ETV Bharat / sports

ರಿಷಭ್​ ಪಂತ್​ಗೆ ಮಾಸ್ಟರ್​ ಆದ ಧೋನಿ.. ವಿಕೆಟ್​ ಕೀಪಿಂಗ್​​ ಪಾಠ ಹೇಳಿಕೊಟ್ಟ ಮಾಹಿ - ಟಿ-20 ವಿಶ್ವಕಪ್​ 2021

ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್​ಗೆ ತಂಡದ ಮಾರ್ಗದರ್ಶಕರಾಗಿರುವ ಮಹೇಂದ್ರ ಸಿಂಗ್ ಧೋನಿ ವಿಕೆಟ್ ಕೀಪಿಂಗ್ ಪಾಠ ಹೇಳಿಕೊಟ್ಟಿದ್ದಾರೆ.

Dhoni gives keeping lessons to rishabh pant

author img

By

Published : Oct 20, 2021, 9:58 PM IST

Updated : Oct 20, 2021, 10:04 PM IST

ದುಬೈ: ಐಸಿಸಿ ಟಿ-20 ವಿಶ್ವಕಪ್​ಗೋಸ್ಕರ ಟೀಂ ಇಂಡಿಯಾ ಭರ್ಜರಿ ತಯಾರಿ ನಡೆಸಿದ್ದು, ಈಗಾಗಲೇ ಆಡಿರುವ ಎರಡು ಅಭ್ಯಾಸ ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿಕೊಳ್ಳುವ ಮೂಲಕ ಹೋರಾಟಕ್ಕೆ ಸಜ್ಜಾಗಿದೆ. ಇದರ ಮಧ್ಯೆ ಟೀಂ ಇಂಡಿಯಾ ಮಾರ್ಗದರ್ಶಕರಾಗಿ ತಂಡ ಸೇರಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ಕೆಲವೊಂದು ಮಹತ್ವದ ಸಲಹೆಗಳನ್ನು ನೀಡುತ್ತಿದ್ದಾರೆ.

ಟೀಂ ಇಂಡಿಯಾ ಕಂಡಿರುವ ಅತ್ಯಂತ ಯಶಸ್ವಿ ನಾಯಕ ಹಾಗೂ ವಿಕೆಟ್ ಕೀಪರ್​​ ಆಗಿರುವ ಮಹೇಂದ್ರ ಸಿಂಗ್ ಧೋನಿ ಸದ್ಯ ತಂಡದ ವಿಕೆಟ್​​ ಕೀಪರ್ ಬ್ಯಾಟರ್​ ಆಗಿರುವ ರಿಷಭ್​ ಪಂತ್​ಗೆ ವಿಕೆಟ್ ಕೀಪಿಂಗ್​​ ಸಲಹೆ ನೀಡಿದ್ದಾರೆ.

ಇದನ್ನೂ ಓದಿರಿ: ಟಿ-20 ವಿಶ್ವಕಪ್ ಇತಿಹಾಸದಲ್ಲಿ ಚೊಚ್ಚಲ ಜಯ ಸಾಧಿಸಿದ ನಮೀಬಿಯಾ

ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯ ಆರಂಭಗೊಳ್ಳುವುದಕ್ಕೂ ಕೆಲ ನಿಮಿಷಗಳ ಮುಂಚಿತವಾಗಿ ಧೋನಿ ಈ ಸಲಹೆ ನೀಡಿದ್ದು, ಅದರ ವಿಡಿಯೋ ಸೆರೆಯಾಗಿದೆ.

ತಂಡದ ಮಾರ್ಗದರ್ಶಕರಾಗಿ ಟೀಂ ಇಂಡಿಯಾ ಸೇರಿಕೊಂಡಾಗಿನಿಂದಲೂ ಮಹೇಂದ್ರ ಸಿಂಗ್ ಧೋನಿ ಎಲ್ಲ ಆಟಗಾರರೊಂದಿಗೆ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದು, ಅಭ್ಯಾಸದ ವೇಳೆ ಕೆಲವೊಂದಿಷ್ಟು ಮಹತ್ವದ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಈಗಾಗಲೇ ರೋಹಿತ್​, ರಾಹುಲ್​, ವಿರಾಟ್​ ಸೇರಿದಂತೆ ಅನೇಕರು ಮಾತನಾಡಿದ್ದಾರೆ.

Last Updated : Oct 20, 2021, 10:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.