ETV Bharat / sports

ಧೋನಿ ಪ್ರಭಾವಿ ನಾಯಕ, ಅತ್ಯುತ್ತಮ ತಂತ್ರಗಾರರಲ್ಲಿ ಒಬ್ಬರು: ಫಾಫ್ ಡು ಪ್ಲೆಸಿಸ್ - ಗ್ರೇಮ್ ಸ್ಮಿತ್

ರಾಯಲ್ ಚಾಲೆಂಜರ್ಸ್ ಪಾಡ್​ಕಾಸ್ಟ್​ನಲ್ಲಿ ಫಾಫ್ ಡು ಪ್ಲೆಸ್ಸಿಸ್ ಮಾತು - ಧೋನಿಯ ನಾಯಕತ್ವದ ಬಗ್ಗೆ ಹಂಚಿಕೊಂಡ ಆರ್​ಸಿಬಿ ನಾಯಕ - ಗ್ರೇಮ್ ಸ್ಮಿತ್, ಸ್ಟೀಫನ್ ಫ್ಲೆಮಿಂಗ್ ಜೊತೆಗಿನ ಕಲಿಕೆಯ ಬಗ್ಗೆ ಮನದಾಳ ಬಿಚ್ಚಿಟ್ಟ ಡು ಪ್ಲೆಸ್ಸಿಸ್

Faf du Plessis
ರಾಯಲ್ ಚಾಲೆಂಜರ್ಸ್ ಪಾಡ್​ಕಾಸ್ಟ್​
author img

By

Published : Mar 1, 2023, 7:55 PM IST

ಬೆಂಗಳೂರು: ನಾನು ಯಾವುದೇ ನಾಯಕರಂತೆ ಆಗಲು ಬಯಸುವುದಿಲ್ಲ. ಆದರೆ, ಧೋನಿ ಅವರ ನಾಯಕತ್ವದ ತಂತ್ರಗಾರಿಕೆ ಮತ್ತು ಅವರ ಕೌಶಲ್ಯದ ಬಗ್ಗೆ ಮೆಚ್ಚಿಕೊಳ್ಳುತ್ತೇನೆ. ಅವರು ನಿಜವಾಗಿಯೂ ನಾಯಕತ್ವ ತೆಗೆದುಕೊಳ್ಳಲು ಸ್ಫೂರ್ತಿ ನೀಡಿದ ವ್ಯಕ್ತಿ ಮತ್ತು ಅವರಿಂದ ಬಹಳಷ್ಟು ಕಲಿತಿದ್ದೇನೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ನಾಯಕ ಫಾಫ್ ಡು ಪ್ಲೆಸ್ಸಿಸ್ ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್ ಪಾಡ್​ಕಾಸ್ಟ್​ನ ಡ್ಯಾನಿ ಸೇಟ್​ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಮಹೇಂದ್ರ ಸಿಂಗ್ ಧೋನಿ ಅವರು ನಾಯಕರಾಗಿ ಪ್ರಬುದ್ಧರಾಗಲು ಸಹಾಯ ಮಾಡಿದ್ದಾರೆ. ಆದರೆ, ನಾನು ದಿಗ್ಗಜ ನಾಯಕರಾದ ಗ್ರೇಮ್ ಸ್ಮಿತ್, ಸ್ಟೀಫನ್ ಫ್ಲೆಮಿಂಗ್ ಮತ್ತು ಎಂಎಸ್ ಧೋನಿಯಂತಾಗಲು ಬಯಸಲಿಲ್ಲ. ಅವರಿಂದ ಬಹಳಷ್ಟು ಕಲಿತು ನನ್ನ ನಾಯಕತ್ವವನ್ನು ನಿಭಾಯಿಸಿದೆ ಮತ್ತು ಮುಂದೆಯೂ ನಿಭಾಯಿಸುತ್ತೇನೆ" ಎಂದಿದ್ದಾರೆ.

  • ICYMI: Watch @faf1307 talk about his learnings from @msdhoni in the full episode of #RCBPodcast on our Instagram and YouTube channels, the link is in the bio.#PlayBold

    — Royal Challengers Bangalore (@RCBTweets) March 1, 2023 " class="align-text-top noRightClick twitterSection" data=" ">

ಡು ಪ್ಲೆಸ್ಸಿಸ್ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಧೊನಿ ನಾಯಕತ್ವದಲ್ಲಿ ಆಡಿದ್ದರು ಮತ್ತು ಕೆಲ ಪಂದ್ಯಗಳಲ್ಲಿ ನಾಯಕರಾಗಿ ಕೆಲಸ ಮಾಡಿದ್ದರು. 2011 ರಿಂದ 2015 ಮತ್ತು 2018 ರಿಂದ 2021ರ ವರೆಗೆ ಚೆನ್ನೈ ತಂಡದಲ್ಲಿದ್ದರು. ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ನಾಯಕತ್ವವನ್ನು ಡು ಪ್ಲೆಸ್ಸಿಸ್​ಗೆ ನೀಡಲಾಯಿತು.

"ನಾನು ನಾನಾಗಿರಲು ಬಯಸುತ್ತೆನೆ. ಯಾರನ್ನು ಅವರಂತೆಯೇ ಅನುಸರಿಸಲು ಇಷ್ಟ ಪಡುವುದಿಲ್ಲ. ಏಕೆಂದರೆ ನಾವು ನಾವಾಗಿಲ್ಲದಿದ್ದರೆ ಜನರು ಅದನ್ನು ಗಮನಿಸುತ್ತಾರೆ. ನಾವು ಚೆನ್ನಾಗಿ ಆಡದಿದ್ದಾಗ ಮತ್ತು ಕಪಳೆ ಪ್ರದರ್ಶನ ನೀಡಿದಾಗ ನಮ್ಮತನ ಎಂಬುದು ಹೊರಗೆ ಬರುತ್ತದೆ. ಆಗ ಜನರಿಗೆ ನಮ್ಮ ಬಣ್ಣ ಬಯಲಾಗುತ್ತದೆ. ಅದಕ್ಕಾಗಿ ಯಾರಂತೆಯೂ ಇರಲು ಬಯಸದೇ ಸ್ವಂತಿಕೆಯಿಂದ ಇರಬೇಕು" ಎಂದು ಹೇಳಿದ್ದಾರೆ.

"ನಾನು ಯಾವಾಗಲೂ ಶ್ರೇಷ್ಠ ನಾಯಕರಿಂದ ನಾಯಕತ್ವದ ಬಗ್ಗೆ ಕಲಿಯುವ ದೃಷ್ಟಿಕೋನವನ್ನು ಹೊಂದಿದ್ದೇನೆ, ನಾಯಕತ್ವಕ್ಕೆ ನಾನು ಯಾವಾಗಲೂ ಆಕರ್ಷಿತನಾಗಿದ್ದೆ. ನಾನು ಆರಂಭದಲ್ಲಿ ದಕ್ಷಿಣ ಆಫ್ರಿಕಾದ ತಂಡಕ್ಕೆ ಬಂದಾಗ ಗ್ರೇಮ್ ಸ್ಮಿತ್ ನಾಯಕರಾಗಿದ್ದರು. ಅವರು ಪಂದ್ಯಗಳಲ್ಲಿ ತೆಗೆದುಕೊಳ್ಳುತ್ತಿದ್ದ ನಿರ್ಣಯ ಮತ್ತು ಡ್ರೆಸಿಂಗ್​ ರೂಮ್​ನ ಅವರ ನಿಯಮಗಳ ಬಗ್ಗೆ ಕಲಿತಿದ್ದೇನೆ. ಸಿಎಸ್​ಕೆಗೆ ಸೇರಿದಾಗ ಶ್ರೇಷ್ಠ ನಾಯಕ ನ್ಯೂಜಿಲ್ಯಾಂಡ್​ ಕ್ರಿಕೆಟಿಗ ಸ್ಟೀಫನ್ ಫ್ಲೆಮಿಂಗ್ ಅವರಿಂದ ಬಹಳಷ್ಟನ್ನು ಕಲಿತಿದ್ದೇನೆ. ಚೆನೈನ ನಾಯಕರಾಗಿದ್ದ ಧೋನಿ ಅವರ ತಂತ್ರಕಾರಿಕೆ ಮತ್ತು ನಾಯಕತ್ವದ ಕೌಶಲ್ಯದಿಂದ ನಾನು ಬಹಳಷ್ಟನ್ನು ಪಡೆದುಕೊಂಡಿದ್ದೇನೆ" ಎಂದಿದ್ದಾರೆ

"ಕಹಿ ಘಟನೆ ಒಂದನ್ನು ನೆನೆದ ಫಾಫ್ ಡು ಪ್ಲೆಸ್ಸಿಸ್ ಬಾಲ್​ ಶೈನ್ ಮಾಡಲು ಎಂಜಲು ಹಚ್ಚಿದಕ್ಕೆ ಟೀಕೆಗೆ ಗುರಿಯಾದ ಬಗ್ಗೆ ಹೇಳಿಕೊಂಡಿದ್ದಾರೆ. 2016ರ ಸರಣಿಯಲ್ಲಿ ಬಾಲ್​ ಶೈನ್​ ಮಾಡಲು ಬಾಲ್​ಗೆ ಎಂಜಲು ಹಚ್ಚಿದ್ದೇ ಈ ಕಾರಣಕ್ಕೆ 100 ಪ್ರತಿಶತ ದಂಡ ವಿಧಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದಲ್ಲಿ ಹಲವಾರು ಟೀಕೆಗಳು ವ್ಯಕ್ತವಾದವು. ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದ್ದೆವು ಇದೂ ಅವಮಾನಕ್ಕೆ ಕಾರಣವಾಯಿತು. ಫಾಫ್ ಡು ಪ್ಲೆಸಿಸ್ ಫಾಫ್​ ಎಂಬತೆ ಚಿತ್ರಿಸಲಾಗಿತ್ತು. ಎರಡನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಮತ್ತು 80 ರನ್‌ಗಳ ಜಯ ಸಾಧಿಸಿ ತಿರುಗೇಟು ನೀಡಿದೆವು" ಎಂದು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ಇಂದೋರ್​ ಟೆಸ್ಟ್​​: ಮತ್ತೆ ಜಡೇಜಾ ಕಮಾಲ್​, ಭಾರತಕ್ಕೆ 47 ರನ್​​ಗಳ​ ಹಿನ್ನಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.