ETV Bharat / sports

ಜಿದ್ದಾಜಿದ್ದಿನ ಕದನಕ್ಕೆ ಪಲ್ಲೆಕಲೆ ಮೈದಾನ ಸಜ್ಜು.. ಭಾರತ ಪಾಕ್​ ಪಂದ್ಯದ ಸಮಯ, 11ರ ಬಳಗ, ಪಿಚ್​ ವರದಿ ಬಗ್ಗೆ ಇಲ್ಲಿದೆ ಮಾಹಿತಿ

ಭಾರತ ಪಾಕ್​ ಜಿದ್ದಾಜಿದ್ದಿನ ಕದನಕ್ಕೆ ಪಲ್ಲೆಕಲೆ ಮೈದಾನ ಸಜ್ಜಾಗಿದ್ದು, ​ಪಂದ್ಯದ ಸಮಯ, 11ರ ಬಳಗ, ಪಿಚ್​ ವರದಿ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ..

author img

By ETV Bharat Karnataka Team

Published : Sep 2, 2023, 9:28 AM IST

Details about India Pakistan match time  India Pakistan match  India Pakistan match team report  ಜಿದ್ದಾಜಿದ್ದಿನ ಕದನಕ್ಕೆ ಪಲ್ಲೆಕಲೆ ಮೈದಾನ ಸಜ್ಜು  ಭಾರತ ಪಾಕ್​ ಪಂದ್ಯದ ಸಮಯ  ಪಿಚ್​ ವರದಿ ಬಗ್ಗೆ ಇಲ್ಲಿದೆ ಮಾಹಿತಿ  ಭಾರತ ಪಾಕ್​ ಜಿದ್ದಾಜಿದ್ದಿನ ಕದನಕ್ಕೆ ಪಲ್ಲೆಕಲೆ ಮೈದಾನ  ಪಿಚ್​ ವರದಿ ಬಗೆಗಿನ ಮಾಹಿತಿ ಇಲ್ಲಿದೆ  ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಲು ಟೀಂ ಇಂಡಿಯಾ  ಪಾಕಿಸ್ತಾನ ಏಕದಿನ ಕ್ರಿಕೆಟ್ ಮಾದರಿ  ಭಾರತ ಹಾಗೂ ಪಾಕಿಸ್ತಾನ ತಂಡ
ಜಿದ್ದಾಜಿದ್ದಿನ ಕದನಕ್ಕೆ ಪಲ್ಲೆಕಲೆ ಮೈದಾನ ಸಜ್ಜು

ಪಲ್ಲೆಕಲೆ, ಶ್ರೀಲಂಕಾ: ಏಷ್ಯಾಕಪ್ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಲು ಟೀಂ ಇಂಡಿಯಾ ಕಣ್ಣಿಟ್ಟಿದೆ. ಶನಿವಾರ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಹಣಾಹಣಿ ನಡೆಯಲಿದೆ. ಈ ಹಿಂದೆ ಇಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ಪಂದ್ಯ ನಡೆದಿದ್ದು, ಬೌಲರ್‌ಗಳಿಗೆ ಸಾಕಷ್ಟು ನೆರವು ಸಿಕ್ಕಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕಾಗಿ ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ, ಎರಡೂ ತಂಡಗಳಲ್ಲಿ ಹಲವು ಹಿರಿಯ ಆಟಗಾರರು ಇರುವುದರಿಂದ ಈ ಪಂದ್ಯ ಎರಡೂ ತಂಡಗಳಿಗೆ ಗೆಲುವು ಸುಲಭವಲ್ಲ.

ಪಾಕಿಸ್ತಾನ ಏಕದಿನ ಕ್ರಿಕೆಟ್ ಮಾದರಿಯಲ್ಲಿ ನಂಬರ್ 1 ಸ್ಥಾನಕ್ಕೇರಿರುವ ಆತ್ಮವಿಶ್ವಾಸ ಹೊಂದಿದೆ. ಆದರೆ, ಭಾರತ ಈ ಸರಣಿಗೂ ಮನ್ನು ನಡೆದ ಐದು ಪಂದ್ಯಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡುಕೊಂಡಿಲ್ಲ ಎಂಬುದು ಗಮನಾರ್ಹ. ಕಳೆದ ಐದು ಏಕದಿನ ಪಂದ್ಯಗಳಲ್ಲಿ ಭಾರತ ಎರಡು ಪಂದ್ಯಗಳಲ್ಲಿ ಮಾತ್ರವೇ ಗೆಲುವು ಸಾಧಿಸಿತ್ತು. ಆದರೆ ತಂಡದ ಕೆಲ ಪ್ರಮುಖ ಆಟಗಾರರು ಕಮ್‌ಬ್ಯಾಕ್ ಮಾಡಿದ್ದರಿಂದ ಆತ್ಮವಿಶ್ವಾಸ ಹೆಚ್ಚಿದೆ.

ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಇಂದು ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದ್ದು, 2. 30ಕ್ಕೆ ಟಾಸ್ ನಡೆಯಲಿದೆ. ಇನ್ನು ಈ ಪಂದ್ಯದ ನೇರಪ್ರಸಾರದ ಹಕ್ಕನ್ನು ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್ ಹೊಂದಿದ್ದು, ಹಾಟ್‌ಸ್ಟಾರ್‌ನಲ್ಲಿ ಪಂದ್ಯವನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ.

ಪಿಚ್ ರಿಪೋರ್ಟ್ ಇಲ್ಲಿದೆ ನೋಡಿ..: ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಡಾಂಗಣದ ಪಿಚ್ ಬ್ಯಾಟಿಂಗ್​ ಹಾಗೂ ಬೌಲಿಂಗ್ ಮಧ್ಯೆ ಸಮಾನವಾದ ಹೋರಾಟಕ್ಕೆ ಅವಕಾಶ ನೀಡುವ ಗುಣವಿದೆ. ಪಿಚ್‌ನಲ್ಲಿ ತಿರುವು ಹಾಗೂ ಬೌನ್ಸ್ ಇರುವ ಕಾರಣ ಸ್ಪಿನ್ನರ್‌ಗಳಿಗೆ ಸ್ವಲ್ಪ ಹೆಚ್ಚಿನ ಪ್ರಮಾಣದ ನೆರವು ದೊರೆಯುವ ಅವಕಾಶ ಹೆಚ್ಚಾಗಿದೆ. ಸ್ಟ್ರೋಕ್​ರೊಟೆಟ್ ಮಾಡುವ ಬ್ಯಾಟರ್‌ಗಳು ಇಲ್ಲಿ ಯಶಸ್ಸು ಪಡೆಯಲಿದ್ದಾರೆ. ಇಲ್ಲಿನ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 195 ರನ್‌ ಆಗಿರುವ ಕಾರಣ ಟಾಸ್ ಗೆದ್ದ ತಂಡ ಇಲ್ಲಿ ಮೊದಲಿಗೆ ಬೌಲಿಂಗ್ ನಡೆಸುವ ಸಾಧ್ಯತೆ ಹೆಚ್ಚು ಕಂಡುಬರುತ್ತದೆ.

ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್.

ಬೆಂಚ್: ಎಸ್ ಅಯ್ಯರ್, ಕೆಎಲ್ ರಾಹುಲ್, ತಿಲಕ್ ವರ್ಮಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಪ್ರಸಿದ್ಧ್ ಕೃಷ್ಣ

ಪಾಕಿಸ್ತಾನ ಸಂಭಾವ್ಯ ತಂಡ: ಫಖರ್ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್, ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ ಮತ್ತು ಹ್ಯಾರಿಸ್ ರೌಫ್.

ಓದಿ: ಏಷ್ಯಾ ಕಪ್ 2023: ಇಂದು ಭಾರತ Vs ಪಾಕಿಸ್ತಾನ ರೋಚಕ ಹಣಾಹಣಿಗೆ ವೇದಿಕೆ ಸಿದ್ಧ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.