ETV Bharat / sports

ಇಂಗ್ಲೆಂಡ್​ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ​ ಪಾಲ್​ ಕಾಲಿಂಗ್​ವುಡ್ ನೇಮಕ

ಕೆರಿಬಿಯನ್ ಪ್ರವಾಸದಲ್ಲಿ ಇಂಗ್ಲೆಂಡ್ ಟೆಸ್ಟ್​ ತಂಡವನ್ನು ಮುನ್ನಡೆಸಲು ಪ್ರಾಮಾಣಿಕವಾಗಿ ಉತ್ಸುಕನಾಗಿದ್ದೇನೆ, ಇದಕ್ಕಾಗಿ ಕಾಯಲಾಗುತ್ತಿಲ್ಲ ಎಂದು ಕಾಲಿಂಗ್​ವುಡ್​ ಇಸಿಬಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ..

England names Collingwood as coach for West Indies tests
ಇಂಗ್ಲೆಂಡ್ ಮುಖ್ಯ ಕೋಚ್​ ಪಾಲ್ ಕಾಲಿಂಗ್​ವುಡ್​
author img

By

Published : Feb 7, 2022, 7:45 PM IST

ಲಂಡನ್ : ಇಂಗ್ಲೆಂಡ್​ ಮಾಜಿ ಆಲ್​ರೌಂಡರ್​ ಪಾಲ್​ ಕಾಲಿಂಗ್​ವುಡ್​ ಅವರನ್ನು ಇಸಿಬಿ ಮುಂದಿನ ತಿಂಗಳು ವೆಸ್ಟ್​ ಇಂಡೀಸ್​ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟೆಸ್ಟ್​ ಸರಣಿಗೆ ಹಂಗಾಮಿ ಮುಖ್ಯ ಕೋಚ್​ ಆಗಿ ಸೋಮವಾರ ನೇಮಿಸಿದೆ.

ಆಸ್ಟ್ರೇಲಿಯಾದಲ್ಲಿ 0-4ರಲ್ಲಿ ಆ್ಯಶಸ್​ ಕಳೆದುಕೊಂಡ ಬೆನ್ನಲ್ಲೇ ಕೋಚ್​ ಕ್ರಿಸ್​ ಸಿಲ್ವರ್​ವುಡ್​ ಅವರನ್ನು ಕೋಚ್​ ಸ್ಥಾನದಿಂದ ಕೆಳಗಿಳಿಸಿತ್ತು. ಇದೀಗ ಸಹಾಯಕ ಕೋಚ್​ ಆಗಿದ್ದ ಕಾಲಿಂಗ್​ವುಡ್​​ರನ್ನು ಮುಂದಿನ ಸರಣಿಗೆ ತಾತ್ಕಾಲಿಕ ಮುಖ್ಯ ಕೋಚ್​ ಆಗಿ ನೇಮಕ ಮಾಡಲಾಗಿದೆ.

45 ವರ್ಷದ ಕಾಲಿಂಗ್​ವುಡ್​ ಕಳೆದ ತಿಂಗಳು ಇಂಗ್ಲೆಂಡ್​ ಟಿ-20 ತಂಡದ ಮುಖ್ಯಕೋಚ್​ ಆಗಿ ನೇಮಕವಾಗಿದ್ದರು. ಪ್ರಸ್ತುತ ಬಾರ್ಬಡೋಸ್​ನಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಅವರು ಫೆಬ್ರವರಿ 25ರಂದು ಆಟಗಾರರು ಆಂಟಿಗುವಾಗೆ ತೆರಳಿದ ನಂತರ ತಂಡಕ್ಕೆ ಸೇರಿಕೊಳ್ಳಲಿದ್ದಾರೆ.

ಕೆರಿಬಿಯನ್ ಪ್ರವಾಸದಲ್ಲಿ ಇಂಗ್ಲೆಂಡ್ ಟೆಸ್ಟ್​ ತಂಡವನ್ನು ಮುನ್ನಡೆಸಲು ಪ್ರಾಮಾಣಿಕವಾಗಿ ಉತ್ಸುಕನಾಗಿದ್ದೇನೆ, ಇದಕ್ಕಾಗಿ ಕಾಯಲಾಗುತ್ತಿಲ್ಲ ಎಂದು ಕಾಲಿಂಗ್​ವುಡ್​ ಇಸಿಬಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಂಗ್ಲೆಂಡ್​ ಪರ ಟೆಸ್ಟ್​ ಪಂದ್ಯವನ್ನಾಡುವುದು ಅತ್ಯುನ್ನತವಾದ ಗೌರವವಾಗಿದೆ. ವಿಶೇಷವಾದದನ್ನು ಸಾಧಿಸಲು ಆಟಗಾರರಿಗೆ ಸ್ಪಷ್ಟತೆ, ನಿರ್ದೇಶನ ಮತ್ತು ಪ್ರೋತ್ಸಾಹ ನೀಡುವುದು ನನ್ನ ಉದ್ದೇಶವಾಗಿದೆ. ನಾನು ಈಗಾಗಲೇ ನಾಯಕ ರೂಟ್​ ಮತ್ತು ಉಪನಾಯಕ ಬೆನ್​ ಸ್ಟೋಕ್ಸ್​ ಜೊತೆಗೆ ಮಾತನಾಡಿದ್ದೇನೆ. ಅವರಿಬ್ಬರು ತಂಡವನ್ನು ಹೊಸ ಋತುವಿನಲ್ಲಿ ಮುಂದಕ್ಕೆ ಕೊಂಡೊಯ್ಯಲು ಉತ್ಸುಕರಾಗಿದ್ದಾರೆ ಎಂದು ಕಾಲಿಂಗ್​ವುಡ್​ ಹೇಳಿದ್ದಾರೆ.

ಇದನ್ನೂ ಓದಿ:ಟಿ-20 ವಿಶ್ವಕಪ್​ 2022: ಬುಕ್ಕಿಂಗ್​ ಆರಂಭವಾದ ಕೆಲವೇ ಗಂಟೆಗಳಲ್ಲಿ ಇಂಡೋ - ಪಾಕ್ ಟಿಕೆಟ್​ ಸೋಲ್ಡ್ ​ಔಟ್!​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.