ಟ್ರಿನಿಡಾಡ್ : 19 ವರ್ಷದೊಳಗಿನವರ ವಿಶ್ವಕಪ್ ಪಂದ್ಯಾವಳಿ (Under-19 World Cup) ನಡೆಯುತ್ತಿದೆ. ಟ್ರಿನಿಡಾಡ್ನಲ್ಲಿ ಜಿಂಬಾಬ್ವೆ ಹಾಗೂ ಐರ್ಲೆಂಡ್ ತಂಡಗಳ ನಡುವೆ ಸೆಮಿಫೈನಲ್ ಪಂದ್ಯದ ವೇಳೆಯಲ್ಲಿ ಲಘು ಭೂಕಂಪನ ಸಂಭವಿಸಿದೆ.
ಅಚ್ಚರಿಯ ವಿಚಾರವೆಂದರೆ, ಕಾಮೆಂಟರಿ ಬಾಕ್ಸ್ನಲ್ಲಿ ಕುಳಿತಿದ್ದವರಿಗೆ ಲಘು ಭೂಕಂಪನದ ಅನುಭವವಾಗಿದೆ. ಆದರೆ, ಕ್ರಿಕೆಟ್ ಪಂದ್ಯ ಆಡುತ್ತಿದ್ದವರಿಗೆ ಈ ಭೂಕಂಪನದ ಅನುಭವ ಆಗಿಲ್ಲ ಎಂದು ತಿಳಿದು ಬಂದಿದೆ.
-
The #U19CWC match between Ireland and Zimbabwe was rocked by a mild earthquake off the coast of Trinidad 😲pic.twitter.com/OSXYbH3r1U
— ESPNcricinfo (@ESPNcricinfo) January 29, 2022 " class="align-text-top noRightClick twitterSection" data="
">The #U19CWC match between Ireland and Zimbabwe was rocked by a mild earthquake off the coast of Trinidad 😲pic.twitter.com/OSXYbH3r1U
— ESPNcricinfo (@ESPNcricinfo) January 29, 2022The #U19CWC match between Ireland and Zimbabwe was rocked by a mild earthquake off the coast of Trinidad 😲pic.twitter.com/OSXYbH3r1U
— ESPNcricinfo (@ESPNcricinfo) January 29, 2022
ಕಾಮೆಂಟರಿ ಬಾಕ್ಸ್ನಲ್ಲಿದ್ದ ಐಸಿಸಿ ಕಮೆಂಟೇಟರ್ ಆ್ಯಂಡ್ರೂ ಲಿಯೋನಾರ್ಡ್ ನಾವು ಭೂಕಂಪನವಾಗಿದೆ ಎಂದು ನಂಬುತ್ತೇವೆ. ನಮ್ಮ ಹಿಂದೆ ರೈಲು ಹೋದ ಹಾಗೆ ನಮಗೆ ಅನ್ನಿಸಿತು ಎಂದು ಭೂಕಂಪದ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ಟ್ರಿನಿಡಾಡ್ ಸುತ್ತಮುತ್ತ ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲಾಗಿದ್ದು, ಯಾವುದೇ ಹಾನಿಯ ಬಗ್ಗೆ ಈವರೆಗೂ ವರದಿಯಾಗಿಲ್ಲ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ