ETV Bharat / sports

Cricket World Cup 2023: ಧರ್ಮಶಾಲಾದಲ್ಲಿ ರನ್​ಗಳ ಹೊಳೆ ಹರಿಸಲಿವೆಯಾ ಇಂಗ್ಲೆಂಡ್​ - ಬಾಂಗ್ಲಾ?.. 10.30ಕ್ಕೆ ಟಾಸ್​

Cricket World Cup 2023: ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ನಡುವೆ ಪಂದ್ಯ ನಡೆಯಲಿದೆ. ಇಂಗ್ಲೆಂಡ್ ತಂಡ ಮೊದಲ ಜಯಕ್ಕಾಗಿ ಕಾಯುತ್ತಿದ್ದಾರೆ. ಅದರಂತೆ ಎರಡನೇ ಗೆಲುವು ಸಾಧಿಸಲ ಬಾಂಗ್ಲಾದೇಶ ತಂತ್ರ ರೂಪಿಸುತ್ತಿದೆ.

ICC World Cup match  Dharamshala Cricket Stadium  World Cup match in Dharamshala  England vs Bangladesh Match  match in Dharamshala Cricket Stadium  ICC World Cup 2023  ಧರ್ಮಶಾಲಾದಲ್ಲಿ ರನ್​ಗಳ ಹೊಳೆ ಹರಿಸಲಿದೆ  Cricket World Cup 2023  ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ನಡುವೆ ಪಂದ್ಯ  ಇಂಗ್ಲೆಂಡ್ ತಂಡ ಮೊದಲ ಜಯ  ಐಸಿಸಿ ಕ್ರಿಕೆಟ್ ವಿಶ್ವಕಪ್ 2023  ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂ  ಬಾಂಗ್ಲಾದೇಶ ತಂಡವು ವಿಶ್ವಕಪ್‌ನಲ್ಲಿ ಉತ್ತಮ ಆರಂಭ
ಧರ್ಮಶಾಲಾದಲ್ಲಿ ರನ್​ಗಳ ಹೊಳೆ ಹರಿಸಲಿದೆ ಇಂಗ್ಲೆಂಡ್​-ಬಾಂಗ್ಲಾ, 10.30ಕ್ಕೆ ಟಾಸ್​
author img

By ETV Bharat Karnataka Team

Published : Oct 10, 2023, 9:43 AM IST

ಧರ್ಮಶಾಲಾ, ಹಿಮಾಚಲ ಪ್ರದೇಶ: ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಇವೆಂಟ್​ನಲ್ಲಿ ಇಂದು ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಧರ್ಮಶಾಲಾದಲ್ಲಿ ಪಂದ್ಯ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಟಾಸ್ ಬಳಿಕ ಆಟ ಆರಂಭವಾಗಲಿದೆ. ಇದಕ್ಕೂ ಮೊದಲು ಅಕ್ಟೋಬರ್ 7 ರಂದು ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವೆ ಪಂದ್ಯ ನಡೆದಿತ್ತು. ಅಫ್ಘಾನಿಸ್ತಾನ ವಿರುದ್ಧ ಬಾಂಗ್ಲಾದೇಶ ಭರ್ಜರಿ ಗೆಲುವು ಸಾಧಿಸಿತ್ತು.

ಧರ್ಮಶಾಲಾದಲ್ಲಿ ಇಂದಿನ ಪಂದ್ಯಕ್ಕೂ ಮುನ್ನ ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ತಂಡಗಳು ಕಳೆದ ಕೆಲವು ದಿನಗಳಿಂದ ವ್ಯಾಪಕ ಅಭ್ಯಾಸ ನಡೆಸಿವೆ. ಅಕ್ಟೋಬರ್ 5 ರಂದು ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ 9 ವಿಕೆಟ್‌ಗಳಿಂದ ಇಂಗ್ಲೆಂಡ್ ಅನ್ನು ಸೋಲಿಸಿತು. ಅಕ್ಟೋಬರ್ 7 ರಂದು ಧರ್ಮಶಾಲಾದಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸುವ ಮೂಲಕ ಬಾಂಗ್ಲಾದೇಶ ತಂಡವು ವಿಶ್ವಕಪ್‌ನಲ್ಲಿ ಉತ್ತಮ ಆರಂಭ ಕಂಡುಕೊಂಡಿದೆ. ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್ ತನ್ನ ಮೊದಲ ಗೆಲುವು ಸಾಧಿಸಲು ಸಜ್ಜಾಗಿದ್ದು, ಬಾಂಗ್ಲಾದೇಶಕ್ಕೆ ಪೈಪೋಟಿ ನೀಡಲು ಇಂಗ್ಲೆಂಡ್​ ಮೈದಾನಕ್ಕಿಳಿಯಲಿದೆ. ಬಾಂಗ್ಲಾದೇಶ ತಂಡ ಎರಡನೇ ಗೆಲುವು ಸಾಧಿಸಲು ಮೈದಾನದಲ್ಲಿ ಬೆವರು ಹರಿಸುತ್ತಿರುವ ದೃಶ್ಯ ಕಂಡುಬಂತು.

ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡಿದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್, ಐಪಿಎಲ್ ಪಂದ್ಯಗಳ ವೇಳೆ ತಮ್ಮ ತಂಡದ ಹಲವು ಆಟಗಾರರು ಧರ್ಮಶಾಲಾ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ಆಡಿದ್ದಾರೆ. ಇದರಿಂದಾಗಿ ಈ ಆಟಗಾರರ ಅನುಭವದಿಂದ ತಂಡಕ್ಕೆ ಲಾಭವಾಗಲಿದೆ. ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ಪ್ರದರ್ಶನ ಶ್ಲಾಘಿಸಿದರು. ಬಾಂಗ್ಲಾದೇಶ ಕ್ರಿಕೆಟ್ ತಂಡ ಕೂಡ ಉತ್ತಮ ಪ್ರದರ್ಶನ ನೀಡುತ್ತಿದೆ ಎಂದರು.

ನಾವು ಯಾವುದೇ ತಂಡವನ್ನು ಕಡಿಮೆ ಅಂದಾಜು ಮಾಡಲು ಸಾಧ್ಯವಿಲ್ಲ. ಧರ್ಮಶಾಲಾ ಪಿಚ್‌ಗೆ ಅನುಗುಣವಾಗಿ ಇಂಗ್ಲೆಂಡ್ ತಂಡದ ಯೋಜನೆ ಉತ್ತಮವಾಗಿರುತ್ತದೆ. ವಿಶ್ವಕಪ್ ಪಂದ್ಯಗಳನ್ನು ಗೆಲ್ಲಲು ಇಂಗ್ಲೆಂಡ್ ಕ್ರಿಕೆಟ್ ತಂಡ ಸಂಪೂರ್ಣ ಸಜ್ಜಾಗಿದೆ ಎಂದು ಜೋಸ್ ಬಟ್ಲರ್ ಹೇಳಿದ್ದರು.

ಸಂಭಾವ್ಯ ಇಂಗ್ಲೆಂಡ್​ ತಂಡ: ಜಾನಿ ಬೈರ್‌ಸ್ಟೋವ್, ಡೇವಿಡ್ ಮಲನ್, ಜೋ ರೂಟ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಜೋಸ್ ಬಟ್ಲರ್ (ನಾಯಕ ಮತ್ತು ವಿಕೆಟ್​ ಕೀಪರ್​), ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರಾನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್..

ಸಂಭಾವ್ಯ ಬಾಂಗ್ಲಾದೇಶ ತಂಡ: ತಂಝಿದ್ ತಮೀಮ್, ಲಿಟ್ಟನ್ ದಾಸ್, ಮೆಹಿದಿ ಹಸನ್ ಮಿರಾಜ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್ (ನಾಯಕ), ತೌಹಿದ್ ಹೃದಯೋಯ್, ಮುಶ್ಫಿಕರ್ ರಹೀಮ್ (ವಿಕೆಟ್​ ಕೀಪರ್​), ಮಹಮ್ಮದುಲ್ಲಾ / ನಸುಮ್ ಅಹ್ಮದ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರಹಮಾನ್..

ಓದಿ: 128 ವರ್ಷಗಳ ಬಳಿಕ 2028ರ ಒಲಿಂಪಿಕ್ಸ್​​ಗೆ ಕ್ರಿಕೆಟ್​ ಸೇರ್ಪಡೆ: ಅ.15ರಂದು ಅಧಿಕೃತ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.