ಚೆನ್ನೈ: 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ ಉಳಿದ ಪಂದ್ಯಗಳನ್ನಾಡಲು ಈಗಾಗಲೇ ವೇಳಾಪಟ್ಟಿ ನಿಗದಿಯಾಗಿದೆ. ಹೀಗಾಗಿ ಎಲ್ಲ ತಂಡಗಳು ಅಲ್ಲಿಗೆ ಪ್ರಯಾಣ ಬೆಳೆಸಲು ಯೋಜನೆ ರೂಪಿಸಿಕೊಂಡಿವೆ. ಮೊದಲನೇ ತಂಡವಾಗಿ ಚೆನ್ನೈ ಸೂಪರ್ ಕಿಂಗ್ಸ್ ಯುಎಇಗೆ ತೆರಳಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಇಂದು ಚೆನ್ನೈಗೆ ಆಗಮಿಸಿದ್ದು, ತಂಡದ ಭಾರತೀಯ ಇತರ ಸದಸ್ಯರೊಂದಿಗೆ ಆಗಸ್ಟ್ 13ರಂದು ಇವರು UAEನತ್ತ ಪ್ರಯಾಣ ಬೆಳೆಸುವ ಸಾಧ್ಯತೆ ದಟ್ಟವಾಗಿದೆ. ಮುಂದಿನ ತಿಂಗಳು ಸೆಪ್ಟೆಂಬರ್ 19ರಿಂದ ಯುಎಇನಲ್ಲಿ ಉಳಿದ ಪಂದ್ಯಗಳು ಆರಂಭಗೊಳ್ಳುತ್ತಿದ್ದು, ಮೊದಲ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ.
-
Lion Day Entry 🔥
— Chennai Super Kings - Mask P😷du Whistle P🥳du! (@ChennaiIPL) August 10, 2021 " class="align-text-top noRightClick twitterSection" data="
📍Anbuden Chennai#ThalaDharisanam #WhistlePodu #Yellove 🦁💛 pic.twitter.com/Ci2G4vBuEQ
">Lion Day Entry 🔥
— Chennai Super Kings - Mask P😷du Whistle P🥳du! (@ChennaiIPL) August 10, 2021
📍Anbuden Chennai#ThalaDharisanam #WhistlePodu #Yellove 🦁💛 pic.twitter.com/Ci2G4vBuEQLion Day Entry 🔥
— Chennai Super Kings - Mask P😷du Whistle P🥳du! (@ChennaiIPL) August 10, 2021
📍Anbuden Chennai#ThalaDharisanam #WhistlePodu #Yellove 🦁💛 pic.twitter.com/Ci2G4vBuEQ
ಆಗಸ್ಟ್ 10ರ ನಂತರ ಎಲ್ಲ ಫ್ರಾಂಚೈಸಿಗಳು ದುಬೈಗೆ ತೆರಳಬಹುದು ಎಂದು ಬಿಸಿಸಿಐ ಈಗಾಗಲೇ ಅನುಮತಿ ನೀಡಿರುವ ಕಾರಣ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಆಗಸ್ಟ್ 13ರಂದು ಪ್ರಯಾಣ ಬೆಳೆಸುವ ನಿರ್ಧಾರ ಮಾಡಿದೆ. ಮಹೇಂದ್ರ ಸಿಂಗ್ ಧೋನಿ ಚೆನ್ನೈಗೆ ಆಗಮಿಸಿರುವ ಫೋಟೋವೊಂದನ್ನ ಸಿಎಸ್ಕೆ ತನ್ನ ಟ್ವಿಟರ್ ಅಕೌಂಟ್ನಲ್ಲಿ ಹಾಕಿಕೊಂಡಿದೆ.
ಭಾರತದಲ್ಲಿ ನಡೆಯುತ್ತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ವಿವಿಧ ಫ್ರಾಂಚೈಸಿ ಆಟಗಾರರಲ್ಲಿ ಕೊರೊನಾ ಸೋಂಕು ದೃಢಗೊಳ್ಳುತ್ತಿದ್ದಂತೆ ಟೂರ್ನಿ ಅರ್ಧಕ್ಕೆ ಮೊಟಕು ಗೊಂಡಿತ್ತು. ಸಿಎಸ್ಕೆ 7 ಪಂದ್ಯಗಳನ್ನಾಡಿದ್ದು, ಇದರಲ್ಲಿ 5 ಪಂದ್ಯ ಗೆದ್ದು 10 ಪಾಯಿಂಟ್ಗಳೊಂದಿಗೆ ಎರಡನೇ ಸ್ಥಾನದಲ್ಲಿ ಡೆಲ್ಲಿ ತಂಡ 6 ಪಂದ್ಯದಲ್ಲಿ ಗೆದ್ದು ಮೊದಲ ಸ್ಥಾನ ಹಾಗೂ ಆರ್ಸಿಬಿ 5 ಪಂದ್ಯಗಳಲ್ಲಿ ಗೆದ್ದು ಮೂರನೇ ಸ್ಥಾನದಲ್ಲಿದೆ.