ಲಾಹೋರ್ (ಪಾಕಿಸ್ತಾನ): ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ತಂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಮೊದಲೆರಡು ಪಂದ್ಯ ಗೆದ್ದು ಮತ್ತೆರಡರಲ್ಲಿ ಸೋತಿದೆ. ಹೀಗಿರುವಾಗ ತಂಡದಲ್ಲಿ ಆಂತರಿಕ ಜಗಳ ನಡೆಯುತ್ತಿದೆ ಎಂಬುದಾಗಿ ಪಾಕಿಸ್ತಾನಿ ಮಾಧ್ಯಮಗಳೇ ವರದಿ ಮಾಡಿದ್ದವು. ಆದರೆ ತಂಡದಲ್ಲಿ ಭಿನ್ನಾಭಿಪ್ರಾಯ ಇದೆ ಎಂಬ ವಾದವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಳ್ಳಿಹಾಕಿದೆ.
- " class="align-text-top noRightClick twitterSection" data="">
ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಸಾಧಾರಣ ಪ್ರದರ್ಶನ ನೀಡಿ ಸೋಲನುಭವಿಸಿತು. ಇದಾದ ನಂತರ ತಂಡದ ಆಟಗಾರರ ನಡುವೆ ವಾದ-ವಿವಾದಗಳು ನಡೆದು ಮನಸ್ತಾಪ ಉಂಟಾಗಿದೆ. ತಂಡ ಎರಡು ಬಣವಾಗಿ ವಿಂಗಡಣೆಯಾಗಿದೆ ಎನ್ನಲಾಗಿತ್ತು. ಇದೀಗ, ಬಾಬರ್ ಆಜಂ ನೇತೃತ್ವದ ತಂಡದಲ್ಲಿನ ಭಿನ್ನಾಭಿಪ್ರಾಯದ ವದಂತಿಗಳನ್ನು ಬಲವಾಗಿ ನಿರಾಕರಿಸುವ ಹೇಳಿಕೆಯನ್ನು ಪಿಸಿಬಿ ನೀಡಿದೆ.
" class="align-text-top noRightClick twitterSection" data=""ಪ್ರಸ್ತುತ ಐಸಿಸಿ ವಿಶ್ವಕಪ್ 2023ರಲ್ಲಿ ಭಾಗವಹಿಸುತ್ತಿರುವ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಯಾವುದೇ ಆಂತರಿಕ ಭಿನ್ನಾಭಿಪ್ರಾಯದ ಬಗ್ಗೆ ಇತ್ತೀಚಿನ ಊಹಾಪೋಹಗಳನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಲವಾಗಿ ನಿರಾಕರಿಸುತ್ತದೆ. ಮಾಧ್ಯಮದ ಒಂದು ನಿರ್ದಿಷ್ಟ ವಿಭಾಗವು ವದಂತಿ ಹರಡಿದೆ. ತಂಡವು ಒಗ್ಗಟ್ಟಾಗಿದೆ .ಆಧಾರರಹಿತ ಆರೋಪಕ್ಕೆ ಯಾವುದೇ ಪುರಾವೆಗಳಿಲ್ಲ"- ಪಿಸಿಬಿ
PCB statement ⤵️ pic.twitter.com/qo8mFoVqq1
— PCB Media (@TheRealPCBMedia) October 23, 2023
">PCB statement ⤵️ pic.twitter.com/qo8mFoVqq1
— PCB Media (@TheRealPCBMedia) October 23, 2023
PCB statement ⤵️ pic.twitter.com/qo8mFoVqq1
— PCB Media (@TheRealPCBMedia) October 23, 2023