ETV Bharat / sports

ಮೊದಲ ದಿನದ ಹರಾಜಿನಲ್ಲಿ ಜಾಣ್ಮೆ ತೋರಿದ ಡೆಲ್ಲಿ: ಬಲಿಷ್ಠ ತಂಡ ಕಟ್ಟಿದ ಕ್ಯಾಪಿಟಲ್ಸ್​ - ipl 2022 ಲೈವ್ ನವೀಕರಣಗಳು

ಶನಿವಾರ ನಡೆದ ಹರಾಜಿನಲ್ಲಿ ಆಸ್ಟ್ರೇಲಿಯಾದ ಅನುಭವಿ ಆಟಗಾರ ಡೇವಿಡ್ ವಾರ್ನರ್​ ಅವರನ್ನು 6.25 ಕೋಟಿ ರೂಗೆ ಮತ್ತು ಆಲ್​ರೌಂಡರ್​ ಮಿಚೆಲ್ ಮಾರ್ಷ್​ರನ್ನು 6.5 ಕೋಟಿಗೆ ಖರೀದಿಸಿತು. ಆದರೆ ಶಾರ್ದೂಲ್​ ಠಾಕೂರ್ ಅವರನ್ನು ಪೈಪೋಟಿ ನೀಡಿ 10.75 ಕೋಟಿ ರೂಗಳಿಗೆ ಖರೀದಿಸಿತು. ಠಾಕೂರ್​ ಅವರ ಖರೀದಿ ವಿಚಾರದಲ್ಲಿ ಮಾತ್ರ ಫ್ರಾಂಚೈಸಿ ಹೆಚ್ಚಿನ ಹಣ ವ್ಯಯಿಸಿದ್ದು ಬಿಟ್ಟರೆ ಉಳಿದೆಲ್ಲಾ ಆಟಗಾರರನ್ನು ಸಸ್ತಾ ಬೆಲೆಗೆ ಖರೀದಿಸುವ ಮೂಲಕ ಈಗಾಗಲೆ ತಂಡವನ್ನು ನಿರ್ಧರಿಸುವಂತಹ ಮಟ್ಟಿಗೆ ತಂದುನಿಲ್ಲಿಸಿದೆ.

DC capitals
DC capitals
author img

By

Published : Feb 13, 2022, 12:33 PM IST

ಬೆಂಗಳೂರು: 2022ರ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಇತರೆ ತಂಡಗಳಿಗೆ ಹೋಲಿಸಿದರೆ ಜಾಣ್ಮೆ ತೋರಿ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ತಂಡಕ್ಕೆ ಅಗತ್ಯವಿರುವ ಬಹುಪಾಲು ಆಟಗಾರರನ್ನು ಸಾಧ್ಯವಾದಷ್ಟು ಕಡಿಮೆ ಬೆಲೆಗೆ ಖರೀದಿಸುವ ಜಾಣತನ ತೋರಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್​ ಈಗಾಗಲೆ ರಿಷಭ್ ಪಂತ್ (16 ಕೋಟಿ), ಪೃಥ್ವಿ ಶಾ (7.5), ಎನ್ರಿಷ್ ನಾರ್ಕಿಯಾ(6.5) ಮತ್ತು ಅಕ್ಷರ್ ಪಟೇಲ್(9)​ರನ್ನು ರಿಟೈನ್ ಮಾಡಿಕೊಂಡಿದೆ.

ಇನ್ನು ನಿನ್ನೆ ನಡೆದ ಹರಾಜಿನಲ್ಲಿ ಆಸ್ಟ್ರೇಲಿಯಾದ ಅನುಭವಿ ಆಟಗಾರ ಡೇವಿಡ್ ವಾರ್ನರ್​ ಅವರನ್ನು 6.25 ಕೋಟಿ ರೂಗೆ ಮತ್ತು ಆಲ್​ರೌಂಡರ್​ ಮಿಚೆಲ್ ಮಾರ್ಷ್​ರನ್ನು 6.5 ಕೋಟಿಗೆ ಖರೀದಿಸಿತು. ಆದರೆ ಶಾರ್ದೂಲ್​ ಠಾಕೂರ್ ಅವರನ್ನು ಪೈಪೋಟಿ ನೀಡಿ 10.75 ಕೋಟಿ ರೂಗಳಿಗೆ ಖರೀದಿಸಿತು. ಠಾಕೂರ್​ ಅವರ ಖರೀದಿ ವಿಚಾರದಲ್ಲಿ ಮಾತ್ರ ಫ್ರಾಂಚೈಸಿ ಹೆಚ್ಚಿನ ಹಣವನ್ನು ವ್ಯಯಿಸಿದ್ದು ಬಿಟ್ಟರೆ ಉಳಿದೆಲ್ಲಾ ಆಟಗಾರರನ್ನು ಸಸ್ತಾ ಬೆಲೆಗೆ ಖರೀದಿಸುವ ಮೂಲಕ ಈಗಾಗಲೆ ತಂಡವನ್ನು ನಿರ್ಧರಿಸುವಂತಹ ಮಟ್ಟಿಗೆ ತಂದುನಿಲ್ಲಿಸಿದೆ.

ಆರಂಭಿಕರಾಗಿ ಪೃಥ್ವಿ ಶಾ ಜೊತೆ ವಾರ್ನರ್ ಕಣಕ್ಕಿಳಿದರೆ, 3ನೇ ಕ್ರಮಾಂಕದಲ್ಲಿ ಮಿಚಲ್ ಮಾರ್ಷ್​, ನಾಲ್ಕರಲ್ಲಿ ಭರತ್​ ಅಥವಾ ರಿಷಭ್ ಪಂತ್ ನಂತರ ಸರ್ಫರಾಜ್​​ ಆಡಬಹುದು. ಬೌಲರ್​ಗಳ ವಿಭಾಗ ಬಹುತೇಕ ಬಲಿಷ್ಠವಾಗಿದೆ. ನಾರ್ಕಿಯಾ ಜೊತೆಗೆ ಶಾರ್ದೂಲ್ ಠಾಕೂರ್, ಕುಲದೀಪ್​ ಯಾದವ್​, ನಾಗರಕೋಟಿ ಮತ್ತು ಮುಸ್ತಫಿಜುರ್ ರೆಹಮಾನ್ ಇದ್ದಾರೆ. ಡೆಲ್ಲಿ ಬಳಿ ಇನ್ನೂ 16 ಕೋಟಿ ರೂಗಳಿದ್ದು, 2ನೇದಿನ ಹರಾಜಿನಲ್ಲಿ ಮಧ್ಯಮ ಕ್ರಮಾಂಕಕ್ಕೆ ಒಂದಿಬ್ಬರು ಬ್ಯಾಟರ್​ಗಳನ್ನು ಖರೀದಿಸಿದರೆ ಈ ಬಾರಿಯ ಐಪಿಎಲ್​ನಲ್ಲಿ ಬಲಿಷ್ಠ ತಂಡವಾಗಿ ರೂಪುಗೊಳ್ಳಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿಸಿದ ಆಟಗಾರರು:

  • ಶಾರ್ದೂಲ್ ಠಾಕೂರ್ - ₹10,75,00,000
  • ಡೇವಿಡ್ ವಾರ್ನರ್- ₹6,25,00,000
  • ಮಿಚೆಲ್ ಮಾರ್ಷ್ - ₹6,50,00,000
  • ಮುಸ್ತಫಿಜುರ್ ರೆಹಮಾನ್- ₹2,00,00,000
  • ಕೆ.ಎಸ್. ಭಾರತ್- ₹2,00,00,000
  • ಕುಲದೀಪ್ ಯಾದವ್ - ₹2,00,00,000
  • ಕಮಲೇಶ್ ನಾಗರಕೋಟಿ - ₹1,10,00,000
  • ಅಶ್ವಿನ್ ಹೆಬ್ಬಾರ್ - ₹20,00,000
  • ಸರ್ಫರಾಜ್ ಖಾನ್-₹20,00,000

ಇದನ್ನೂ ಓದಿ:₹10 ಕೋಟಿಗೆ ಸೇಲ್​​... ಮೂಲ ಬೆಲೆಗಿಂತಲೂ 10 ಪಟ್ಟು ಅಧಿಕ ಪಡೆದ ಕನ್ನಡಿಗ ಪ್ರಸಿಧ್​ ಕೃಷ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.