ETV Bharat / sports

ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನಕ್ಕೆ ಡೆಲ್ಲಿ ಆತಿಥ್ಯ.. ಮೋದಿ ಸ್ಟೇಡಿಯಂನಲ್ಲಿ ಪಂದ್ಯ ಫಿಕ್ಸ್​ - ಬಿಸಿಸಿಐ

1.1 ಲಕ್ಷ ವೀಕ್ಷಕರು ಕುಳಿತು ವೀಕ್ಷಿಸಬಹುದಾದ ವಿಶ್ವದ ದೊಡ್ಡ ಕ್ರೀಡಾಂಗಣ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಿ20 ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಕೋಲ್ಕತಾದ ಈಡನ್ ಗಾರ್ಡನ್ ಮತ್ತು ಮುಂಬೈನ ವಾಂಖೆಡೆಯಲ್ಲಿ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಧರ್ಮಶಾಲಾದಲ್ಲಿ ನಾಕೌಟ್ ಪಂದ್ಯಗಳಿಗಾಗಿ ಮೀಸಲು ಕ್ರೀಡಾಂಗಣವಾಗಿ ಘೋಷಿಸಲಾಗಿದೆ..

ಟಿ20 ವಿಶ್ವಕಪ್
ಟಿ20 ವಿಶ್ವಕಪ್
author img

By

Published : Apr 18, 2021, 3:55 PM IST

ನವದೆಹಲಿ : ಅಕ್ಟೋಬರ್​-ನವೆಂಬರ್​​ನಲ್ಲಿ ನಡೆಯಲಿರುವ 2021ರ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನದ 2 ಪಂದ್ಯಗಳಿಗೆ ಡೆಲ್ಲಿ ಆತಿಥ್ಯವಹಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಫೈನಲ್ ಪಂದ್ಯ ನವೀಕೃತ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಶುಕ್ರವಾರ ಪಾಕಿಸ್ತಾನ ತಂಡ ಟಿ20 ವಿಶ್ವಕಪ್​ನಲ್ಲಿ ಪಾಲ್ಗೊಳ್ಳುವುದಕ್ಕೆ ವೀಸಾ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿರುವ ಬಿಸಿಸಿಐ, ಪಾಕಿಸ್ತಾನದ ಪಂದ್ಯಗಳನ್ನು ಎಲ್ಲಿ ಆಯೋಜನೆಯ ಬಗೆಗೆನ ಖಚಿತ ಮಾಹಿತಿ ಇನ್ನಷ್ಟೇ ಘೋಷಿಸಿಬೇಕಿದೆ.

ಆದರೆ, ಈ ವಿಶ್ವಕಪ್​ಗೆ ಪಾಕಿಸ್ತಾನ ಪಾಲ್ಗೊಳ್ಳುವ ಖಚಿತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಯಾಕೆಂದರೆ, ಪಿಸಿಬಿ ಕೇವಲ ಆಟಗಾರರ ಮತ್ತು ಸಿಬ್ಬಂದಿ ಇಲ್ಲದೆ, ಮಾಧ್ಯಮದವರಿಗೂ ವೀಸಾ ನೀಡಬೇಕೆಂಬ ಬೇಡಿಕೆ ಮುಂದಿಟ್ಟಿದೆ.

1.1 ಲಕ್ಷ ವೀಕ್ಷಕರು ಕುಳಿತು ವೀಕ್ಷಿಸಬಹುದಾದ ವಿಶ್ವದ ದೊಡ್ಡ ಕ್ರೀಡಾಂಗಣ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಿ20 ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಕೋಲ್ಕತಾದ ಈಡನ್ ಗಾರ್ಡನ್ ಮತ್ತು ಮುಂಬೈನ ವಾಂಖೆಡೆಯಲ್ಲಿ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಧರ್ಮಶಾಲಾದಲ್ಲಿ ನಾಕೌಟ್ ಪಂದ್ಯಗಳಿಗಾಗಿ ಮೀಸಲು ಕ್ರೀಡಾಂಗಣವಾಗಿ ಘೋಷಿಸಲಾಗಿದೆ.

ಡೆಲ್ಲಿ, ಮುಂಬೈ, ಕೋಲ್ಕತಾ, ಅಹ್ಮದಾಬಾದ್​, ಧರ್ಮಾಶಾಲಾ, ಹೈದರಾಬಾದ್​, ಲಖನೌ, ಬೆಂಗಳೂರು ಮತ್ತು ಚೆನ್ನೈನಲ್ಲಿ ಲೀಗ್ ಪಂದ್ಯಗಳು ನಡೆಯಲಿವೆ. ಟೂರ್ನಿಯಲ್ಲಿ 16 ತಂಡಗಳು ಭಾಗವಹಿಸಲಿದ್ದು, ಒಟ್ಟು 45 ಪಂದ್ಯ ನಡೆಯಲಿವೆ.

ಇದನ್ನು ಓದಿ : ಭಾರತದಲ್ಲಿನ ಟಿ-20 ವಿಶ್ವಕಪ್​ ಆಡಲು ಪಾಕ್​ ಕ್ರಿಕೆಟ್​​ ಪ್ಲೇಯರ್ಸ್​ಗೆ ವೀಸಾ : ಜಯ್​ ಶಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.