ETV Bharat / sports

ಸಿನಿ ಲೋಕಕ್ಕೆ ಕಾಲಿಟ್ಟ ಯುವ ಕ್ರಿಕೆಟಿಗ ಗಿಲ್​​: ಇಂಡಿಯನ್​ ಸ್ಪೈಡರ್ ಮ್ಯಾನ್ ಪವಿತ್ರಾ ಪ್ರಭಾಕರ್​ಗೆ ಶುಭಮನ್ ಧ್ವನಿ - ETV Bharath Kannada news x

ಕ್ರಿಕೆಟಿಗ ಶುಭಮನ್ ಗಿಲ್ ಅವರು ಸೋನಿ ಪಿಕ್ಚರ್ಸ್ ನಿರ್ಮಾಣದ ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್-ವರ್ಸ್ ಸಿನಿಮಾಕ್ಕೆ ಕಂಠದಾನ ಮಾಡಿದ್ದಾರೆ. ಪವಿತ್ರ್ ಪ್ರಭಾಕರ್ ಹೆಸರಿನ ಸ್ಪೈಡರ್ ಮ್ಯಾನ್​ಗೆ ಹಿಂದಿ ಮತ್ತು ಪಂಜಾಬಿ ಆವೃತ್ತಿಗಳಲ್ಲಿ ಡಬ್ಬಿಂಗ್​ ಕಲಾವಿದನಾಗಿ ಧ್ವನಿ ನೀಡಿದ್ದಾರೆ.

Cricketer Shubman Gill lends voice to Indian Spider-man Pavitr Prabhakar
ಸಿನಿ ಲೋಕಕ್ಕೆ ಕಾಲಿಟ್ಟ ಯುವ ಕ್ರಿಕೆಟಿಗ ಗಿಲ್​​: ಇಂಡಿಯನ್​ ಸ್ಪೈಡರ್ ಮ್ಯಾನ್ ಪವಿತ್ರಾ ಪ್ರಭಾಕರ್​ಗೆ ಶುಭಮನ್ ಧ್ವನಿ
author img

By

Published : May 8, 2023, 4:21 PM IST

ಮುಂಬೈ: ಈ ವರ್ಷ ಕ್ರಿಕೆಟಿಗ ಶುಭಮನ್​ ಗಿಲ್​ಗೆ ಗೋಲ್ಡನ್ ಇಯರ್​ ಎಂದು ಹೇಳಿದರೆ ತಪ್ಪಾಗದು. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮೂರೂ ವಿಭಾಗದಲ್ಲಿ ಸತತ ಶತಕಗಳ ಮೇಲೇ ಶತಕ ಸಿಡಿಸಿ ಗಮನ ಸೆಳೆದಿದ್ದರು. 16ನೇ ಆವೃತ್ತಿಯ ಐಪಿಎಲ್​ನಲ್ಲಿ ಗುಜರಾತ್​ ತಂಡದಲ್ಲಿ ಆರಂಭಿಕರಾಗಿಯೂ ಭರ್ಜರಿ ಬ್ಯಾಟಿಂಗ್​ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಸಿನಿಮಾ ರಂಗಕ್ಕೂ ಗಿಲ್ ಈ ವರ್ಷ ತಮ್ಮ ಪದಾರ್ಪಣೆ ಮಾಡಲಿದ್ದಾರೆ.

  • Shub-Man is now Spider-Man! 🕸️🏏

    Thrilled to have the talented @ShubmanGill as the voice of our very own - Indian Spider-Man, Pavitr Prabhakar in Spider-Man: Across the #SpiderVerse.
    Trailer dropping soon! Get ready for some web-slinging action! 🕷️🇮🇳 pic.twitter.com/k38p4Gorkw

    — Sony Pictures India (@SonyPicsIndia) May 8, 2023 " class="align-text-top noRightClick twitterSection" data=" ">

ಭಾರತೀಯ ಕ್ರಿಕೆಟಿಗ ಶುಭಮನ್ ಗಿಲ್ ಅವರು ಸ್ಪೈಡರ್ ಮ್ಯಾನ್ ಪವಿತ್ರ ಪ್ರಭಾಕರ್ ಅವರ ಹಿಂದಿ ಮತ್ತು ಪಂಜಾಬಿ ಆವೃತ್ತಿಗಳಿಗೆ ಧ್ವನಿ ನೀಡಿದ್ದಾರೆ. ಚಿತ್ರದ ಹಿಂದಿ ಮತ್ತು ಪಂಜಾಬಿ ಆವೃತ್ತಿಗಳು ಕ್ರಿಕೆಟಿಗ ಶುಭಮನ್ ಗಿಲ್ ಅವರ ಧ್ವನಿಯನ್ನು ಒಳಗೊಂಡಿರುತ್ತವೆ. ಈ ಮೂಲಕ ಚಲನ ಚಿತ್ರಕ್ಕೆ ಕಂಠದಾನ ಮಾಡಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಒಳಗಾಗಿದ್ದಾರೆ.

ಭಾರತೀಯ ಸ್ಪೈಡರ್ ಮ್ಯಾನ್, ಪವಿತ್ರ್ ಪ್ರಭಾಕರ್ ಅವರಿಗೆ ತಮ್ಮ ಧ್ವನಿಯನ್ನು ನೀಡುವ ಬಗ್ಗೆ ಮಾತನಾಡಿದ ಶುಭಮನ್​ ಗಿಲ್​,"ನಾನು ಸ್ಪೈಡರ್ ಮ್ಯಾನ್ ಅನ್ನು ನೋಡುತ್ತಾ ಬೆಳೆದಿದ್ದೇನೆ. ನಾನು ಬಾಲ್ಯದಲ್ಲಿ ಇಷ್ಟ ಪಡುತ್ತಿದ್ದ ಸೂಪರ್​ ಹೀರೋ ಪಾತ್ರ ಸ್ಪೈಡರ್ ಮ್ಯಾನ್. ಈ ಚಲನಚಿತ್ರದ ಮೂಕಲ ಭಾರತೀಯ ಸ್ಪೈಡರ್ ಮ್ಯಾನ್ ಪದಾರ್ಪಣೆಯಾಗಲಿದೆ. ಹಿಂದಿ ಮತ್ತು ಪಂಜಾಬಿ ಭಾಷೆಗಳಲ್ಲಿ ನಮ್ಮ ಭಾರತೀಯ ಸ್ಪೈಡರ್ ಮ್ಯಾನ್ ಪವಿತ್ರಾ ಪ್ರಭಾಕರ್ ಅವರ ಮೊದಲ ಬಾರಿಗೆ ತೆರೆಯ ಮೇಲೆ ಧ್ವನಿಯಾಗುತ್ತಿರುವುದು ನನಗೆ ಉತ್ತಮ ಅನುಭವವಾಗಿದೆ. ಈಗಾಗಲೇ, ನಾನು ಅತಿಮಾನುಷ ಎಂದು ಭಾವಿಸುತ್ತೇನೆ. ನಾನು ಈ ಚಲನಚಿತ್ರದ ಬಿಡುಗಡೆಯನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ" ಎಂದಿದ್ದಾರೆ.

ಸೋನಿ ಪಿಕ್ಚರ್ಸ್ ರಿಲೀಸಿಂಗ್ ಇಂಟರ್‌ನ್ಯಾಶನಲ್ (SPRI) ಇಂಡಿಯಾದ ಜನರಲ್ ಮ್ಯಾನೇಜರ್ ಮತ್ತು ಹೆಡ್ ಆಗಿರುವ ಶೋನಿ ಪಂಜಿಕರನ್ ಮಾತನಾಡಿ,"ಜೂನ್ 2 ದೇಶಾದ್ಯಂತ ಎಲ್ಲ ಸ್ಪೈಡರ್ ಮ್ಯಾನ್ ಅಭಿಮಾನಿಗಳಿಗೆ ಒಂದು ಮಹತ್ವದ ಸಂದರ್ಭವಾಗಿದೆ. ಪ್ರತಿಯೊಬ್ಬರೂ ಸ್ಪೈಡರ್ ಮ್ಯಾನ್​ಗೆ ನೀಡಿದ ಪ್ರೀತಿಯನ್ನು ಇದಕ್ಕೆ ತೋರಿಸುತ್ತಾರೆ ಎಂದು ನಮಗೆ ಖಚಿತವಾಗಿದೆ. ಇತ್ತೀಚೆಗೆ ಬಿಡುಗಡೆಯಾದ 'ಸ್ಪೈಡರ್ ಮ್ಯಾನ್: ನೋ ವೇ ಹೋಮ್'ನ ರೀತಿಯೇ ಈ ಚಿತ್ರವನ್ನು ಮಾಡಲಾಗಿದೆ" ಎಂದಿದ್ದಾರೆ.

"ಶುಭಮನ್​ ಗಿಲ್​ ಅವರೊಂದಿಗೆ ಸೇರಿ ಕಾರ್ಯನಿರ್ವಹಿಸಿರುವುದು ತುಂಬಾ ಸಂತೋಷ ಕೊಟ್ಟಿದೆ. ಏಕೆಂದರೆ ಅವರು ಕೇವಲ ಯೂತ್ ಐಕಾನ್ ಆಗಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಪ್ರತಿನಿಧಿಸುತ್ತಿರುವ ಅವರು ರಿಯಲ್​ ಸೂಪರ್​ ಮ್ಯಾನ್​ ಮತ್ತು ಈ ನೆಲದ ಹೀರೋ ಆಗಿದ್ದಾರೆ. ಅವರ ಧ್ವನಿಯಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಚಿತ್ರ ಮನರಂಜಿಸಲಿದೆ" ಎಂದು ಅವರು ಹೇಳಿದರು.

ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ ಇಂಡಿಯಾ ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್-ವರ್ಸ್ ಅನ್ನು ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಗುಜರಾತಿ, ಮರಾಠಿ, ಪಂಜಾಬಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಜೂನ್​ 2, 2023 ರಂದು ಬಿಡುಗಡೆಯಾಗಲಿದೆ.

ಐಪಿಎಲ್ 2023ರಲ್ಲಿ ಶುಭ್​ಮನ್ ಗಿಲ್ ಗುಜರಾತ್ ಟೈಟಾನ್ಸ್‌ ಆರಂಭಿಕರಾಗಿ ಉತ್ತಮ ಫಾರ್ಮ್‌ನಲ್ಲಿದ್ದು, ಈ ವರೆಗೆ ಬಲಗೈ ಬ್ಯಾಟರ್ 11 ಪಂದ್ಯಗಳಲ್ಲಿ 46.90 ಸರಾಸರಿಯಲ್ಲಿ 469 ರನ್ ಗಳಿಸಿದ್ದಾರೆ. ಅವರು ಈ ಋತುವಿನಲ್ಲಿ 4 ಅರ್ಧ ಶತಕಗಳನ್ನು ಗಳಿಸಿದ್ದು, ಕಳೆದ ಪಂದ್ಯದಲ್ಲಿ 5 ರನ್​ನಿಂದ ಶತಕ ವಂಚಿತರಾಗಿದ್ದಾರೆ. ಈ ಆವೃತ್ತಿಯಲ್ಲಿ 143.43 ಸ್ಟ್ರೈಕ್ ರೇಟ್ ಅನ್ನು ಹೊಂದಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ ರಾಯಲ್ಸ್​ ವಿರುದ್ಧ ಸನ್​'ರೈಸ್​'! 4 ವಿಕೆಟ್​ಗಳ ರೋಚಕ ಜಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.