ಚೆನ್ನೈ : ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿರುವ ಟೀಂ ಇಂಡಿಯಾ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಭರ್ಜರಿ ತಯಾರಿ ನಡೆಸಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 227 ರನ್ಗಳ ಸೋಲು ಕಂಡಿತ್ತು.
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡು ವಿಭಾಗದಲ್ಲೂ ಕಳಪೆ ಪ್ರದರ್ಶನ ನೀಡಿದ್ದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಪುಟಿದೇಳಲು ತಂಡದಲ್ಲಿ ಹಲವು ಬದಲಾವಣೆಯೊಂದಿಗೆ ಕಣಕ್ಕಿಳಿಯಲು ತಯಾರಿ ನಡೆಸಿದೆ ಎನ್ನಲಾಗುತ್ತಿದೆ.
-
#TeamIndia gear up for the second @Paytm #INDvENG Test at Chepauk! 💪👍 pic.twitter.com/Ohzn2mXyAv
— BCCI (@BCCI) February 11, 2021 " class="align-text-top noRightClick twitterSection" data="
">#TeamIndia gear up for the second @Paytm #INDvENG Test at Chepauk! 💪👍 pic.twitter.com/Ohzn2mXyAv
— BCCI (@BCCI) February 11, 2021#TeamIndia gear up for the second @Paytm #INDvENG Test at Chepauk! 💪👍 pic.twitter.com/Ohzn2mXyAv
— BCCI (@BCCI) February 11, 2021
ಭಾರತ ತಂಡಕ್ಕೆ ಐದನೇ ಬೌಲರ್ ಸಮಸ್ಯೆ ಎದ್ದು ಕಾಣುತ್ತಿದೆ. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಹೆಬ್ಬೆರಳಿನ ಮುರಿತದಿಂದಾಗಿ ಗಾಯಗೊಂಡಿದ್ದರಿಂದ ಈ ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಆಯ್ಕೆಯಾಗಿದ್ದ ಅಕ್ಷರ್ ಪಟೇಲ್ ಗಾಯಗೊಂಡ ಪರಿಣಾಮ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ.
ಇವರ ಸ್ಥಾನಕ್ಕೆ ಶಹಬಾಜ್ ನದೀಮ್ ಮತ್ತು ರಾಹುಲ್ ಚಹಾರ್ ಅವರನ್ನ ಆಯ್ಕೆ ಮಾಡಲಾಗಿತ್ತು. ಆಡುವ 11ರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ನದೀಮ್ ಮೊದಲ ಟೆಸ್ಟ್ ಪಂದ್ಯದಲ್ಲಿ ಫ್ಲಾಪ್ ಆಗಿದ್ದು, ಇದು ಟೀಂ ಇಂಡಿಯಾಗೆ ಮಾರಕವಾಗಿ ಪರಿಣಮಿಸಿದೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಯಾರಿಗೆ ಸ್ಥಾನ ನೀಡಬೇಕು ಎನ್ನುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವೇಗದ ಬೌಲಿಂಗ್ ವಿಭಾಗದಲ್ಲಿ ಬೂಮ್ರಾ ಮತ್ತು ಇಶಾಂತ್ ಶರ್ಮಾ ಉತ್ತಮ ಪ್ರದರ್ಶನ ನೀಡಿದ್ದು, ಎರಡನೇ ಪಂದ್ಯಕ್ಕೆ ಮೊಹಮ್ಮದ ಶಮಿ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ.
ಮೊಹಮ್ಮದ್ ಸೀರಾಜ್ ಕೂಡ ತಂಡದಲ್ಲಿದ್ದು, ಎರಡನೇ ಟೆಸ್ಟ್ ಪಂದ್ಯದಲ್ಲಿ ಇವರು ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಅಶ್ವಿನ್ ಮೊದಲ ಪಂದ್ಯದಲ್ಲಿ ತಮ್ಮ ಸ್ಪಿನ್ ಮೋಡಿ ಮಾಡಿದ್ದರು. ಇವರ ಜೊತೆ ಸ್ಪಿನರ್ ವಿಭಾಗದಲ್ಲಿ ಸ್ಥಾನ ಪಡೆದಿದ್ದ ನದೀಮ್ ಮತ್ತು ವಾಷಿಂಗ್ಟನ್ ಸುಂದರ್ ಆಂಗ್ಲ ಪಡೆಯ ಬ್ಯಾಟಿಂಗ್ ವಿಭಾಗವನ್ನು ಕಾಡುವಲ್ಲಿ ವಿಫಲವಾಗಿದ್ದರು. ಆದರೆ, ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ವಾಷಿಂಗ್ಟನ್ ಸುಂದರ್ ಆಲ್ ರೌಂಡರ್ ವಿಭಾಗದಲ್ಲಿ ಸ್ಥಾನ ಪಡೆಯುವುದು ಬಹುತೆಕ ಖಚಿತ.
ಓದಿ: 2ನೇ ಟೆಸ್ಟ್ಗೂ ಮುನ್ನ ಅಭ್ಯಾಸಕ್ಕಿಳಿದ ಅಕ್ಸರ್, ನದೀಮ್ಗೆ ಗೇಟ್ ಪಾಸ್ ಸಾಧ್ಯತೆ
ಗಾಯದಿಂದ ಚೇತರಿಸಿಕೊಂಡಿರುವ ಅಕ್ಷರ್ ಪಟೇಲ್ ಮತ್ತೆ ತಂಡಕ್ಕೆ ಮರಳುವ ವಿಶ್ವಾಸಲ್ಲಿದ್ದಾರೆ. ಕುಲದೀಪ್ ಯಾದವ್ ಮತ್ತು ರಾಹುಲ್ ಚಹಾರ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದರು ಕೂಡ ಆಶ್ಚರ್ಯವಿಲ್ಲ. ಟೀಂ ಇಂಡಿಯಾ 2 ರಿಂದ 3 ಆಲ್ ರೌಂಡರ್ಗಳನ್ನ ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗ ಸೇರಿ 2ನೇ ಟೆಸ್ಟ್ ಪಂದ್ಯಕ್ಕೆ ಬಲಾಢ್ಯ ತಂಡವನ್ನು ಕಣಕ್ಕಿಳಿಸುವ ಯೋಜನೆಯಲ್ಲಿದೆ.