ETV Bharat / sports

ಆರ್​ಸಿಬಿ ವಿರುದ್ಧದ ಗೆಲುವಿನ ಶ್ರೇಯ ಬೌಲರ್​ಗಳಿಗೆ ಸಲ್ಲಬೇಕು : ಧೋನಿ - Virat Kohli

ಅವರು(ಆರ್​ಸಿಬಿ) ಉತ್ತಮ ಆರಂಭ ಪಡೆದರು. ಆದರೆ, 9ನೇ ಓವರ್​ ಬಳಿಕ ವಿಕೆಟ್ ನಿಧಾನವಾಯಿತು. ಪಡಿಕ್ಕಲ್ ಬ್ಯಾಟಿಂಗ್ ಮಾಡುತ್ತಿದ್ದರಿಂದ ಜಡೇಜಾ ಸ್ಪೆಲ್​ ಅತ್ಯಂತ ಪ್ರಮುಖವಾಗಿತ್ತು. ನಂತರ ಬ್ರಾವೋ, ಹೆಜಲ್​ವುಡ್​,ಶಾರ್ದೂಲ್​, ದೀಪಕ್​ ಉತ್ತಮವಾಗಿ ಬೌಲಿಂಗ್ ಮಾಡಿದರು..

CSK Vs RCB
ಚೆನ್ನೈ ಸೂಪರ್​ ಕಿಂಗ್ಸ್​ vs ರಾಯಲ್​ ಚಾಲೆಂಜರ್ಸ್ ಬೆಂಗಳೂರು
author img

By

Published : Sep 25, 2021, 4:14 PM IST

ಶಾರ್ಜಾ : ರಾಯಲ್​ ಚಾಲೆಂಜರ್ಸ್ ಬೆಂಗಳೂರು ಅದ್ಭುತ ಆರಂಭ ಪಡೆದರೂ ಅತ್ಯುತ್ತಮ ಬೌಲಿಂಗ್​ ಪ್ರದರ್ಶನ ತೋರಿ ಮತ್ತೆ ಮೇಲುಗೈ ಸಾಧಿಸಿದ ಬೌಲರ್​ಗಳ ಬಗ್ಗೆ ಸಿಎಸ್​ಕೆ ನಾಯಕ ಮಹೇಂದ್ರ ಸಿಂಗ್​ ಧೋನಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಸಿಎಸ್​ಕೆ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಇತ್ತ ಆರ್​ಸಿಬಿ ಸತತ 2 ಸೋಲುಗಳೊಂದಿಗೆ 3ನೇ ಸ್ಥಾನದಲ್ಲಿ ಮುಂದುವರಿದಿದೆ. ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿಗೆ ಕೊಹ್ಲಿ(53) ಮತ್ತು ಪಡಿಕ್ಕಲ್(70) ಮೊದಲ ವಿಕೆಟ್​ಗೆ 90 ರನ್​ಗಳ ಜೊತೆಯಾಟ ನೀಡಿ ಬೃಹತ್​ ಮೊತ್ತದತ್ತ ದಾಪುಗಾಲಿಟ್ಟಿತ್ತು.

ಆದರೆ, ನಂತರ ಸಿಎಸ್​ಕೆ ಬೌಲರ್​ಗಳು ತಿರುಗಿಬಿದ್ದು, ಮುಂದಿನ 10 ಓವರ್​ಗಳಲ್ಲಿ ಕೇವಲ 66 ರನ್​ ಮಾತ್ರ ಬಿಟ್ಟುಕೊಟ್ಟಿದ್ದರು. ನಂತರ 157 ರನ್​ಗಳ ಗುರಿಯನ್ನು 18.1 ಓವರ್​ಗಳಲ್ಲಿ ತಲುಪುವ ಮೂಲಕ ಸುಲಭ ಜಯ ಸಾಧಿಸಿತು. ಗಾಯಕ್ವಾಡ್​(38),ಪ್ಲೆಸಿಸ್​(31), ರಾಯುಡು(32)ಮತ್ತು ಮೊಯೀನ್ ಅಲಿ(23) ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರು.

ಪಂದ್ಯದ ನಂತರ ಮಾತನಾಡಿದ ಧೋನಿ, ತಮ್ಮ ಬೌಲರ್​ಗಳ ಪ್ರದರ್ಶನವನ್ನು ಕೊಂಡಾಡಿದರು."ಅವರು(ಆರ್​ಸಿಬಿ) ಉತ್ತಮ ಆರಂಭ ಪಡೆದರು. ಆದರೆ, 9ನೇ ಓವರ್​ ಬಳಿಕ ವಿಕೆಟ್ ನಿಧಾನವಾಯಿತು. ಪಡಿಕ್ಕಲ್ ಬ್ಯಾಟಿಂಗ್ ಮಾಡುತ್ತಿದ್ದರಿಂದ ಜಡೇಜಾ ಸ್ಪೆಲ್​ ಅತ್ಯಂತ ಪ್ರಮುಖವಾಗಿತ್ತು. ನಂತರ ಬ್ರಾವೋ, ಹೆಜಲ್​ವುಡ್​,ಶಾರ್ದೂಲ್​, ದೀಪಕ್​ ಉತ್ತಮವಾಗಿ ಬೌಲಿಂಗ್ ಮಾಡಿದರು.

ಇಲ್ಲಿ ಯಾವ ಬೌಲರ್ ಪರಿಣಾಮಕಾರಿಯಾಗಿರಬಹುದು ಎಂಬುದು ಯಾವಾಗಲೂ ನಿಮ್ಮ ಮನಸ್ಸಿನಲ್ಲಿರಬೇಕು. ಡ್ರಿಂಕ್ಸ್​ಗೂ ಮೊದಲು ನಾನು ಮೊಯೀನ್​ ಅಲಿಗೆ ಶೀಘ್ರದಲ್ಲಿ ನೀನು ಬೌಲಿಂಗ್ ಮಾಡುವೆ ಎಂದು ತಿಳಿಸಿದ್ದೆ. ಆದರೆ, ನಾನು ಬ್ರಾವೋಗೆ ನೀಡಲು ನಿರ್ಧರಿಸಿದೆ. ಯಾಕೆಂದರೆ, ಇಂತಹ ಪರಿಸ್ಥಿತಿಯಲ್ಲಿ ಬ್ರಾವೋಗೆ ಸತತ ನಾಲ್ಕು ಓವರ್​ ಮಾಡುವುದು ಕಷ್ಟವಾಗುತ್ತಿತ್ತು ಎಂದು ಧೋನಿ ತಮ್ಮ ಬೌಲಿಂಗ್ ಬದಲಾವಣೆ ಬಗ್ಗೆ" ಪಂದ್ಯದ ನಂತರ ಹೇಳಿದರು.

ಇನ್ನು, ಧೋನಿ ವಿಭಿನ್ನ ಮೈದಾನಗಳ ಪರಿಸ್ಥಿತಿಗಳನ್ನು ತನ್ನ ತಂತ್ರಗಳನ್ನು ಯೋಜಿಸುವುದಾಗಿ ಧೋನಿ ಹೇಳಿದರು. ಪಂದ್ಯದ ದ್ವಿತೀಯಾರ್ಧದಲ್ಲಿ ಇಬ್ಬನಿ ತಪ್ಪಿಸಲು ಬಯಸಿದ್ದರಿಂದ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ನಾವು ಇಬ್ಬನಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದೆವು. ಯಾವಾಗ ಇಬ್ಬನಿ ಇರುತ್ತದೆಯೋ ಆ ಸಂದರ್ಭದಲ್ಲಿ ನಾವು ಸೆಕೆಂಡ್​ ಬ್ಯಾಟಿಂಗ್ ಮಾಡುವುದಕ್ಕೆ ಬಯಸುತ್ತೇವೆ.

ಇಲ್ಲಿನ ಮೂರು ಕ್ರೀಡಾಂಗಣಗಳು ವಿಭಿನ್ನವಾಗಿರುತ್ತವೆ. ಇದು ಅವುಗಳಲ್ಲಿ ತುಂಬಾ ನಿಧಾನವಾದ ವಿಕೆಟ್​. ದುಬೈ ಮತ್ತು ಅಬುಧಾಬಿಗಳು ಭಿನ್ನವಾಗಿರುತ್ತವೆ. ಹಾಗಾಗಿ, ಎರಡನೇ ಬಾರಿ ಬ್ಯಾಟಿಂಗ್ ಮಾಡಿದರೆ ಆಟಗಾರರಿಗೆ ವಾತಾವರಣಕ್ಕೆ ಹೊಂದಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಧೋನಿ ಹೇಳಿದ್ದಾರೆ.

ಇದನ್ನು ಓದಿ: AUSW vs INDW: ಸರಣಿ ಕೈಚೆಲ್ಲಿದ ಮಿಥಾಲಿ ಪಡೆ; ನಿರ್ಣಾಯಕ ಘಟ್ಟದಲ್ಲಿ ಸೋಲಿಗೆ ಕಾರಣವಾದ 'No Ball'!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.