ಹೈದರಾಬಾದ್: ಐಸಿಸಿ ಪುರುಷರ ಟೆಸ್ಟ್ ಶ್ರೇಯಾಂಕವನ್ನು ಬುಧವಾರ ಬಿಡುಗಡೆ ಮಾಡಲಾಗಿದ್ದು, ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ (901) ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಥಾನದಲ್ಲಿ ಯಾವುದೇ ಬದಲಾವಣೆ ಕಾಣದೇ ನಾಲ್ಕನೇ ಸ್ಥಾನದಲ್ಲೇ ಉಳಿದುಕೊಂಡಿದ್ದಾರೆ.
-
🇳🇿 @BLACKCAPS captain Kane Williamson is back to the No.1 spot in the latest @MRFWorldwide ICC Men's Test Player Rankings for batting.
— ICC (@ICC) June 30, 2021 " class="align-text-top noRightClick twitterSection" data="
Full list: https://t.co/OMjjVx5Mgf pic.twitter.com/1DWGBonmF2
">🇳🇿 @BLACKCAPS captain Kane Williamson is back to the No.1 spot in the latest @MRFWorldwide ICC Men's Test Player Rankings for batting.
— ICC (@ICC) June 30, 2021
Full list: https://t.co/OMjjVx5Mgf pic.twitter.com/1DWGBonmF2🇳🇿 @BLACKCAPS captain Kane Williamson is back to the No.1 spot in the latest @MRFWorldwide ICC Men's Test Player Rankings for batting.
— ICC (@ICC) June 30, 2021
Full list: https://t.co/OMjjVx5Mgf pic.twitter.com/1DWGBonmF2
ಈ ಮೊದಲು ಅಗ್ರಸ್ಥಾನದಲ್ಲಿ ಆಸೀಸ್ ಆಟಗಾರ ಸ್ಟೀವ್ ಸ್ಮಿತ್ (891) ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಭಾರತ ವಿರುದ್ಧದ ಪ್ರತಿಷ್ಠಿತ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಕಿವೀಸ್ ನಾಯಕ ಕೇನ್ ಎರಡು ಇನ್ನಿಂಗ್ಸ್‌ಗಳಲ್ಲಿ 101 ರನ್ ಗಳಿಸಿದಕ್ಕೆ ಈ ಅದೃಷ್ಟ ಒಲಿದಿದೆ. ಇನ್ನೊಬ್ಬ ಕಿವೀಸ್ ಬ್ಯಾಟ್ಸ್‌ಮನ್ ರಾಸ್ ಟೇಲರ್ ಮೂರು ಸ್ಥಾನಗಳನ್ನು ಹಿಂದಿಕ್ಕಿ 14 ನೇ ಸ್ಥಾನಕ್ಕೆ ಜಂಪ್ ಆಗಿದ್ದಾರೆ. ಕಿವೀಸ್ ಓಪನರ್ ಕಾನ್ವೇ 18 ಸ್ಥಾನಗಳನ್ನು ಹಿಂದಿಕ್ಕಿ 42 ನೇ ಸ್ಥಾನಕ್ಕೆ ಬಂದಿದ್ದಾರೆ.
ಇನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಥಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ಅವರು 812 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲೇ ತಟಸ್ಥರಾಗಿದ್ದಾರೆ. ರೋಹಿತ್ ಶರ್ಮಾ ಆರನೇ ಮತ್ತು ರಿಷಭ್ ಪಂತ್ ಏಳನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಉಪನಾಯಕ ಅಜಿಂಕ್ಯ ರಹಾನೆ ಮೂರು ಸ್ಥಾನಗಳನ್ನು ಬಡ್ತಿ ಪಡೆದು 13 ನೇ ಸ್ಥಾನವನ್ನು ತಮ್ಮದಾಗಿಸಿ ಕೊಂಡಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ವಿಂಡೀಸ್ ಆಟಗಾರ ಜೇಸನ್ ಹೋಲ್ಡರ್ ಮತ್ತೆ ಮೇಲಕ್ಕೆ ಬಂದಿದ್ದಾರೆ.
ನ್ಯೂಜಿಲ್ಯಾಂಡ್ನ ಕೈಲ್ ಜಾಮಿಸನ್ ಅವರ ವೃತ್ತಿಜೀವನದ ಅತ್ಯುತ್ತಮ ಬೌಲರ್ ಎಂದು ಹೆಸರಿಸಲಾಗಿದೆ. ಡಬ್ಲ್ಯುಟಿಸಿ ಫೈನಲ್‌ನಲ್ಲಿ ಏಳು ವಿಕೆಟ್‌ಗಳನ್ನು ಕಬಳಿಸುವ ಮೂಲಕ 13 ನೇ ಸ್ಥಾನ ಪಡೆದಿದ್ದಾರೆ. ಐದು ವಿಕೆಟ್‌ಗಳೊಂದಿಗೆ ಮಿಂಚಿದ ಟ್ರೆಂಟ್ ಬೌಲ್ಟ್ ಎರಡು ಸ್ಥಾನಗಳ ಏರಿಕೆ ಕಂಡು 11ನೇ ಸ್ಥಾನವನ್ನು ಅಲಂಕರಿಸಿದ್ದಾರೆ.