ETV Bharat / sports

ಒಂದೇ ಓವರ್​​ನಲ್ಲಿ 6 ವಿಕೆಟ್​​​: ಪಾಕ್​​​ ವಿರುದ್ಧ ಹೊಸ ಇತಿಹಾಸ ಬರೆದ ಭಾರತ ಮೂಲದ ಹರ್ಷಿತ್​​​ ಸೇಠ್​! - ಪಾಕ್​ ವಿರುದ್ಧದ ಪಂದ್ಯದಲ್ಲಿ ಹರ್ಷಿತ್ ಸೇಠ್​

ಅಂಡರ್​​-19 ಕ್ರಿಕೆಟ್​​ ಟೂರ್ನಿವೊಂದರಲ್ಲಿ ಒಂದೇ ಓವರ್​​ನಲ್ಲಿ ಆರು ವಿಕೆಟ್​ ಪಡೆದುಕೊಳ್ಳುವ ಮೂಲಕ ಭಾರತ ಮೂಲದ ಬೌಲರ್​​ವೋರ್ವ ಐತಿಹಾಸಿಕ ಸಾಧನೆ ಮಾಡಿದ್ದಾರೆ.

Double hat trick by Harshit Seth
Double hat trick by Harshit Seth
author img

By

Published : Dec 14, 2021, 3:28 AM IST

ದುಬೈ: ಒಂದೇ ಓವರ್​​​ನಲ್ಲಿ ಆರು ಸಿಕ್ಸರ್​​ ಬಾರಿಸಿರುವ ಬ್ಯಾಟರ್​ಗಳ ಬಗ್ಗೆ ನಿವೆಲ್ಲರೂ ಕೇಳಿದ್ದೀರಿ. ಆದರೆ, ಭಾರತ ಮೂಲದ ಬೌಲರ್​​​​ ಒಂದೇ ಓವರ್​ನಲ್ಲಿ ಆರು ವಿಕೆಟ್​ ಪಡೆದು ಹೊಸ ಸಾಧನೆ ಮಾಡಿದ್ದಾರೆ. ದುಬೈನಲ್ಲಿ 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತ ಮೂಲದ ಹರ್ಷಿತ್​​ ಸೇಠ್​​, ಪಾಕಿಸ್ತಾನ ತಂಡದ ವಿರುದ್ಧದ ಪಂದ್ಯವೊಂದರಲ್ಲಿ 6 ವಿಕೆಟ್​​ ಕಬಳಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಯುಎಇಯಲ್ಲಿ 19 ವರ್ಷದೊಳಗಿನವರ ಕ್ರಿಕೆಟ್​ ಸರಣಿ ಆಯೋಜನೆಗೊಂಡಿತ್ತು. ದುಬೈ ಕ್ರಿಕೆಟ್​​​ ಕೌನ್ಸಿಲ್​ ಪರ ಆಡಿದ ಹರ್ಷಿತ್​​​​​ ಪಾಕಿಸ್ತಾನದ ಹೈದರಾಬಾದ್​​ ಹಾಕ್ಸ್​​​​​ ಅಕಾಡೆಮಿ ತಂಡದ ವಿರುದ್ಧ ಈ ಸಾಧನೆ ಮಾಡಿದ್ದಾರೆ. ನವೆಂಬರ್​​ 28ರಂದು ಈ ಪಂದ್ಯ ನಡೆದಿದ್ದು, ಇದೀಗ ಸುದ್ದಿ ಬೆಳಕಿಗೆ ಬಂದಿದೆ.

ಹೈದರಾಬಾದ್​ ಹಾಕ್ಸ್​​ ಅಕಾಡೆಮಿ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್​​ನಲ್ಲಿ 6 ವಿಕೆಟ್​ ಸೇರಿದಂತೆ ಒಟ್ಟು 8 ವಿಕೆಟ್​ ಪಡೆದುಕೊಂಡಿರುವ ಹರ್ಷಿತ್​​​​ ಸೇಠ್​, ಎದುರಾಳಿ ತಂಡ ಕೇವಲ 44ರನ್​​​​ಗಳಿಗೆ ಆಲೌಟ್​ ಮಾಡುವಲ್ಲಿ ಯಶಸ್ವಿಯಾಗಿದ್ದರು. ಎಡಗೈ ಸ್ಪಿನ್ನರ್​​ ಆಗಿರುವ ಹರ್ಷಿತ್​​​ ಈ ಪಂದ್ಯದಲ್ಲಿ ನಾಲ್ವರು ಬ್ಯಾಟರ್​​ಗಳನ್ನ ಕ್ಲೀನ್​ ಬೌಲ್ಡ್​​ ಮಾಡಿದ್ದು, ಮೂವರು ಪ್ಲೇಯರ್​​ಗಳನ್ನ ಎಲ್​ಬಿ ಬಲೆಗೆ ಹಾಗೂ ಮತ್ತೋರ್ವ ಬ್ಯಾಟರ್​ ಕ್ಯಾಚ್​​ ನೀಡಿದ್ದಾರೆ.

ದುಬೈನ ಅಜ್ಮಾನ್​​ ಕ್ರಿಕೆಟ್​ ಕೌನ್ಸಿಲ್​ ಈ ಕ್ರಿಕೆಟ್​​ ಟೂರ್ನಿ ಆಯೋಜನೆ ಮಾಡಿದ್ದು, ಅಂಡರ್​-19 ಕಾರ್ವಾನ್​ ಗ್ಲೋಬಲ್​​ ಟಿ-20 ಲೀಗ್​​ನಲ್ಲಿ ಆರು ತಂಡಗಳು ಭಾಗಿಯಾಗಿದ್ದವು. ತಮ್ಮ ಸಾಧನೆ ಬಗ್ಗೆ ಮಾತನಾಡಿರುವ ಹರ್ಷಿತ್​, ನಾನು ಇದನ್ನ ನಿರೀಕ್ಷೆ ಮಾಡಿರಲಿಲ್ಲ. ಓರ್ವ ಬೌಲರ್​​ ಆಗಿ ಒಂದೇ ಓವರ್​​ನಲ್ಲಿ ಆರು ವಿಕೆಟ್​ ತೆಗೆದುಕೊಳ್ಳುತ್ತೇನೆಂದು ಎಂದಿಗೂ ಭಾವಿಸಿರಲಿಲ್ಲ. ನನ್ನ ಮೇಲೆ ಯಾವುದೇ ರೀತಿಯ ಒತ್ತಡ ಇರಲಿಲ್ಲ. ಉತ್ತಮ ಲೈನ್​ನಲ್ಲಿ ಬೌಲಿಂಗ್​ ಮಾಡಿದ್ದರಿಂದ ವಿಕೆಟ್​ ಪಡೆದುಕೊಳ್ಳಲು ಸಹಾಯವಾಯಿತು ಎಂದರು.

ಇದನ್ನೂ ಓದಿರಿ: ಏಕದಿನ ತಂಡದಲ್ಲಿ ಶಿಖರ್ ಧವನ್​ಗೆ​ ಅವಕಾಶ ನೀಡುವುದರಲ್ಲಿ ಅರ್ಥವಿಲ್ಲ: ಸಬಾ ಕರೀಮ್

ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಯಾವುದೇ ಆಟಗಾರ ಒಂದೇ ಓವರ್​​ನಲ್ಲಿ ಆರು ವಿಕೆಟ್​ ಪಡೆದುಕೊಂಡಿರುವ ಸಾಧನೆ ಮಾಡಿಲ್ಲ. ಆದರೆ, 2017ರ ಜನವರಿಯಲ್ಲಿ ಆಸ್ಟ್ರೇಲಿಯಾದ ಅಲೆಡ್​ ಕ್ಯಾರಿ ಗೋಲ್ಡನ್​ ಪಾಯಿಂಟ್​ ಕ್ರಿಕೆಟ್​ ಕ್ಲಬ್​​ ಪರ ಆಡುವಾಗ ಒಂದೇ ಓವರ್​​ನಲ್ಲಿ 6 ವಿಕೆಟ್​ ಪಡೆದುಕೊಂಡಿರುವ ಸಾಧನೆ ಮಾಡಿದ್ದಾರೆ. ಇದಕ್ಕೂ ಮುಂಚಿತವಾಗಿ 1951ರಲ್ಲಿ ಜಿ ಸಿರೆಟ್​​ ಮತ್ತು 1930ರಲ್ಲಿ ವೈಎಸ್​​ ರಾಮಸ್ವಾಮಿ ಒಂದೇ ಓವರ್​ನಲ್ಲಿ 6 ವಿಕೆಟ್​ ಪಡೆದುಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.