ಶ್ರೀನಗರ(ಜಮ್ಮು ಕಾಶ್ಮೀರ) : ಮಾಜಿ ಭಾರತ ತಂಡದ ಆಲ್ರೌಂಡರ್ ಸುರೇಶ್ ರೈನಾ ಬುಧವಾರ ಜಮ್ಮು -ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ರಾಜಭವನದಲ್ಲಿ ಭೇಟಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಕ್ರಿಕೆಟ್ ತಮ್ಮ ಅಕಾಡೆಮಿಯ ಕಾರ್ಯವೈಖರಿ ಮತ್ತು ಯುಟಿಯಲ್ಲಿ ಯುವ ಕ್ರೀಡಾ ಪ್ರತಿಭೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಬೆಳೆಸಲು ತಾವೂ ದತ್ತು ತೆಗೆದುಕೊಂಡಿರುವ ಶಾಲೆಗಳ ಬಗ್ಗೆ ರೈನಾ ಲೆಫ್ಟಿನೆಂಟ್ ಗವರ್ನರ್ ಅವರಿಗೆ ತಿಳಿಸಿದ್ದಾರೆ.
ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರಿಕೆಟ್ ಸೇರಿದಂತೆ ಕ್ರೀಡೆಗಳನ್ನು ಅಭಿವೃದ್ಧಿ ಪಡಿಸಲು ತಾವೂ ಸಿದ್ಧಪಡಿಸಿಕೊಂಡಿರುವ ಭವಿಷ್ಯದ ಕಾರ್ಯತಂತ್ರದ ಬಗ್ಗೆ ಲೆಫ್ಟಿನೆಂಟ್ ಗವರ್ನರ್ಗೆ ವಿವರಿಸಿದರು. ಈ ವೇಳೆ, ತಮ್ಮೆ ಕ್ರಿಕೆಟ್ ಜೀವನ ಕುರಿತು ಹೊರತಂದಿರುವ 'ಬಿಲೀವ್' ಪುಸ್ತಕವನ್ನು ಉಡುಗೊರೆಯಾಗಿ ಮನೋಜ್ ಸಿನ್ಹಾ ಅವರಿಗೆ ನೀಡಿದರು.
ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದಲ್ಲಿ ಕ್ರೀಡಾ ಸಂಸ್ಕೃತಿಗೆ ಉತ್ತೇಜನ ನೀಡುವಲ್ಲಿ ರೈನಾ ಪ್ರಯತ್ನವನ್ನು ಶ್ಲಾಘಿಸಿದರು. ಅಲ್ಲದೇ ಈ ಪ್ರಯತ್ನಕ್ಕೆ ತಮ್ಮ ಆಡಳಿತದಿಂದ ಎಲ್ಲ ರೀತಿಯ ಬೆಂಬಲ ನೀಡುವ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.
ಇದನ್ನು ಓದಿ:ಈ ಕಾರಣದಿಂದ ಸೌತಾಂಪ್ಟನ್ನಲ್ಲಿ ಅಶ್ವಿನ್-ಜಡೇಜಾ ಇಬ್ಬರೂ ಆಡ್ಬೇಕು : ಸುನೀಲ್ ಗವಾಸ್ಕರ್