ದುಬೈ: ಸೆಪ್ಟೆಂಬರ್ 19ರಿಂದ 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ ದ್ವಿತೀಯಾರ್ಧದ ಪಂದ್ಯಗಳು ಆರಂಭಗೊಳ್ಳಲಿವೆ. ಇದಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಡೆಲ್ಲಿ ಫ್ರಾಂಚೈಸಿ ಮಹತ್ವದ ಘೋಷಣೆ ಮಾಡಿದೆ.
2ನೇ ಹಂತದ ಐಪಿಎಲ್ನಲ್ಲಿ ಶ್ರೇಯಸ್ ಅಯ್ಯರ್ ತಂಡಕ್ಕೆ ಕಮ್ಬ್ಯಾಕ್ ಮಾಡಿದ ಹೊರತಾಗಿಯೂ ಡೈನಾಮಿಕ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಮುಂದುವರೆಯಲಿದ್ದಾರೆ ಎಂದು ತಿಳಿಸಿದೆ.
ಕಳೆದ 2 ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಖಾಯಂ ನಾಯಕನಾಗಿದ್ದ ಅಯ್ಯರ್ ಮಾರ್ಚ್ನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆ ಭುಜನೋವಿಗೆ ಒಳಗಾಗಿ ಇಂಗ್ಲೆಂಡ್ ವಿರುದ್ಧ ಸೀಮಿತ ಓವರ್ಗಳ ಸರಣಿಯ ಜೊತೆಗೆ ಮೊದಲಾರ್ಧದ ಐಪಿಎಲ್ನಿಂದಲೂ ಹೊರಬಿದ್ದಿದ್ದರು. ಇದೀಗ ಗಾಯದಿಂದ ಚೇತರಿಸಿಕೊಂಡಿದ್ದು, ಯುಎಇನಲ್ಲಿ ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಅಭ್ಯಾಸ ಆರಂಭಿಸಿದ್ದಾರೆ.
-
🚨 OFFICIAL STATEMENT 🚨
— Delhi Capitals (@DelhiCapitals) September 16, 2021 " class="align-text-top noRightClick twitterSection" data="
JSW-GMR co-owned Delhi Capitals today announced that Rishabh Pant will continue as Captain for the remainder of the #IPL2021 season.#YehHaiNayiDilli pic.twitter.com/yTp2CZHqYj
">🚨 OFFICIAL STATEMENT 🚨
— Delhi Capitals (@DelhiCapitals) September 16, 2021
JSW-GMR co-owned Delhi Capitals today announced that Rishabh Pant will continue as Captain for the remainder of the #IPL2021 season.#YehHaiNayiDilli pic.twitter.com/yTp2CZHqYj🚨 OFFICIAL STATEMENT 🚨
— Delhi Capitals (@DelhiCapitals) September 16, 2021
JSW-GMR co-owned Delhi Capitals today announced that Rishabh Pant will continue as Captain for the remainder of the #IPL2021 season.#YehHaiNayiDilli pic.twitter.com/yTp2CZHqYj
ಇದನ್ನೂ ಓದಿ: ಗುಜರಾತ್ ಕ್ಯಾಬಿನೆಟ್ನಲ್ಲಿ ಎಲ್ಲರೂ ಹೊಸಬರೇ: ರೂಪಾಣಿ ಸಂಪುಟದ ಒಬ್ಬರಿಗೂ ಸಿಗದ ಮಂತ್ರಿಗಿರಿ!
ಈ ಮಧ್ಯೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಯಕತ್ವವನ್ನು ಶ್ರೇಯಸ್ಗೆ ನೀಡಲಿದೆಯೇ ಅಥವಾ 14ನೇ ಆವೃತ್ತಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಅಗ್ರಸ್ಥಾನದಲ್ಲಿರಿಸಿರುವ ರಿಷಭ್ ಪಂತ್ಗೆ ನೀಡಲಿದೆಯೇ ಎಂಬ ಕುತೂಹಲ ಉಂಟಾಗಿತ್ತು. ಅದಕ್ಕೀಗ ಫ್ರಾಂಚೈಸಿ ಖುದ್ದಾಗಿ ಸ್ಪಷ್ಟನೆ ನೀಡಿದೆ.
ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಡೆಲ್ಲಿ ತಂಡ ಪಂತ್ ನಾಯಕತ್ವದಲ್ಲಿ ಆಡಿರುವ 8 ಪಂದ್ಯಗಳಲ್ಲಿ 6 ಗೆಲುವು ಮತ್ತು 2 ಸೋಲಿನೊಂದಿಗೆ ಅಗ್ರಸ್ಥಾನದಲ್ಲಿದೆ.