ETV Bharat / sports

ಜನ ಯಾಕೆ ಬುಮ್ರಾ ಕಮ್​ಬ್ಯಾಕ್ ಮಾಡಿದ್ದಾರೆಂದು ಹೇಳ್ತಿದ್ದಾರೋ ಗೊತ್ತಾಗ್ತಿಲ್ಲ: ಕೆ.ಎಲ್​ ರಾಹುಲ್ - Jaspreet Bumrah

ಜಸ್ಪೀತ್ ಬುಮ್ರಾ ಕಮ್​ಬ್ಯಾಕ್ ಮಾಡಿರುವ ಬಗ್ಗೆ ಹೇಗನ್ನಿಸುತ್ತಿದೆ ಎಂಬ ಪ್ರಶ್ನೆಗೆ ಕೆ.ಎಲ್ ರಾಹುಲ್ ಆಶ್ಚರ್ಯ ವ್ಯಕ್ತಪಡಿಸಿದರು.

Don't know why people are saying Bumrah has made comeback: KL Rahul
ಭಾರತ V/ S ಇಂಗ್ಲೆಂಡ್ ಟೆಸ್ಟ್
author img

By

Published : Aug 9, 2021, 11:02 AM IST

ನಾಟಿಂಗ್ ​ಹ್ಯಾಮ್​ (ಇಂಗ್ಲೆಂಡ್): ಜಸ್ಪ್ರೀತ್ ಬುಮ್ರಾ ವಿಶ್ವದರ್ಜೆಯ ಬೌಲರ್ ಅನ್ನೋದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ಹಾಗಿರುವಾಗ, ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​​ ಪಂದ್ಯದಲ್ಲಿ ಅವರು 9 ವಿಕೆಟ್ ಪಡೆದಿರುವುದನ್ನು ಕಮ್​ಬ್ಯಾಕ್ ಅಂತ ಯಾಕೆ ಹೇಳುತ್ತಿದ್ದಾರೆ ಎಂದು ನನಗೆ ಗೊತ್ತಾಗುತ್ತಿಲ್ಲ ಎಂದು ಕೆ.ಎಲ್​ ರಾಹುಲ್ ಹೇಳಿದ್ದಾರೆ.

ಭಾರತ -ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ ಡ್ರಾ ಆದ ಬಳಿಕ ಮಾತನಾಡಿದ ಅವರು, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ನ್ಯೂಜಿಲೆಂಡ್ ವಿರುದ್ದ ಚೆನ್ನಾಗಿ ಆಡಿದರೂ, ಇಂಗ್ಲೆಂಡ್ ವಿರುದ್ಧ ಭಾರತದಲ್ಲಿ ನಡೆದ ಒಂದೆರಡು ಟೆಸ್ಟ್ ಪಂದ್ಯಗಳಲ್ಲಿ ಅವರು ಉತ್ತಮ ಪ್ರದರ್ಶನ ತೋರಿರಲಿಲ್ಲ. ಇದಕ್ಕೆ ಕೆಲವೊಂದು ಕಾರಣಗಳಿವೆ ಎಂದಿದ್ದಾರೆ.

ಇದನ್ನೂ ಓದಿ : ಭಾರತದ ಗೆಲುವಿನ ಆಸೆಗೆ ಮುಳ್ಳಾದ ಮಳೆರಾಯ: ಮೊದಲ ಟೆಸ್ಟ್ ನೀರಸ ಡ್ರಾನಲ್ಲಿ ಅಂತ್ಯ​

ಎಲ್ಲಾ ಸಮಯ, ಎಲ್ಲಾ ಸಂದರ್ಭ, ಎಲ್ಲಾ ಪಂದ್ಯಗಳಲ್ಲೂ ಬುಮ್ರಾ ತನ್ನನ್ನು ತಾನು ಪ್ರೂವ್ ಮಾಡಿದ್ದಾರೆ, ಅವರು ನಮ್ಮ ನಂಬರ್ ಒನ್ ಬೌಲರ್. ಕ್ರಿಕೆಟ್ ಆಡಲು ಪ್ರಾರಂಭಿಸಿದಾಗಿನಿಂದ ಅವರು ಮಾಡಿರುವುದರಲ್ಲಿ ನಮಗೆ ಖುಷಿಯಿದೆ ಎಂದಿದ್ದಾರೆ ರಾಹುಲ್.

ವಿರಾಟ್​ ಕೊಹ್ಲಿ ಪಡೆಗೆ ಆತಿಥೇಯ ಆಂಗ್ಲರು 209 ರನ್​ಗಳ ಗುರಿ ನೀಡಿದ್ದು, 4ನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ ಒಂದು ವಿಕೆಟ್​ ನಷ್ಟಕ್ಕೆ 52 ರನ್​ ಗಳಿಸಿತ್ತು. ಕೊನೆಯ ದಿನ ಗೆಲ್ಲಲು ಭಾರತಕ್ಕೆ 157 ರನ್​ಗಳನ್ನು ಅವಶ್ಯಕತೆಯಿತ್ತು. ಭಾರತದ ಕೈಯಲ್ಲಿ ಇನ್ನೂ 9 ವಿಕೆಟ್​ಗಳು ಉಳಿದಿದ್ದರಿಂದ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ ಮಳೆ ಕೊಹ್ಲಿ ಪಡೆಯನ್ನು ನಿರಾಶೆಗೊಳಿಸಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.