ನವದೆಹಲಿ: ಭಾರತ ತಂಡ ಭಾನುವಾರ ನ್ಯೂಜಿಲ್ಯಾಂಡ್ ವಿರುದ್ಧ ಐಸಿಸಿ ಟಿ20 ವಿಶ್ವಕಪ್ ಸೂಪರ್ 12ನಲ್ಲಿ ಸೋಲು ಕಾಣುತ್ತಿದ್ದಂತೆ ನಾಯಕ ವಿರಾಟ್ ಕೊಹ್ಲಿ ಕುಟುಂಬಕ್ಕೆ ಕೆಲವು ಕಿಡಿಗೇಡಿಗಳು ಬೆದರಿಕೆಯೊಡ್ಡುತ್ತಿರುವ ಸುದ್ದಿ ಕೇಳಿ ತುಂಬಾ ನೋವುಂಟಾಗುತ್ತಿದೆ ಎಂದು ಪಾಕಿಸ್ತಾನದ ಮಾಜಿ ಕೋಚ್ ಇಂಜಮಾಮ್-ಉಲ್-ಹಕ್ ಹೇಳಿದ್ದಾರೆ.
ದುಬೈನಲ್ಲಿ ಭಾನುವಾರ ನಡೆದ 2ನೇ ಗುಂಪಿನ ಸೂಪರ್ 12 ಪಂದ್ಯದಲ್ಲಿ ಭಾರತ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿ ಕೇವಲ 110 ರನ್ಗಳಿಸಿತ್ತು. ಈ ಮೊತ್ತವನ್ನು 2 ವಿಕೆಟ್ ಕಳೆದುಕೊಂಡು ಇನ್ನೂ 5 ಓವರ್ಗಳಿರುವಂತೆ ಕಿವೀಸ್ ಗೆದ್ದು ಬೀಗಿತ್ತು. ಆದರೆ ಕಳಪೆ ಪ್ರದರ್ಶನ ತೋರಿದ ಭಾರತದ ವಿರುದ್ಧ ಅಭಿಮಾನಿಗಳು ಸಿಡಿದೆದ್ದಿದ್ದು, ಇದು ಅತಿರೇಖಕ್ಕೆ ತಿರುಗಿ ಕುಟುಂಬದವರನ್ನು ನಿಂದಿಸುವವರೆಗೆ ಬಂದಿದೆ.
ಭಾರತ ತಂಡ ಪಂದ್ಯದಲ್ಲಿ ಸೋಲು ಕಂಡಿರುವುದಕ್ಕೆ ಮತ್ತು ತಂಡದ ಆಯ್ಕೆ ಹಾಗೂ ಪ್ರದರ್ಶನವನ್ನು ಟೀಕಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಈ ವೇಳೆ ಯಾರೂ ಗೆರೆ ದಾಟಬಾರದು. ನ್ಯೂಜಿಲ್ಯಾಂಡ್ ವಿರುದ್ಧ ಸೋಲಿನ ಬಳಿಕ ವಿರಾಟ್ ಕೊಹ್ಲಿಯ ಮಗಳಿಗೆ ಬೆದರಿಕೆ ಹಾಕಿರುವ ಸುದ್ದಿ ಕೇಳಿ ತುಂಬಾ ನೋವಾಯಿತು ಎಂದು ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೊಂಡರು.
- " class="align-text-top noRightClick twitterSection" data="">
"ವಿರಾಟ್ ಕೊಹ್ಲಿ ಮಗಳಿಗೆ ಬೆದರಿಕೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಜನರು ಇದನ್ನು ಕೇವಲ ಕ್ರೀಡೆ ಎಂದು ಅರ್ಥಮಾಡಿಕೊಳ್ಳಬೇಕು. ನಾವು ವಿಭಿನ್ನ ರಾಷ್ಟ್ರಗಳಿಗೆ ಆಡುತ್ತಿರಬಹುದು. ಆದರೆ, ನಾವೆಲ್ಲಾ ಒಂದೇ ಸಮುದಾಯದವರಾಗಿದ್ದೇವೆ. ನಿಮಗೆಲ್ಲರಿಗೂ ಕೊಹ್ಲಿಯ ಬ್ಯಾಟಿಂಗ್ ಅಥವಾ ಅವರ ನಾಯಕತ್ವವನ್ನು ಟೀಕಿಸುವ ಹಕ್ಕಿದೆ. ಆದರೆ ಅವರ ಕುಟುಂಬವನ್ನು ಟಾರ್ಗೆಟ್ ಮಾಡುವ ಹಕ್ಕು ಯಾರಿಗೂ ಇಲ್ಲ. ಕೆಲವು ದಿನಗಳ ಹಿಂದೆ ಇದೇ ರೀತಿಯಲ್ಲಿ ಮೊಹಮ್ಮದ್ ಶಮಿ ವಿಚಾರದಲ್ಲೂ ನಡೆದಿದೆ. ಸೋಲು ಅಥವಾ ಗೆಲುವು ಆಟದ ಭಾಗ" ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಕೊಹ್ಲಿ ಪಡೆಯ ವಿಶ್ವಕಪ್ ಅಭಿಯಾನ ಅಂತ್ಯಗೊಳಿಸಿದ ಯೂಟ್ಯೂಬ್ ನೋಡಿ ಸ್ಪಿನ್ ಕಲಿತ 'ಭಾರತೀಯ'ಸ್ಪಿನ್ನರ್