ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ನ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಈ ಸಲ ಕೆಲವೊಂದು ದೇಶಿ ಪ್ರತಿಭೆಗಳಿಗೆ ಇನ್ನಿಲ್ಲದ ಬೇಡಿಕೆ ಕೇಳಿ ಬಂದಿದೆ. ಪ್ರಸಕ್ತ ಋತುವಿನ ದೇಶಿ ಕ್ರಿಕೆಟ್ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ತಮಿಳುನಾಡಿನ ಶಾರುಖ್ ಖಾನ್ ಖರೀದಿ ಮಾಡಲು ಫ್ರಾಂಚೈಸಿಗಳು ಮುಗಿಬಿದ್ದು, ದಾಖಲೆಯ 9 ಕೋಟಿ ರೂ. ನೀಡಿ ಖರೀದಿ ಮಾಡಿವೆ.
ಕರ್ನಾಟಕ ವಿರುದ್ಧ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಫೈನಲ್ ಪಂದ್ಯದ ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿ ತಮಿಳುನಾಡು ತಂಡಕ್ಕೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಶಾರುಖ್ ಖಾನ್ ಪಂಜಾಬ್ ಪಾಲಾಗಿದ್ದಾರೆ.
ಇದನ್ನೂ ಓದಿರಿ: ರಾಮನಗರ್ ವಿಕೆಟ್ ಕೀಪರ್ಗೆ RCB ಮಣೆ: ₹3.40 ಕೋಟಿ ನೀಡಿ ಅನುಜ್ ರಾವತ್ ಖರೀದಿಸಿದ ಬೆಂಗಳೂರು!
ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಯಲ್ಲಿ ತಮಿಳುನಾಡಿನ ಸ್ಫೋಟಕ ಬ್ಯಾಟ್ಸಮನ್ ಶಾರೂಖ್ ಖಾನ್ ಮೂಲ ಬೆಲೆ 40 ಲಕ್ಷ ರೂ. ಘೋಷಣೆ ಮಾಡಿಕೊಂಡಿದ್ದರು. ಹರಾಜು ಪ್ರಕ್ರಿಯೆಯಲ್ಲಿ ಈ ಯಂಗ್ ಪ್ಲೇಯರ್ ಖರೀದಿ ಮಾಡಲು ಅನೇಕ ಫ್ರಾಂಚೈಸಿಗಳು ಪೈಪೋಟಿ ನಡೆಸಿದ್ದವು. ಪ್ರಮುಖವಾಗಿ ಚೈನ್ನೈ ಸೂಪರ್ ಕಿಂಗ್ಸ್, ಪಂಜಾಬ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಕಂಡು ಬಂದಿತು. ಆದರೆ, ಕೊನೆಯದಾಗಿ ಈ ಪ್ಲೇಯರ್ಗೆ ಪಂಜಾಬ್ 9 ಕೋಟಿ ರೂ. ನೀಡಿ ಖರೀದಿ ಮಾಡಿದೆ. ಕಳೆದ ವರ್ಷದ ಹರಾಜು ಪ್ರಕ್ರಿಯೆಯಲ್ಲೂ ಈ ಪ್ಲೇಯರ್ಗೆ ಪಂಜಾಬ್ 5.25 ಕೋಟಿ ರೂ. ನೀಡಿತ್ತು. ಕಳೆದ ವರ್ಷದ ಹರಾಜು ಪ್ರಕ್ರಿಯೆಯಲ್ಲಿ ಈ ಪ್ಲೇಯರ್ ತಮ್ಮ ಮೂಲ ಬೆಲೆ 20 ಲಕ್ಷ ರೂ. ಘೋಷಣೆ ಮಾಡಿಕೊಂಡಿದ್ದರು.
ದೇಶಿ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಶಾರುಖ್ ಖಾನ್, ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕದಿನ ತಂಡಕ್ಕಾಗಿ ಘೋಷಣೆಯಾದ ಪ್ಲೇಯರ್ಸ್ಗಳಲ್ಲಿ ಕೋವಿಡ್ ಕಾಣಿಸಿಕೊಂಡಿದ್ದ ಕಾರಣ ಈ ಪ್ಲೇಯರ್ ಹೆಚ್ಚುವರಿಯಾಗಿ ತಂಡ ಸೇರಿಕೊಂಡಿದ್ದರು.