ETV Bharat / sports

ವದಂತಿ ನಂಬಬೇಡಿ.. ದಾಂಪತ್ಯ ಜೀವನದಲ್ಲಿ ಬಿರುಕು ವಿಚಾರಕ್ಕೆ ಚಹಲ್ ಸ್ಪಷ್ಟನೆ - ಕ್ರಿಕೆಟರ್ ಚಹಲ್ ಸ್ಪಷ್ಟನೆ

ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದೆ ಎನ್ನಲಾಗಿರುವ ವದಂತಿಗೆ ಸಂಬಂಧಿಸಿದಂತೆ ಇದೀಗ ಕ್ರಿಕೆಟರ್ ಚಹಲ್ ಸ್ಪಷ್ಟನೆ ನೀಡಿದ್ದಾರೆ.

Cricketer Yuzvendra Chahal
Cricketer Yuzvendra Chahal
author img

By

Published : Aug 18, 2022, 6:50 PM IST

Updated : Aug 18, 2022, 6:58 PM IST

ಹೈದರಾಬಾದ್​​: ಕ್ರಿಕೆಟರ್ ಯಜುವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀ ವರ್ಮಾ ನಡುವಿನ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದೆ ಎಂಬ ವದಂತಿಗಳು ಹರಿಹಾದಾಡುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ಬೌಲರ್​​ ಚಹಲ್ ಖುದ್ದಾಗಿ​ ಸ್ಪಷ್ಟನೆ ನೀಡಿದ್ದಾರೆ.

ಧನಶ್ರೀ ಸೋಷಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯರಾಗಿದ್ದು, ಪ್ರತಿದಿನ ಏನಾದರೂ ಒಂದನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. 5 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್​ಗಳನ್ನು ಹೊಂದಿರುವ ಧನಶ್ರೀ, ಇದೀಗ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ತಮ್ಮ ಹೆಸರಿನ ಹಿಂದಿದ್ದ ಪತಿ ಚಹಾಲ್ ಅವರ ಹೆಸರನ್ನು ತೆಗೆದುಹಾಕಿದ್ದರು. ಇದರ ಬೆನ್ನಲ್ಲೇ ಇಬ್ಬರ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ ಎಂಬ ವದಂತಿ ಹಬ್ಬಿತ್ತು. ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವೈರಲ್​ ಆಗಿತ್ತು.

ಸ್ಪಷ್ಟನೆ ನೀಡಿದ ಚಹಲ್​: ಧನಶ್ರೀ ಜೊತೆಗಿನ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿಲ್ಲ ಎಂದು ಇದೀಗ ಚಹಲ್​ ಸ್ಪಷ್ಟನೆ ನೀಡಿದ್ದಾರೆ. ವೈವಾಹಿಕ ಜೀವನದ ಬಗ್ಗೆ ಪ್ರಕಟಗೊಂಡಿರುವ ವದಂತಿ ನಂಬಬೇಡಿ. ನಿಮ್ಮೆಲ್ಲರ ಬಳಿ ನಾನು ವಿನಮ್ರವಾಗಿ ವಿನಂತಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ಯಾವುದೇ ರೀತಿಯ ಸುದ್ದಿ ನಂಬಬೇಡಿ ಎಂದಿದ್ದು, ನಮ್ಮ ಬಾಂಧವ್ಯದ ಕುರಿತಾದ ಯಾವುದೇ ವದಂತಿಗಳನ್ನು ದಯವಿಟ್ಟು ನಂಬಬೇಡಿ. ಇದಕ್ಕೆ ಇಲ್ಲಿಯೇ ಅಂತ್ಯಹಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Cricketer Yuzvendra Chahal
ಇನ್​​ಸ್ಟಾಗ್ರಾಂ ಮೂಲಕ ಚಹಲ್ ಸ್ಪಷ್ಟನೆ

ಚಹಲ್​ ಹಾಗೂ ಧನಶ್ರೀ 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಕೆಲವೊಂದು ವರದಿಗಳ ಪ್ರಕಾರ ಧನಶ್ರೀ ಗರ್ಭಿಣಿಯಾಗಿದ್ದಾರೆಂಬ ಮಾತುಗಳು ಕೇಳಿ ಬರಲಾರಂಭಿಸಿವೆ. ಧನಶ್ರೀ ವರ್ಮಾ ಯುಟ್ಯೂಬರ್ ಮತ್ತು ನೃತ್ಯ ಸಂಯೋಜಕಿ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್​ ಹೊಂದಿದ್ದಾರೆ.

ಇದನ್ನೂ ಓದಿ: ಕ್ರಿಕೆಟಿಗ ಯಜುವೇಂದ್ರ ಚಹಾಲ್ ಧನಶ್ರೀ ದಂಪತಿ ನಡುವೆ ಮನಸ್ತಾಪ?

ಚಹಲ್ ಪತ್ನಿ ಧನಶ್ರೀ ವರ್ಮಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹೆಸರಿನ ಮುಂದೆ ಪತಿ ಚಹಲ್ ಹೆಸರು ಸೇರಿಸಿದ್ದರು. ಆದರೆ, ಇದೀಗ ಈ ಹೆಸರು ಬದಲಾಗಿದ್ದು, ಕೇವಲ ಧನಶ್ರೀ ಎಂಬ ಹೆಸರು ಉಳಿದುಕೊಂಡಿದೆ. ಹೀಗಾಗಿ, ಹಲವು ಅನುಮಾನಗಳು ಅವರ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ, ಇದಕ್ಕೆ ಖುದ್ದಾಗಿ ಚಹಲ್ ಸ್ಪಷ್ಟನೆ ನೀಡಿದ್ದಾರೆ.

ಜಿಂಬಾಬ್ವೆ ವಿರುದ್ಧದ ಕ್ರಿಕೆಟ್ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿರುವ ಸ್ಪಿನ್ನರ್ ಚಹಲ್ ಏಷ್ಯಾಕಪ್ ತಂಡದಲ್ಲಿ ಭಾರತದ ಪರ ಕಣಕ್ಕಿಳಿಯಲಿದ್ದಾರೆ. ಚಹಲ್ ಟೀಂ ಇಂಡಿಯಾದ ಪ್ರಮುಖ ಬೌಲರ್​ ಆಗಿದ್ದು, ಐಪಿಎಲ್​​ನಲ್ಲೂ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಮಿಂಚು ಹರಿಸಿದ್ದಾರೆ.

Last Updated : Aug 18, 2022, 6:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.