ETV Bharat / sports

ಪ. ಬಂಗಾಳ ಚುನಾವಣೆ : ಟಿಎಂಸಿ ಅಭ್ಯರ್ಥಿ ಕ್ರಿಕೆಟಿಗ ಮನೋಜ್ ತಿವಾರಿ ಭರ್ಜರಿ ಜಯ - west Bengal election results

36 ವರ್ಷದ ಮಾಜಿ ಕ್ರಿಕೆಟಿಗ ಗ್ರೇಟರ್​ ಕೋಲ್ಕತ್ತಾ ಪ್ರಾಂತ್ಯದ ಹೌರಾಹ್ ಜಿಲ್ಲೆಯ ಶಿಬ್​ಪುರ್​ ಕ್ಷೇತ್ರದಲ್ಲಿ ಬಿಜೆಪಿಯ ರತಿನ್ ಚಕ್ರಬೊರ್ತಿ ವಿರುದ್ಧ 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಮನೋಜ್ ತಿವಾರಿಗೆ ಜಯ
ಮನೋಜ್ ತಿವಾರಿಗೆ ಜಯ
author img

By

Published : May 2, 2021, 4:31 PM IST

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ಶಿಬ್​ಪುರ್​ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಬಿಜೆಪಿ ಅಭ್ಯರ್ಥಿಗೆ ಸೋಲುಣಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

36 ವರ್ಷದ ಮಾಜಿ ಕ್ರಿಕೆಟಿಗ ಗ್ರೇಟರ್​ ಕೋಲ್ಕತ್ತಾ ಪ್ರಾಂತ್ಯದ ಹೌರಾ ಜಿಲ್ಲೆಯ ಶಿಬ್​ಪುರ್​ ಕ್ಷೇತ್ರದಲ್ಲಿ ಬಿಜೆಪಿಯ ರತಿನ್ ಚಕ್ರಬೊರ್ತಿ ವಿರುದ್ಧ 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

2016ರಲ್ಲಿ ಈ ಕ್ಷೇತ್ರದಿಂದ ಎಐಎಓಫ್​ಬಿಯ ಜತು ಲಹಿರಿ ಗೆಲುವು ಸಾಧಿಸಿದ್ದರು. 2011ರಲ್ಲಿ ಚುನಾವಣೆಯಲ್ಲಿ ಲಹಿರಿ ಟಿಎಂಸಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

15 ವರ್ಷ ಕ್ರಿಕೆಟ್​ನಲ್ಲಿ ಸಕ್ರಿಯಾಗಿದ್ದ ಮನೋಜ್ ತಿವಾರಿ ಭಾರತ ಮತ್ತು ಪಶ್ಚಿಮ ಬಂಗಾಳ ತಂಡಗಳನ್ನು ಪ್ರತಿನಿಧಿಸಿದ್ದರು. ಅವರು ಭಾರತ ತಂಡದ ಪರ 12 ಏಕದಿನ ಮತ್ತು 3 ಟಿ20 ಪಂದ್ಯಗಳನ್ನಾಡಿದ್ದಾರೆ. 125 ಪ್ರಥಮ ದರ್ಜೆ ಕ್ರಿಕೆಟ್​ ಪಂದ್ಯಗಳಿಂದ 8965 ರನ್​ಗಳಿಸಿರುವ ಅವರು 27 ಶತಕ ಕೂಡ ಬಾರಿಸಿದ್ದಾರೆ.

ಇದನ್ನು ಓದಿ:ಮಸ್ಕಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಭಾರಿ ಗೆಲುವು..​ ಪ್ರತಾಪ್​ಗೌಡಗೆ ಹೀನಾಯ ಸೋಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.