ETV Bharat / sports

ಕೊಹ್ಲಿ ವಿಕೆಟ್​ ಪಡೆಯಲು ಮಾಡಿದ್ದ ಪ್ಲಾನ್ ತುಂಬಾ ಸಿಂಪಲ್​: ರಾಬಿನ್ಸನ್​ - ಲೀಡ್ಸ್​ ಟೆಸ್ಟ್​ನಲ್ಲಿ ಭಾರತಕ್ಕೆ ಸೋಲು

2 ವಿಕೆಟ್​ ಕಳೆದುಕೊಂಡು 215ರನ್​ಗಳಿಸಿದ್ದ ಭಾರತ ತಂಡವನ್ನು ಶನಿವಾರ ಆಂಗ್ಲ ಬೌಲರ್​ಗಳು ಕೇವಲ 19.3 ಓವರ್​ಗಳಲ್ಲಿ 63 ರನ್​ ಬಿಟ್ಟುಕೊಟ್ಟು 8 ವಿಕೆಟ್​ ಪಡೆದರು. ಇದರಲ್ಲಿ ರಾಬಿನ್ಸನ್​ ಪಾಲು 4 ವಿಕೆಟ್​. ಒಟ್ಟಾರೆ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಸೇರಿದಂತೆ 65 ರನ್​ ನೀಡಿ 5 ವಿಕೆಟ್​ ಪಡೆದರು. ಮೊದಲ ಇನ್ನಿಂಗ್ಸ್​ನಲ್ಲೂ 16 ರನ್​ ನೀಡಿ 2 ವಿಕೆಟ್ ಪಡೆದಿದ್ದರು. 7 ವಿಕೆಟ್ ಪಡೆದು ವೃತ್ತಿ ಜೀವನದ ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಮೊದಲ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

Ollie Robinson reveals 'simple plan' to get Virat Kohli's wicket
ಒಲ್ಲಿ ರಾಬಿನ್​ಸನ್​
author img

By

Published : Aug 28, 2021, 7:20 PM IST

ಲೀಡ್ಸ್: ಭಾರತದ ವಿರುದ್ಧ 3ನೇ ಟೆಸ್ಟ್​ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿ ಇಂಗ್ಲೆಂಡ್​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ವೇಗಿ ಒಲ್ಲಿ ರಾಬಿನ್ಸನ್​ ಭಾರತ ತಂಡದ ನಾಯಕ ವಿರಾಟ್​​ ಕೊಹ್ಲಿ ವಿಕೆಟ್ ಪಡೆಯಲು ಮಾಡಿದ್ದ ಯೋಜನೆಯನ್ನು ಬಹಿರಂಗಪಡಿಸಿದ್ದಾರೆ.

2 ವಿಕೆಟ್​ ಕಳೆದುಕೊಂಡು 215ರನ್​ಗಳಿಸಿದ್ದ ಭಾರತ ತಂಡವನ್ನು ಶನಿವಾರ ಆಂಗ್ಲ ಬೌಲರ್​ಗಳು ಕೇವಲ 19.3 ಓವರ್​ಗಳಲ್ಲಿ 63 ರನ್​ ಬಿಟ್ಟುಕೊಟ್ಟು 8 ವಿಕೆಟ್​ ಪಡೆದರು. ಇದರಲ್ಲಿ ರಾಬಿನ್ಸನ್​ ಪಾಲು 4 ವಿಕೆಟ್​. ಒಟ್ಟಾರೆ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಸೇರಿದಂತೆ 65 ರನ್​ ನೀಡಿ 5 ವಿಕೆಟ್​ ಪಡೆದರು. ಮೊದಲ ಇನ್ನಿಂಗ್ಸ್​ನಲ್ಲೂ 16 ರನ್​ ನೀಡಿ 2 ವಿಕೆಟ್ ಪಡೆದಿದ್ದರು. 7 ವಿಕೆಟ್ ಪಡೆದು ವೃತ್ತಿ ಜೀವನದ ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಮೊದಲ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

" ಪ್ರಾಮಾಣಿಕವಾಗಿ ಹೇಳುತ್ತೇನೆ ಇಂಗ್ಲೆಂಡ್​ ಪರ ಆಡಿ ನನ್ನ ಮೊದಲ ಗೆಲುವಿನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆಯುವುದು ಕನಸಾಗಿತ್ತು. ನಾನು ಇಲ್ಲಿ ಬೌಲಿಂಗ್ ಮಾಡುವುದಕ್ಕೆ ಮತ್ತು ಇಲ್ಲಿನ ಪರಿಸ್ಥಿತಿಯನ್ನು ಚೆನ್ನಾಗಿ ಬಳಸಿಕೊಳ್ಳುವುದಕ್ಕೆ ತುಂಬಾ ಆನಂದಿಸುತ್ತೇನೆ. ಇಲ್ಲಿ 5 ವಿಕೆಟ್​ ಪಡೆದಿರುವುದು ನಾನು ಸಂತೋಷವಾಗಿದ್ದೇನೆ" ಎಂದು ರಾಬಿನ್​ಸನ್​ ಪಂದ್ಯದ ನಂತರ ಹೇಳಿದ್ದಾರೆ.

ಇನ್ನು ಕೊಹ್ಲಿ ವಿಕೆಟ್​ ಪಡೆದ ಬಗ್ಗೆ ಕೇಳಿದ್ದಕ್ಕೆ, ಕೊಹ್ಲಿ ವಿಕೆಟ್​ ಪಡೆದದ್ದು ತುಂಬಾ ಸಂತೋಷ ತಂದಿದೆ. ಅವರು ಆ ಓವರ್​ನಲ್ಲಿ ಎರಡು ಬೌಂಡರಿ ಬಾರಿಸಿದ್ದರು, ಅದಕ್ಕಾಗಿ ಸಿಂಪಲ್ ಪ್ಲಾನ್​ ಮಾಡಿದ್ದೆ, ಅದೇನೆಂದರೆ 4ನೇ ಮತ್ತು 5ನೇ ಸ್ಟಂಪ್​ನಲ್ಲಿ ಚೆಂಡನ್ನು ಎಸೆದರೆ ಬ್ಯಾಟ್​ಗೆ ತಾಗಬಹುದು ಅಂದುಕೊಂಡಿದ್ದೆ, ಕೊಹ್ಲಿ ನಾನಂದುಕೊಂಡದ್ದನ್ನು ಮಾಡಿದರು ಎಂದು ಭಾರತೀಯ ನಾಯಕನ ವಿಕೆಟ್ ಪಡೆಯಲು ಮಾಡಿದ ಯೋಜನೆಯನ್ನು ವಿವರಿಸಿದ್ದಾರೆ.

ಇದನ್ನು ಓದಿ: ರಾಬಿನ್ಸನ್​ 5 ವಿಕೆಟ್​: ಭಾರತಕ್ಕೆ ಇನ್ನಿಂಗ್ಸ್ ಮತ್ತು 76ರನ್​ಗಳ ಸೋಲು, ಸರಣಿ 1-1ರಲ್ಲಿ ಸಮಬಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.