ನವದೆಹಲಿ: ವಿರಾಟ್ ಕೊಹ್ಲಿ ಈ ವರ್ಷ ಅದ್ಭುತ ಫಾರ್ಮ್ನಲ್ಲಿದ್ದಾರೆ. ವಿಶ್ವಕಪ್ ಕ್ರಿಕೆಟ್‌ನ ಮೊದಲ ಪಂದ್ಯದಲ್ಲಿ ತಮ್ಮ ರನ್ ಹಸಿವು ತೋರಿಸಿರುವ ಕೊಹ್ಲಿ, ಎರಡನೇ ಪಂದ್ಯವನ್ನು ನಾಳೆ ತಮ್ಮ ತವರು ಮೈದಾನದಲ್ಲಿ ಆಡುತ್ತಿದ್ದಾರೆ. ತಾವು ಆಡಿ ಬೆಳೆದ ಮೈದಾನದಲ್ಲೇ ವಿಶ್ವಕಪ್ನ ಪಂದ್ಯ ಆಡುತ್ತಿರುವುದು ಯಾವುದೇ ಆಟಗಾರನಿಗೂ ಸ್ಮರಣೀಯ ಅನುಭವ ನೀಡುತ್ತದೆ.
ಲೀಗ್ ಹಂತದ ತನ್ನ ಎರಡನೇ ಪಂದ್ಯದಲ್ಲಿ ಭಾರತ ಅಫ್ಘಾನಿಸ್ತಾನವನ್ನು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಎದುರಿಸಲಿದೆ. ಈ ಮೈದಾನದ ವಿಶೇಷತೆಗಳನ್ನು ಅರಿತಿರುವ ವಿರಾಟ್ಗೆ ಹೆಚ್ಚು ಲಾಭವಾಗುವ ಸಾಧ್ಯತೆ ಇದೆ. ಹೀಗಾಗಿ ವಿರಾಟ್ ಬ್ಯಾಟಿಂಗ್ ಮೇಲೆ ಕ್ರಿಕೆಟ್ ಅಭಿಮಾನಿಗಳಿಗೂ ಸಾಕಷ್ಟು ನಿರೀಕ್ಷೆ ಇದೆ. ಈ ಕುರಿತು ವಿರಾಟ್ ಕೊಹ್ಲಿ- ಕೆ.ಎಲ್.ರಾಹುಲ್ ಸಂಭಾಷಣೆಯ ವಿಡಿಯೋವನ್ನು ಬಿಸಿಸಿಐ ಎಕ್ಸ್ ಆ್ಯಪ್ನಲ್ಲಿ ಹಂಚಿಕೊಂಡಿದೆ.
-
They both got #TeamIndia the first win of #CWC23 💪
— BCCI (@BCCI) October 9, 2023 " class="align-text-top noRightClick twitterSection" data="
As the bandwagon moves to Delhi, here's @imVkohli & @klrahul dissecting their match-winning partnership against Australia 👌
P.S. The local lad is bracing himself for his homecoming 🏟️
Watch the full interview 🎥 👇… pic.twitter.com/HSXYovY43T
">They both got #TeamIndia the first win of #CWC23 💪
— BCCI (@BCCI) October 9, 2023
As the bandwagon moves to Delhi, here's @imVkohli & @klrahul dissecting their match-winning partnership against Australia 👌
P.S. The local lad is bracing himself for his homecoming 🏟️
Watch the full interview 🎥 👇… pic.twitter.com/HSXYovY43TThey both got #TeamIndia the first win of #CWC23 💪
— BCCI (@BCCI) October 9, 2023
As the bandwagon moves to Delhi, here's @imVkohli & @klrahul dissecting their match-winning partnership against Australia 👌
P.S. The local lad is bracing himself for his homecoming 🏟️
Watch the full interview 🎥 👇… pic.twitter.com/HSXYovY43T
ಭಾರತ ತಂಡದ ಅನುಭವಿ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಕೆ.ಎಲ್.ರಾಹುಲ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 165 ರನ್‌ಗಳ ಜೊತೆಯಾಟವಾಡಿ ಪಂದ್ಯದ ಗೆಲುವಿಗೆ ಕಾರಣರಾಗಿದ್ದರು. ವಿರಾಟ್ 85 ಮತ್ತು ರಾಹುಲ್ 97 ರನ್‌ಗಳ ಅಮೋಘ ಇನ್ನಿಂಗ್ಸ್ 2 ರನ್‌ಗೆ 3 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಆಸರೆಯಾಗಿತ್ತು.
ನಾಳಿನ ಪಂದ್ಯದಲ್ಲಿ ಭಾರತ ಯಾವುದೇ ಬದಲಾವಣೆ ಇಲ್ಲದೇ ಕಣಕ್ಕಿಳಿಯುವ ಸಾಧ್ಯತೆ ಇದೆ. ಆರಂಭಿಕ ಶುಭ್‌ಮನ್ ಗಿಲ್ ಜ್ವರದಿಂದ ಬಳಲುತ್ತಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಬಿಸಿಸಿಐ ಪ್ರಕಟಣೆಯ ಪ್ರಕಾರ, ಅವರು ನಾಳಿನ ಪಂದ್ಯದಲ್ಲಿ ಆಡುವುದಿಲ್ಲ. ಹೀಗಾಗಿ ಆರಂಭಿಕರಾಗಿ ಇಶಾನ್ ಕಿಶನ್ ಮುಂದುವರೆಯಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಒಬ್ಬ ಸ್ಪಿನ್ನರ್ಗೆ ಕೊಕ್ ಸಿಗಬಹುದು. ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣ ಸಂಪೂರ್ಣ ಸ್ಪಿನ್ ಸ್ನೇಹಿ ಆಗಿದ್ದರಿಂದ ಮೂವರು ಸ್ಪಿನ್ನರ್ಗಳು ಮೈದಾನಕ್ಕಿಳಿದಿದ್ದರು. ದೆಹಲಿಯಲ್ಲಿ ಶಾರ್ದೂಲ್ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಈ ಹಿಂದೆ ನಾಯಕ ರೋಹಿತ್ ಶರ್ಮಾ ಆಡುವ 11 ಬಳಗದ ಆಯ್ಕೆ ಬಗ್ಗೆ ಮಾತನಾಡುವಾಗ ಪಿಚ್ ಆಧರಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದರು.
ಇದನ್ನೂ ಓದಿ: ICC Cricket World Cup 2023: ಕೆಎಲ್ ರಾಹುಲ್ಗೆ ಗಾಯವೇ ವರವಾಯ್ತೆ?.. ಕಮ್ಬ್ಯಾಕ್ ಬಳಿಕ ರೊಚ್ಚಿಗೇಳುತ್ತಿರುವ ಕನ್ನಡಿಗ!