ನವದೆಹಲಿ: ಕೋವಿಡ್ 19 ಸಾಂಕ್ರಾಮಿಕದ ಕಾರಣ ಒಂದು ವಾರ ತಡವಾಗಿ ಭಾರತ ತಂಡ ದಕ್ಷಿಣ ಆಫ್ರಿಕಾಗೆ ಪ್ರವಾಸ ಬೆಳೆಸುವುದರಿಂದ ಸಿಎಸ್ಎ ಭಾರತ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಯ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಈ ಮೊದಲು ಡಿಸೆಂಬರ್ 17ರಿಂದ ಮೊದಲ ಟೆಸ್ಟ್ ಪ್ರಾರಂಭವಾಗಬೇಕಿತ್ತು. ಆದರೆ, ಪರಿಸ್ಕೃತ ವೇಳಾಪಟ್ಟಿ ಪ್ರಕಾರ ಬಾಕ್ಸಿಂಗ್ ಡೇ ಟೆಸ್ಟ್ ಡಿಸೆಂಬರ್ 26ರಿಂದ ಸೆಂಚುರಿಯನ್ನ ಸೂಪರ್ಸ್ಪೋರ್ಟ್ ಪಾರ್ಕ್ನಲ್ಲಿ ಆರಂಭವಾಗಲಿದೆ. 2ನೇ ಟೆಸ್ಟ್ ಪಂದ್ಯ ಹೊಸ ವರ್ಷದಲ್ಲಿ ಜನವರಿ 3ರಿಂದ 7ರವರೆಗೆ ಜೋಹಾನ್ಸ್ಬರ್ಗ್ನಲ್ಲಿ ಮತ್ತು 3ನೇ ಟೆಸ್ಟ್ ಪಂದ್ಯ ಕೇಪ್ಟೌನ್ನಲ್ಲಿ ಜನವರಿ 11ರಿಂದ 15ವರೆಗೆ ನಡೆಯಲಿದೆ.
ಇನ್ನು ಏಕದಿನ ಸರಣಿ ಜನವರಿ 19, 21 ರಂದು ಪಾರ್ಲ್ನಲ್ಲಿ ಮತ್ತು 23 ರಂದು 3ನೇ ಪಂದ್ಯ ಕೇಪ್ಟೌನ್ನಲ್ಲಿ ನಡೆಯಲಿದೆ.
ಟೆಸ್ಟ್ ಸರಣಿ ನೂತನ ವಿಶ್ವ ಟೆಸ್ಟ್ ಚಾಂಪಿಯನ್ಸ್ಶಿಪ್ನ ಭಾಗವಾಗಲಿದೆ. ಏಕದಿನ ಸರಣಿ ಐಸಿಸಿ ವಿಶ್ವಕಪ್ ಸೂಪರ್ ಲೀಗ್ನ ಭಾಗವಾಗಲಿದೆ. ಭಾರತ ತಂಡ 2023ರ ಏಕದಿನ ವಿಶ್ವಕಪ್ನ ಆತಿಥ್ಯ ವಹಿಸಿಕೊಂಡಿರುವುದರಿಂದ ನೇರ ಅರ್ಹತೆ ಪಡೆದುಕೊಂಡಿದೆ.
ಇದನ್ನೂ ಓದಿ:'2 ವರ್ಷಗಳೇ ಬೇಕಾಯ್ತು'; ಭಾರತ ತಂಡದ ಕೋಚ್ ಆಗಲು ದ್ರಾವಿಡ್ರನ್ನು ಒಪ್ಪಿಸಿದ ಬಗೆಯನ್ನು ವಿವರಿಸಿದ ದಾದಾ