ETV Bharat / sports

Eng vs NZ 2nd Test: ಕಿವೀಸ್​ನ ಸ್ಯಾಂಟ್ನರ್ ಔಟ್​, ವಿಲಿಯಮ್ಸನ್ ಲಭ್ಯತೆ ಕೂಡ ಡೌಟ್​! - ನ್ಯೂಜಿಲ್ಯಾಂಡ್​ ತಂಡದ ಇಂಗ್ಲೆಂಡ್​ ಪ್ರವಾಸ

ಲಾರ್ಡ್ಸ್‌ನಲ್ಲಿ ಕಣಕ್ಕಿಳಿದಿದ್ದ ಎಲ್ಲ ವೇಗದ ಬೌಲರ್‌ಗಳೂ ಕೂಡ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್​ ಪಂದ್ಯದಲ್ಲಿ ಆಡುವುದಿಲ್ಲ. ಟ್ರೆಂಟ್ ಬೌಲ್ಟ್ ಲಭ್ಯರಿದ್ದು ತಂಡಕ್ಕೆ ಹಿಂದಿರುಗುವ ಸಾಧ್ಯತೆಯಿದೆ. ಸ್ಯಾಂಟ್ನರ್ ಗಾಯದಿಂದ ಹೊರಗುಳಿಯಲಿದ್ದು, ಕೇನ್ ವಿಲಿಯಮ್ಸನ್ ಲಭ್ಯತೆ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.

Eng vs NZ 2nd Test
Eng vs NZ 2nd Test
author img

By

Published : Jun 9, 2021, 3:42 AM IST

ಎಡ್ಜ್‌ಬಾಸ್ಟನ್‌(ಯುಕೆ​) : ಕಿವೀಸ್​ ನಾಯಕ ಕೇನ್ ವಿಲಿಯಮ್ಸನ್ ಎಡ ಮೊಣಕೈ ಗಾಯದ ಬಗ್ಗೆ ನಿಗಾ ವಹಿಸಲಾಗಿದ್ದು, ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಅವರ ಲಭ್ಯತೆಯ ಬಗ್ಗೆ ಇಂದು (ಬುಧವಾರ) ನಿರ್ಧರಿಸಲಾಗುವುದು ಎಂದು ನ್ಯೂಜಿಲ್ಯಾಂಡ್ ಮುಖ್ಯ ಕೋಚ್ ಗ್ಯಾರಿ ಸ್ಟೀಡ್ ಮಂಗಳವಾರ ಹೇಳಿದ್ದಾರೆ.

ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಡ್ರಾನಲ್ಲಿ ಕೊನೆಗೊಂಡಿದೆ. ಹೀಗಾಗಿ ನಾಳೆ ಎಡ್ಜ್‌ಬಾಸ್ಟನ್‌ನಲ್ಲಿ ಆರಂಭವಾಗಲಿರುವ 2ನೇ ಟೆಸ್ಟ್​ ಪಂದ್ಯವು ಎರಡೂ ತಂಡಗಳಿಗೆ ಸರಣಿ ಗೆಲುವಿಗೆ ನಿರ್ಣಾಯಕವಾಗಲಿದೆ. ಮೊದಲ ಟೆಸ್ಟ್ ಸಮಯದಲ್ಲಿ ಎಡಗೈ ತೋರು ಬೆರಳಿಗೆ ಗಾಯ ಮಾಡಿಕೊಂಡಿರುವ ಕಿವೀಸ್​​ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಎರಡನೇ ಟೆಸ್ಟ್​ನಿಂದ ಹೊರಗುಳಿದಿದ್ದಾರೆ ಎಂದು ಕೋಚ್ ಹೇಳಿದ್ದಾರೆ.

ಲಾರ್ಡ್ಸ್‌ ಟೆಸ್ಟ್​ನಲ್ಲಿದ್ದ ಎಲ್ಲಾ ವೇಗದ ಬೌಲರ್‌ಗಳೂ ಕೂಡ ಈ ಪಂದ್ಯದಲ್ಲಿ ಆಡುವುದಿಲ್ಲ. ಟ್ರೆಂಟ್ ಬೌಲ್ಟ್ ಲಭ್ಯರಿದ್ದು ತಂಡಕ್ಕೆ ಹಿಂದಿರುಗುವ ಸಾಧ್ಯತೆಯಿದೆ. ಸ್ಯಾಂಟ್ನರ್ ಗಾಯದಿಂದ ಹೊರಗುಳಿಯಲಿದ್ದು, ಕೇನ್ ವಿಲಿಯಮ್ಸನ್ ಲಭ್ಯತೆ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಬ್ಲ್ಯಾಕ್‌ಕ್ಯಾಪ್ಸ್‌ ಅಧಿಕೃತ ಟ್ವೀಟ್ ಮೂಲಕ ತಿಳಿಸಿದೆ.

ಮೊದಲ ಟೆಸ್ಟ್‌ನಲ್ಲಿ 13 ಮತ್ತು 1 ರನ್​ ದಾಖಲಿಸಿದ್ದ ವಿಲಿಯಮ್ಸನ್ ಬ್ಯಾಟಿಂಗ್​ನಲ್ಲಿ ವಿಫಲರಾಗಿದ್ದರು. ನ್ಯೂಜಿಲೆಂಡ್ ಟಿಮ್ ಸೌಥಿ, ನೀಲ್ ವಾಗ್ನರ್, ಕೈಲ್ ಜೇಮಿಸನ್ ಮತ್ತು ಕಾಲಿನ್ ಡಿ ಗ್ರ್ಯಾಂಡ್‌ಹೋಮ್‌ರನ್ನು ಕಣಕ್ಕಿಳಿಸಿತ್ತು.ಈ ಎಲ್ಲ ಆಟಗಾರರು ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಸ್ಟೀಡ್ ಖಚಿತಪಡಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಸರಣಿಯ ನಂತರ, ನ್ಯೂಜಿಲ್ಯಾಂಡ್ ಜೂನ್ 18ರಿಂದ ಸೌತಾಂಪ್ಟನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಭಾರತದ ವಿರುದ್ಧ ಸೆಣೆಸಲಿದೆ.

ಇದನ್ನೂ ಓದಿ: ಕೊಹ್ಲಿ ಜೊತೆಗೆ WTC ಟಾಸ್​ಗಾಗಿ ಹೆಜ್ಜೆ ಹಾಕುವುದು ಹರ್ಷದಾಯಕ ವಿಚಾರ: ವಿಲಿಯಮ್ಸನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.