ಬರ್ಮಿಂಗ್ಹ್ಯಾಮ್: ಕೇವಲ 49ರನ್ಗಳಿಕೆ ಮಾಡುವಷ್ಟರಲ್ಲಿ ಆಸ್ಟ್ರೇಲಿಯಾದ ನಾಲ್ಕು ವಿಕೆಟ್ ಪಡೆದುಕೊಂಡಿದ್ದ ಭಾರತ, ತದನಂತರ ಮಾಡಿರುವ ತಪ್ಪಿನಿಂದ ಮೊದಲ ಪಂದ್ಯದಲ್ಲಿ ಸೋಲು ಕಂಡಿದೆ. ಈ ಮೂಲಕ ಕಾಮನ್ವೆಲ್ತ್ ಗೆಮ್ಸ್ನಲ್ಲಿ ಸೋಲಿನೊಂದಿಗೆ ತನ್ನ ಅಭಿಯಾನ ಆರಂಭಿಸಿದೆ. ಉಭಯ ತಂಡಗಳ ಮಧ್ಯೆ ನಡೆದ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ 3 ವಿಕೆಟ್ಗಳ ಭರ್ಜರಿ ಗೆಲುವು ದಾಖಲು ಮಾಡಿ ಶುಭಾರಂಭ ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಹರ್ಮನ್ಪ್ರೀತ್ ಬಳಗ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ನಷ್ಟಕ್ಕೆ 154ರನ್ಗಳಿಕೆ ಮಾಡಿತು. ಇದರ ಬೆನ್ನತ್ತಿದ ಕಾಂಗರೂ ಪಡೆ 19 ಓವರ್ಗಳಲ್ಲಿ 7 ವಿಕೆಟ್ನಷ್ಟಕ್ಕೆ 157ರನ್ಗಳಿಸಿ, ಗೆಲುವು ಸಾಧಿಸಿದೆ.
-
That's that from our first game at #CWG2022
— BCCI Women (@BCCIWomen) July 29, 2022 " class="align-text-top noRightClick twitterSection" data="
Australia win by 3 wickets.#TeamIndia will look to bounce back in the next game.
Scorecard - https://t.co/cuQZ7NHmpB #AUSvIND #B2022 pic.twitter.com/p1sn3xS6kj
">That's that from our first game at #CWG2022
— BCCI Women (@BCCIWomen) July 29, 2022
Australia win by 3 wickets.#TeamIndia will look to bounce back in the next game.
Scorecard - https://t.co/cuQZ7NHmpB #AUSvIND #B2022 pic.twitter.com/p1sn3xS6kjThat's that from our first game at #CWG2022
— BCCI Women (@BCCIWomen) July 29, 2022
Australia win by 3 wickets.#TeamIndia will look to bounce back in the next game.
Scorecard - https://t.co/cuQZ7NHmpB #AUSvIND #B2022 pic.twitter.com/p1sn3xS6kj
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಬ್ಯಾಟರ್ ಶೆಫಾಲಿ ವರ್ಮ ಹಾಗೂ ನಾಯಕಿ ಹರ್ಮನ್ಪ್ರೀತ್ ಕೌರ್ ಉತ್ತಮ ಆಟ ಪ್ರದರ್ಶಿಸಿದರು. ಆದರೆ, ಉಳಿದಂತೆ ಯಾವುದೇ ಆಟಗಾರರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿ ಬರಲಿಲ್ಲ. ಶೆಫಾಲಿ ಜೊತೆ ಇನ್ನಿಂಗ್ಸ್ ರಂಭಿಸಿದ ಬ್ಯಾಟರ್ ಸ್ಮೃತಿ ಮಂದಾನ(24ರನ್)ಗಳಿಸಿ ವಿಕೆಟ್ ಒಪ್ಪಿಸಿದರು.
ಇದಾದ ಬಳಿಕ ಬಂದ ಭಾಟಿಯಾ(8) ಮೈದಾನದಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇದರ ಬೆನ್ನಲ್ಲೇ ರಾಡ್ರಿಗಸ್(11)ರನ್ಗಳಿಸಿ ಔಟಾದರು. ಚೆನ್ನಾಗಿ ಆಡ್ತಿದ್ದ ಶೆಫಾಲಿ 48ರನ್ಗಳಿಸಿ ಔಟಾದರು. ಇನ್ನೂ ಹರ್ಮನ್ಪ್ರೀತ್ ಕೌರ್ ತಂಡಕ್ಕೆ ಆಧಾರವಾದರು. ತಾವು ಎದುರಿಸಿದ 34 ಎಸೆತಗಳಲ್ಲಿ 52ರನ್ಗಳಿಕೆ ಮಾಡಿದರು. ಆಸಿಸ್ ತಂಡದ ಪರ ಜೊನಾಸನ್ ನಾಲ್ಕು ವಿಕೆಟ್ ಪಡೆದರೆ, ಮೇಘನ್ ಸ್ಕಟ್ 2 ಹಾಗೂ ಡಾರ್ಸಿ ಬ್ರೌನ್ 1 ವಿಕೆಟ್ ಪಡೆದರು.
155ರನ್ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 49ರನ್ಗಳಿಕೆ ಮಾಡುವಷ್ಟರಲ್ಲಿ ಪ್ರಮುಖ ಐದು ವಿಕೆಟ್ ಕಳೆದುಕೊಂಡು ಸೋಲಿನ ಭೀತಿಗೆ ಒಳಗಾಗಿತ್ತು. ಈ ವೇಳೆ ಒಂದಾದ ಗ್ರಾಡನೆರ್(52) ಹಾಗೂ ಗ್ರೆಸ್(37) ತಂಡಕ್ಕೆ ಉತ್ತಮ ಜೊತೆಯಾಟ ನೀಡಿದರು. ಕೊನೆಯದಾಗಿ ಕಿಂಗ್ ಅಜೇಯ 18ರನ್ಗಳಿಕೆ ಮಾಡಿ ತಂಡವನ್ನ ಗೆಲುವಿನ ದಡ ಸೇರಿಸಿದರು. ತಂಡದ ಪರ ರೇಣುಕಾ ಸಿಂಗ್ 4 ವಿಕೆಟ್ ಪಡೆದುಕೊಂಡರೆ, ದೀಪ್ತಿ ಶರ್ಮಾ 2 ಹಾಗೂ ಮೇಘಾ ಸಿಂಗ್ 1 ವಿಕೆಟ್ ಕಿತ್ತರು.
ಇದನ್ನೂ ಓದಿರಿ: Commonwealth Games ಟಿ -20 ಕ್ರಿಕೆಟ್: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ