ETV Bharat / sports

Sarfaraz Khan: ಕಾಶ್ಮೀರಿ ಯುವತಿಯನ್ನು ವರಿಸಿದ ಮುಂಬೈ ಕ್ರಿಕೆಟರ್​ ಸರ್ಫರಾಜ್​ ಖಾನ್ - ETV Bharath Kannada news

ದೇಶಿ ಕ್ರಿಕೆಟ್​ನ ಸ್ಟಾರ್​ ಆಟಗಾರ ಸರ್ಫರಾಜ್​ ಖಾನ್​ ಕಣಿವೆ ರಾಜ್ಯ ಕಾಶ್ಮೀರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Sarfaraz Khan
ಸರ್ಫರಾಜ್​ ಖಾನ್
author img

By

Published : Aug 7, 2023, 3:27 PM IST

ಶೋಪಿಯಾನ್ (ಜಮ್ಮು ಮತ್ತು ಕಾಶ್ಮೀರ): ದೇಶಿ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರ ಸರ್ಫರಾಜ್​ ಖಾನ್​ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈನ ಆಟಗಾರ ಸರ್ಫರಾಜ್​ ಕಣಿವೆ ರಾಜ್ಯವಾದ ಜಮ್ಮು ಕಾಶ್ಮೀರದ ಯುವತಿಯನ್ನು ವರಿಸಿದ್ದಾರೆ. ತಮ್ಮ ವಿವಾಹದ ಬಗ್ಗೆ ಸರ್ಫರಾಜ್​ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಶೇರ್​ ಮಾಡಿಕೊಳ್ಳುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ ಆಡುವ ಸರ್ಫರಾಜ್​ ಕಪ್ಪು ಶೆರ್ವಾನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಟ್ವಿಟರ್​ನಲ್ಲಿ ವಿವಾಹ ಸಂದರ್ಭದ ಕೆಲ ವಿಡಿಯೋಗಳು ಹರಿದಾಡುತ್ತಿವೆ.

ಕ್ರಿಕೆಟರ್​​​ಗಳಾದ ಸೂರ್ಯಕುಮಾರ್​ ಯಾದವ್​, ಉಮ್ರಾನ್​ ಮಲಿಕ್​, ರುತುರಾಜ್​ ಗಾಯಕ್ವಾಡ್​, ಮಂದೀಪ್​ ಸಿಂಗ್​, ಕಲೀಲ್​ ಅಹಮದ್, ತಿಲಕ್​ ವರ್ಮಾ​ ಮತ್ತು ಅಕ್ಷರ್​ ಪಟೇಲ್​ ಇನ್​ಸ್ಟಾಗ್ರಾಮ್​ನಲ್ಲಿ ಕಮೆಂಟ್​ ಮಾಡಿ ಶುಭಹಾರೈಸಿದ್ದಾರೆ.

ಸರ್ಫರಾಜ್ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದಲ್ಲಿ ಉತ್ತಮ ಸ್ಕೋರ್​ ಮಾಡಿದ ಸಾಧನೆಗೈದಿದ್ದಾರೆ. 37 ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರು 79.65ರ ಸರಾಸರಿಯಲ್ಲಿ ರನ್​ ಕಲೆಹಾಕಿದ್ದು, 13 ಶತಕ ಸೇರಿಸಿ 3505 ರನ್​ ಗಳಿಸಿದ್ದಾರೆ. ದೇಶಿಯ ಪಂದ್ಯಗಳಲ್ಲಿ ಅಜೇಯ 301 ಅತ್ಯುತ್ತಮ ಸ್ಕೋರ್​ ಆಗಿದೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅವರು 26 ಪಂದ್ಯಗಳಲ್ಲಿ 39.08 ಸರಾಸರಿಯೊಂದಿಗೆ ಎರಡು ಶತಕ ಸಹಿತ 469 ರನ್ ಗಳಿಸಿದ್ದಾರೆ.

2022-23 ರ ರಣಜಿ ಟ್ರೋಫಿ ಋತುವಿನಲ್ಲಿ, ಸರ್ಫರಾಜ್ 92.66 ರ ಸರಾಸರಿಯೊಂದಿಗೆ ಬ್ಯಾಟ್​ ಮಾಡಿದ ಅವರು 6 ಪಂದ್ಯದಲ್ಲಿ ಮೂರು ಶತಕಗಳಿಸಿ 556 ರನ್ ಗಳಿಸಿದ್ದಾರೆ. ಮುಂಬೈ ಬ್ಯಾಟರ್ 2022 ರ ರಣಜಿ ಋತುವಿನಲ್ಲೂ ಭರ್ಜರಿ ಬ್ಯಾಟಿಂಗ್​ ಪ್ರದರ್ಶನವನ್ನು ನೀಡಿದ್ದರು. ಆರು ಪಂದ್ಯದಲ್ಲಿ 122.75 ಸರಾಸರಿಯಲ್ಲಿ 982 ರನ್ ಗಳಿಸಿದ್ದರು. 2019-2020ರ ರಣಜಿ ಟ್ರೋಫಿಯಲ್ಲಿ ಟಾಪ್​ ಐದು ಸ್ಕೋರ್​ ಮಾಡಿದವರ ಪಟ್ಟಿಯಲ್ಲಿದ್ದರು. ಅವರು ಆರು ಪಂದ್ಯಗಳಲ್ಲಿ 154.66 ಸರಾಸರಿಯೊಂದಿಗೆ 928 ರನ್ ಗಳಿಸಿದರು.

ಆದರೆ 16ನೇ ಆವೃತ್ತಿಯ ಐಪಿಎಲ್​ನಲ್ಲಿ ರನ್​ ಗಳಿಸುವಲ್ಲಿ ಯಶಸ್ಸು ಕಾಣಲಿಲ್ಲ. ಆದರೆ ಪ್ರಥಮ ದರ್ಜೆಯಲ್ಲಿ ಉತ್ತಮ ಫಾರ್ಮ್​ನ್ನು ಮಾತ್ರ ಕಳೆದ ಮೂರು ವರ್ಷಗಳಿಂದ ಹೊಂದಿದ್ದರು. ಆದರೆ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗುವಲ್ಲಿ ವಿಫಲತೆ ಅನುಭವಿಸುತ್ತಿದ್ದಾರೆ. ದೇಶಿ ಕ್ರಿಕೆಟ್​ನ ಟೆಸ್ಟ್​ ಮಾದರಿಯಲ್ಲಿ ಉತ್ತಮ ಅಂಕಿ ಅಂಶಗಳನ್ನು ಹೊಂದಿದ್ದರೂ ವೆಸ್ಟ್​ ಇಂಡೀಸ್​​ ಪ್ರವಾಸಕ್ಕೆ, ಇಂಗ್ಲೆಂಡ್​ನಲ್ಲಿ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೂ ಆಯ್ಕೆ ಆಗಿಲ್ಲ. ಅವರು ಫಿಟ್​ನೆಸ್​​​ ಕಾಯ್ದುಕೊಳ್ಳದಿರುವುದು ಮತ್ತು ಅಗ್ರೆಸಿವ್​ ನಡವಳಿಕೆಯೂ ಅವರ ರಾಷ್ಟ್ರೀಯ ತಂಡದ ಆಯ್ಕೆಗೆ ತಡೆಯಾಗುತ್ತಿದೆ.

ಇದನ್ನೂ ಓದಿ: Lionel Messi: ಮೆಸ್ಸಿಯ ರೋಮಾಂಚನಕಾರಿ ಫ್ರೀ ಕಿಕ್.. ಡಲ್ಲಾಸ್​ ವಿರುದ್ಧ ಮಿಯಾಮಿಗೆ ಗೆಲುವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.