ETV Bharat / sports

Ipl 2022 : ಮೊಣಕೈ ಗಾಯದಿಂದ ಸೂಪರ್​ ಜೈಂಟ್ಸ್​ ತಂಡದಿಂದ ಹೊರಗುಳಿಯಲಿರುವ ಮಾರ್ಕ್​ವುಡ್ - ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್​

ಒಂದು ವೇಳೆ ಮಾರ್ಕ್​ವುಡ್ ಅಲಭ್ಯವಾದರೆ ಸೂಪರ್ ಜೈಂಟ್ಸ್‌ಗೆ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಜೇಸನ್ ಹೋಲ್ಡರ್, ಆಸ್ಟ್ರೇಲಿಯಾ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಮತ್ತು ಶ್ರೀಲಂಕಾ ವೇಗಿ ದುಷ್ಮಂತ ಚಮೀರಾ ಅವರ ಮೇಲೆ ಬೌಲಿಂಗ್​ನ ಹೊರೆ ಬೀಳಬಹುದು ಎಂದು ಹೇಳಲಾಗುತ್ತಿದೆ..

England player mark wood not  available for Ipl 2022
Ipl 2022: ಮೊಣಕೈ ಗಾಯದಿಂದ ಸೂಪರ್​ ಜೈಂಟ್ಸ್​ ತಂಡದಿಂದ ಹೊರಗುಳಿಯಲಿರುವ ಮಾರ್ಕ್​ವುಡ್
author img

By

Published : Mar 18, 2022, 3:12 PM IST

ಕಳೆದ ವಾರ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದ ಇಂಗ್ಲೆಂಡ್ ವೇಗದ ಬೌಲರ್ ಮಾರ್ಕ್‌ವುಡ್ ಅವರು 2022ರ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ಇಎಸ್​​ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿದೆ.

ಲಖನೌ​ ಸೂಪರ್​ ಜೈಂಟ್ಸ್​​​ ತಂಡಕ್ಕೆ ಮಾರ್ಕ್​ವುಡ್ ಆಯ್ಕೆಯಾಗಿದ್ದು, ಕಳೆದ ವಾರ ನಾರ್ತ್​ ಸೌಂಡ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯವಾಡುತ್ತಿದ್ದ ವೇಳೆಯಲ್ಲಿ ಅವರ​ ಬಲ ಮೊಣಕೈಗೆ ಗಾಯವಾಗಿತ್ತು.

ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್​ನಿಂದ (ಇಸಿಬಿ) ವೈದ್ಯಕೀಯ ಮಾಹಿತಿ ಪಡೆದಿರುವ ಸೂಪರ್​ ಜೈಂಟ್ಸ್​ ತಂಡ, ಮಾರ್ಕ್​ವುಡ್ ಸದ್ಯಕ್ಕೆ ಬೌಲಿಂಗ್​ನಿಂದ ಹೊರಗುಳಿಯಲಿದ್ದಾರೆ ಎಂದಿದೆ ಎಂದು ಇಎಸ್​​ಪಿಎನ್ ಕ್ರಿಕ್ಇನ್ಫೋ ಹೇಳಿದೆ. ಮಾರ್ಕ್​ವುಡ್ ಬದಲಿಗೆ ಯಾರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.

ಫೆಬ್ರವರಿಯಲ್ಲಿ ನಡೆದ ಮೆಗಾ ಐಪಿಎಲ್ ಹರಾಜಿನಲ್ಲಿ ಮಾರ್ಕ್​​ವುಡ್ ಅವರನ್ನು ಲಖನೌ ಸೂಪರ್ ಜೈಂಟ್ಸ್ 7.5 ಕೋಟಿ ರೂಪಾಯಿಗೆ ಆಯ್ಕೆ ಮಾಡಿಕೊಂಡಿತ್ತು. ಕಳೆದ ವಾರ ನಡೆದ ವೆಸ್ಟ್​ ಇಂಡೀಸ್ ನಡುವಿನ ಟೆಸ್ಟ್ ಪಂದ್ಯದ ವೇಳೆ ಅವರಿಗೆ ಮೊಣಕೈ ನೋವು ಕಾಣಿಸಿತ್ತು.

5ನೇ ದಿನದ ಪಂದ್ಯಕ್ಕೂ ಮುನ್ನ ಫಿಟ್ನೆಸ್ ಪರೀಕ್ಷೆಯನ್ನು ತೆಗೆದುಕೊಂಡ ಅವರು ನೆಟ್​​ನಲ್ಲಿ ಆರು ಎಸೆತಗಳನ್ನು ಎಸೆದಿದ್ದು, ಈ ವೇಳೆ ಅತಿಯಾದ ನೋವು ಅನುಭವಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಯೋ ಯೋ ಟೆಸ್ಟ್​​ನಲ್ಲಿ ಫೇಲ್​ ಆದ್ರೂ ಐಪಿಎಲ್‌ನಲ್ಲಿ ಆಡಲು ಅನುಮತಿ ಪಡೆದ ಪೃಥ್ವಿ ಶಾ

ಒಂದು ವೇಳೆ ಮಾರ್ಕ್​ವುಡ್ ಅಲಭ್ಯವಾದರೆ ಸೂಪರ್ ಜೈಂಟ್ಸ್‌ಗೆ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಜೇಸನ್ ಹೋಲ್ಡರ್, ಆಸ್ಟ್ರೇಲಿಯಾ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಮತ್ತು ಶ್ರೀಲಂಕಾ ವೇಗಿ ದುಷ್ಮಂತ ಚಮೀರಾ ಅವರ ಮೇಲೆ ಬೌಲಿಂಗ್​ನ ಹೊರೆ ಬೀಳಬಹುದು ಎಂದು ಹೇಳಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.