ETV Bharat / bharat

ಭಾರತದಲ್ಲಿನ ತನ್ನ ರಾಯಭಾರಿ ವಾಪಸ್​​ ಕರೆಸಿಕೊಂಡ ಬಾಂಗ್ಲಾದೇಶ - Bangladesh Recalls Ambassadors

ನಾಗರಿಕ ಬಂಡಾಯದಿಂದ ಸಹಜ ಸ್ಥಿತಿಗೆ ಮರಳಿರುವ ಬಾಂಗ್ಲಾದೇಶ, ತನ್ನ ವಿದೇಶಾಂಗ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಭಾರತ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿರುವ ತನ್ನ ರಾಯಭಾರಿಗಳನ್ನು ವಾಪಸ್​ ಕರೆಸಿಕೊಳ್ಳುತ್ತಿದೆ.

author img

By ETV Bharat Karnataka Team

Published : 2 hours ago

BANGLADESH RECALLS ITS AMBASSADORS FROM INDIA
ಮೊಹಮದ್​ ಯೂನಸ್​ (ETV Bharat)

ನವದೆಹಲಿ: ಬಾಂಗ್ಲಾದೇಶದಲ್ಲಿ ನಾಗರಿಕ ಬಂಡಾಯದಿಂದ ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರ್ಕಾರ ಪತನಗೊಂಡ ಬಳಿಕ ರಚನೆಯಾದ ಮೊಹಮದ್​ ಯೂನಸ್​ ಸಾರಥ್ಯದ ಮಧ್ಯಂತರ ಸರ್ಕಾರವು ವಿದೇಶಾಂಗ ನೀತಿಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಭಾರತ ಸೇರಿದಂತೆ 5 ದೇಶಗಳಲ್ಲಿನ ತನ್ನ ರಾಯಭಾರಿಗಳನ್ನು ಗುರುವಾರ ವಾಪಸ್​ ಕರೆಸಿಕೊಂಡಿದೆ.

ಯಾವ ದೇಶಗಳಿಂದ ರಾಯಭಾರಿಗಳು ವಾಪಸ್?​: ನಾಲ್ಕು ದಿನಗಳ ಹಿಂದಷ್ಟೇ ಬ್ರಿಟನ್‌ನಲ್ಲಿರುವ ಹೈಕಮಿಷನರ್ ಸಯೀದಾ ಮುನಾ ತಸ್ನೀಮ್ ಅವರನ್ನು ವಾಪಸ್ ಕರೆಸಿಕೊಂಡ ಬೆನ್ನಲ್ಲೇ, ನವದೆಹಲಿಯಲ್ಲಿರುವ ಹೈಕಮಿಷನರ್​​ ಮಸ್ತಾಫಿಜುರ್​​ ರೆಹಮಾನ್​​, ಆಸ್ಟ್ರೇಲಿಯಾ ರಾಜಧಾನಿ ಕ್ಯಾನ್‌ಬೆರಾ, ಬೆಲ್ಜಿಯಂನ ರಾಜಧಾನಿ ಬ್ರುಸೆಲ್ಸ್, ಪೋರ್ಚುಗಲ್ ರಾಜಧಾನಿ ಲಿಸ್ಬನ್​​, ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಶಾಶ್ವತ ಪ್ರತಿನಿಧಿಗೆ ದೇಶಕ್ಕೆ ಹಿಂದಿರುವುವಂತೆ ಮೊಹಮದ್​ ಯೂನುಸ್​ ಸರ್ಕಾರದ ಮುಖ್ಯ ಸಲಹೆಗಾರರ ಸೂಚನೆ ನೀಡಿದ್ದಾರೆ.

ಭಾರತದಲ್ಲಿದ್ದ ಹೈಕಮೀಷನರ್​ ಮುಸ್ತಾಫಿಜುರ್​ ರೆಹಮಾನ್​ ಅವರನ್ನು ತಕ್ಷಣವೇ ಢಾಕಾಕ್ಕೆ ಹಿಂದಿರುಗಿ ವಿದೇಶಾಂಗ ಇಲಾಖೆಗೆ ವರದಿ ಮಾಡಿಕೊಳ್ಳುವಂತೆ ಸರ್ಕಾರ ಸೂಚಿಸಿದ್ದಾಗಿ ಭಾರತದಲ್ಲಿರುವ ಆ ದೇಶದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವರ್ಷದ ಜುಲೈನಲ್ಲಿ, ಬಾಂಗ್ಲಾದಲ್ಲಿ ಮೀಸಲಾತಿ ವಿರುದ್ಧದ ವಿದ್ಯಾರ್ಥಿ ಚಳುವಳಿ ಹಿಂಸಾಚಾರದ ಸ್ವರೂಪ ಪಡೆದು, 700ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ರಾಜಧಾನಿ ಢಾಕಾದಲ್ಲಿರುವ ಪ್ರಧಾನಿ ನಿವಾಸದ ಮೇಲೆ ಪ್ರತಿಭಟನಾಕಾರರು ದಾಳಿ ಮಾಡಿದ್ದರು. ಇದರಿಂದ ಬೆದರಿದ ಆಗಿನ ಪ್ರಧಾನಿ ಶೇಖ್ ಹಸೀನಾ ಆಗಸ್ಟ್ 5ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇಶ ತೊರೆದು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.

ಇದಾದ ಬಳಿಕ ರಚನೆಯಾದ ಪ್ರೊ.ಮೊಹಮದ್​ ಯೂನಸ್​ ಅವರ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಅಮೆರಿಕ, ರಷ್ಯಾ, ಜರ್ಮನಿ, ಜಪಾನ್​ ಸಂಯುಕ್ತ ಅರಬ್​ ಒಕ್ಕೂಟ, ಅರೇಬಿಯಾ, ಮಾಲ್ಡೀವ್ಸ್​ನಲ್ಲಿನ ಹೈಕಮೀಷನರ್​ಗಳನ್ನು ಸ್ವದೇಶಕ್ಕೆ ವಾಪಸ್​​ ಕರೆಸಿಕೊಂಡಿದೆ.

ಇದನ್ನೂ ಓದಿ: ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಪೋಲಿಯೊ ಹೆಚ್ಚಳ; ಲಸಿಕೆಗೆ ತಾಲಿಬಾನ್ ನಿಷೇಧ - Polio Cases

ETV Bharat Logo

Copyright © 2024 Ushodaya Enterprises Pvt. Ltd., All Rights Reserved.