆ ಎಲ್ಲವೂ ಸರಿಹೋಗುತ್ತದೆ: ತಂಡದ ಸಾಮರ್ಥ್ಯದ ಬಗ್ಗೆ ಕೊಹ್ಲಿ ವಿವರಣೆ

author img

By

Published : Jun 2, 2021, 11:06 PM IST

ಜೂನ್ 18ರಿಂದ ಸೌತಾಂಪ್ಟನ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯ ಆರಂಭವಾಗಲಿದ್ದು, ಟೀಂ ಇಂಡಿಯಾ ಇಂದು ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿತು. ಇದಕ್ಕೂ ಮುನ್ನ ನಾಯಕ ವಿರಾಟ್​ ಕೊಹ್ಲಿ ತಂಡದ ಸಾಮರ್ಥ್ಯದ ಬಗ್ಗೆ ವಿವರಣೆ ನೀಡಿದರು.

All in the head: Virat Kohli on lack of preparation time for WTC final
ವಿರಾಟ್​ ಕೊಹ್ಲಿ

ಮುಂಬೈ: ಸಮಯಾವಕಾಶದ ಕೊರತೆಯಿಂದ ನ್ಯೂಜಿಲ್ಯಾಂಡ್​ ವಿರುದ್ಧ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಹೇಳಿಕೊಳ್ಳುವಷ್ಟು ತಯಾರಿ ಮಾಡಿಕೊಂಡಿಲ್ಲ. ಆದರೆ, ಇದು ತಂಡದ ಸಾಮರ್ಥ್ಯದ ಮೇಲೆ ‍ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್ ಪ್ರವಾಸಕ್ಕೆ ಹೊರಡುವ ಮುನ್ನ ತಂಡ ಹಾಗೂ ತಂಡದ ಸಾಮರ್ಥ್ಯದ ಬಗ್ಗೆ ಮಾತನಾಡಿದ ಅವರು, ಇಂಗ್ಲೆಂಡ್‌ನಲ್ಲಿ ಈ ಹಿಂದೆ ಆಡಿರುವ ಅನುಭವವಿದೆ. ಹಾಗಾಗಿ ಆಡಲಿರುವ ಮುಂದಿನ ಸರಣಿಗೆ ಇದು ವರದಾನವಾಗಲಿದೆ ಎಂದರು.

ಜೂನ್ 18ರಿಂದ ಸೌತಾಂಪ್ಟನ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯ ಆರಂಭವಾಗಲಿದೆ. ಅದಕ್ಕೂ ಮುನ್ನ ನ್ಯೂಜಿಲ್ಯಾಂಡ್​ ತಂಡ ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಭಾರತ ತಂಡ ಇಂಗ್ಲಂಡ್​ ತಲುಪಿದ ಕೂಡಲೇ ಕ್ವಾರಂಟೈನ್‌ಗೆ ಒಳಗಾಗಲಿದೆ. ಈ ಪೈಕಿ ಮೊದಲ ಮೂರು ದಿನ ಆಟಗಾರರು ಹೋಟೆಲ್ ಕೊಠಡಿಯಲ್ಲೇ ಉಳಿಯಲಿದ್ದಾರೆ.

All in the head: Virat Kohli on lack of preparation time for WTC final
ನಾಯಕ ವಿರಾಟ್​ ಕೊಹ್ಲಿ ಮತ್ತು ಕೋಚ್​ ರವಿ ಶಾಸ್ತ್ರಿ

ಈ ಹಿಂದೆ ಪರಿಸ್ಥಿತಿ ಚೆನ್ನಾಗಿರುವಾಗ ಕೂಡ ಕೇವಲ ಮೂರು ದಿನಗಳ ಹಿಂದೆ ಅಲ್ಲಿಗೆ ತಲುಪಿದ್ದೇವೆ. ಆದರೂ ಉತ್ತಮ ಸಾಧನೆ ಮಾಡಿ ಸರಣಿ ಗೆದ್ದಿದ್ದೇವೆ. ಭಾರತ ತಂಡ ಇಂಗ್ಲೆಂಡ್‌ನಲ್ಲಿ ಹಿಂದೆಯೂ ಸಾಕಷ್ಟು ಕ್ರಿಕೆಟ್ ಆಡಿದೆ. ಆದ್ದರಿಂದ ಅಲ್ಲಿನ ಪರಿಸ್ಥಿತಿಗೆ ಆಟಗಾರರು ಬೇಗ ಒಗ್ಗಿಕೊಳ್ಳಲಿದ್ದಾರೆ. ಕಾರಣ ನಾವು ಇಂಗ್ಲೆಂಡ್​ನಲ್ಲಿ ಆಡುತ್ತಿರುವುದು ಇದೇ ಮೊದಲ ಬಾರಿಗೆ ಅಲ್ಲ, ಪರಿಸ್ಥಿತಿಗಳು ಹೇಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಮನಸ್ಥಿತಿ ಚೆನ್ನಾಗಿದ್ದರೆ ಎಲ್ಲವೂ ಸರಿಹೋಗುತ್ತದೆ ಸಾಮರ್ಥ್ಯದ ಬಗ್ಗೆ ಪುನರುಚ್ಚರಿಸಿದರು.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಬಗ್ಗೆ ತಂಡದ ಕೋಚ್​ ರವಿ ಶಾಸ್ತ್ರಿ ಕೂಡ ಪ್ರವಾಸದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ನಾವೆಲ್ಲರೂ ಟೆಸ್ಟ್ ಕ್ರಿಕೆಟ್ ಆಡುವುದಕ್ಕೆ ಬಹಳ ಹೆಮ್ಮೆ ಪಡುತ್ತೇವೆ. ಟೆಸ್ಟ್​ನಲ್ಲಿ ತಂಡ ಉತ್ತಮ ಲಯದಲ್ಲಿದೆ. ಕಠಿಣ ಪರಿಶ್ರಮದಿಂದ ಅದು ಇಲ್ಲಿಯವರೆಗೂ ಉಳಿದುಕೊಂಡು ಬಂದಿದೆ ಎಂದು

ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೂ ಮೊದಲು ನಾಲ್ಕು ದಿನ ಅಭ್ಯಾಸ ನಡೆಯಲಿದೆ. ತಂಡದ ಸಾಮರ್ಥ್ಯ ಹೆಚ್ಚಿಸಲು ಅಷ್ಟು ಸಮಯ ಸಾಕಾಗಲಿದೆ. ಈ ಅವಧಿಯಲ್ಲಿ ಯುವ ಆಟಗಾರರನ್ನು ಕೂಡ ಸಜ್ಜುಗೊಳಿಸಲು ಸಾಧ್ಯ’ ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.