ರಾಜ್ಕೋಟ್( ಗುಜರಾತ್): ದಕ್ಷಿಣ ಆಫ್ರಿಕ ವಿರುದ್ಧದ ನಾಲ್ಕನೆ ಟಿ-20 ಪಂದ್ಯದಲ್ಲಿ, ದಿನೇಶ್ ಕಾರ್ತಿಕ್ ಚೊಚ್ಚಲ ಅರ್ಧಶತಕ ಸಿಡಿಸುವ ಮೂಲಕ ಭರ್ಜರಿ ಆಟವನ್ನು ಪ್ರದರ್ಶಿಸಿದರು. 27ಎಸೆತಗಳಲ್ಲಿ 55 ರನ್ ಬಾರಿಸುವ ಮೂಲಕ ಕಾರ್ತಿಕ್ ಪಂದ್ಯ ಶ್ರೇಷ್ಠ ಆಟ ಪ್ರದರ್ಶಿಸಿದರು. ಟಿ-20ಗೆ ಪದಾರ್ಪಣೆ ಮಾಡಿ 15 ವರ್ಷಗಳ ನಂತರ ದಿನೇಶ್ ಕಾರ್ತಿಕ್ ಈ ಸಾಧನೆ ಮಾಡಿದ್ದಾರೆ.
ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಂದು ನಾನು ತುಂಬಾ ಜವಾಬ್ದಾರಿಯುತವಾಗಿ ಆಟವಾಡಿದ್ದು, ಇದು ನನಗೆ ಖುಷಿ ಕೊಟ್ಟಿದೆ. ಹಿಂದಿನ ಪಂದ್ಯದಲ್ಲಿ ನಾನು ಹಾಕಿಕೊಂಡಿದ್ದ ಯೋಜನೆಯಂತೆ ಆಡುವಲ್ಲಿ ವಿಫಲನಾಗಿದ್ದೆ, ಆದರೆ, ಇವತ್ತು ನನ್ನ ಆಟದ ಸಾಮರ್ಥ್ಯ ತೋರಿಸುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಕಾರ್ತಿಕ್ ಹೇಳಿದ್ದಾರೆ.
ಪ್ರಸ್ತುತ ಬ್ಯಾಟಿಂಗ್ ಕೋಚ್ ರಾಹುಲ್ ದ್ರಾವಿಡ್ರಿಂದ ಡ್ರಸಿಂಗ್ ರೂಮ್ ತುಂಬಾ ಶಾಂತವಾಗಿದ್ದು, ಇಂತಹ ವಾತಾವರಣದಿಂದ ಒತ್ತಡದ ಸಮಯವನ್ನು ಹೇಗೆ ನಿಭಾಯಿಸಬೇಕು ಎಂಬುದು ಕಲಿತುಕೊಳ್ಳಲು ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ನಂತರ ನಾಯಕ ರಿಷಭ್ ಪಂತ್ ಮಾತನಾಡಿ, ನಾವು ಉತ್ತಮ ಆಟವಾಡಿದ್ದಕ್ಕಾಗಿಯೇ ಪಂದ್ಯ ಗೆಲ್ಲಲು ಸಾಧ್ಯವಾಗಿದೆ. 10 ಒವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 56 ರನ್ನಿಂದ ತಂಡ ಆರಂಭಿಕ ಆಘಾತ ಎದುರಿಸಬೇಕಾಯಿತು. ನಂತರ ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ಬಿರುಸಿನ ಬ್ಯಾಟಿಂಗ್ನಿಂದಾಗಿ ತಂಡ ಉತ್ತಮ ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು ಎಂದು ಹೇಳಿದರು.
ಇದನ್ನೂ ಓದಿ: ಸಿಕಂದರಬಾದ್ ಗುಂಡಿನ ದಾಳಿ ಪೂರ್ವ ನಿಯೋಜಿತ: ಕಾಂಗ್ರೆಸ್ ಆರೋಪ