ಹೈದರಾಬಾದ್: ಆಸ್ಟ್ರೇಲಿಯಾ ಮತ್ತು IPLನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಕ್ರಿಕೆಟ್ ತಂಡದ ನಾಯಕ ಡೇವಿಡ್ ವಾರ್ನರ್ ವಿವಿಧ ಸಿನಿಮಾಗಳ ಕಾಮಿಡಿ ಮತ್ತು ಹಾಡುಗಳಿಗೆ ರೀಫೇಸ್ಡ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಮೂಲಕ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುತ್ತಿದ್ದಾರೆ.
- " class="align-text-top noRightClick twitterSection" data="
">
ಈ ಹಿಂದೆ ವಾರ್ನರ್ ಹಲ್ಕ್, ರಾನ್ ವೀಸ್ಲಿ, ಮಿಸ್ಟರ್ ಬೀನ್, ಹೋಮ್ ಅಲೋನ್ಸ್ನ ಸಣ್ಣ ಹುಡುಗ ಸೇರಿದಂತೆ ವಿವಿಧ ಸಿನಿಮಾ, ಹಾಸ್ಯ ಕ್ಯಾರೆಕ್ಟರ್ಗಳಿಗೆ ರೀಪೇಸ್ಡ್ ಮಾಡಿ ವಿಡಿಯೋ ಪೋಸ್ಟ್ ಮಾಡಿದ್ದರು. ಅಷ್ಟೇ ಅಲ್ಲದೆ, ಭಾರತೀಯ ಸಿನಿಮಾ ಜಗತ್ತಿನ ಸುಲ್ತಾನ್, ಬಾಹುಬಲಿ ಮತ್ತು ಗೋಲ್ಮಾಲ್ 3 ಸಿನಿಮಾದ 'ಉಂಗಲಿ' ಸೀನ್ಗಳಿಗೆ ಕೂಡ ಅವರು ರೀಪೇಸ್ಡ್ ಮಾಡಿ ಪೋಸ್ಟ್ ಮಾಡಿದ್ದರು.
- " class="align-text-top noRightClick twitterSection" data="
">
ಮೇ 19 ರಂದು ಧನುಶ್ ಮತ್ತು ಸಾಯಿ ಪಲ್ಲವಿ ಅಭಿನಯದ ತಮಿಳಿನ ಮಾರಿ -2 ಸಿನಿಮಾದ ಜನಪ್ರಿಯ ಹಾಡು ರೌಡಿ ಬೇಬಿಗೆ ರೀಫೇಸ್ಡ್ ಮಾಡಿ ವಾರ್ನರ್, ತನ್ನ ಇನ್ಸ್ಟಾಗ್ರಾಂನಲ್ಲಿ ಹಾಕಿದ್ದರು. ಇದರಲ್ಲಿ ಧನುಶ್ ಮುಖಕ್ಕೆ ತನ್ನ ಮುಖವನ್ನು ವಾರ್ನರ್ ರಿಫೇಸ್ಡ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ವಾರ್ನರ್ ಅಭಿಮಾನಿಗಳು ಫಿದಾ ಆದರು. ಕೇವಲ 6 ಗಂಟೆ ಅವಧಿಯಲ್ಲಿ ಈ ವಿಡಿಯೋವನ್ನು 2 ಮಿಲಿಯನ್ಗಿಂತಲೂ ಅಧಿಕ ಮಂದಿ ವೀಕ್ಷಿಸಿದ್ದು, 14 ಸಾವಿರ ಕಮೆಂಟ್ ಬಿದ್ದಿದೆ. (ಮುಂದುವರೆಯುತ್ತಲೇ ಇದೆ).