ETV Bharat / sports

ಕ್ರಿಕೆಟ್​​ ಟಿ20 ವಿಶ್ವಕಪ್‌: ಅಕ್ಟೋಬರ್​ 24ಕ್ಕೆ ಭಾರತ-ಪಾಕ್ ಹಣಾಹಣಿ

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಂದಿನ ಟಿ-20 ವಿಶ್ವಕಪ್​ನಲ್ಲಿ ಒಂದೇ ಗುಂಪಿನಲ್ಲಿ ಆಡಲಿದ್ದು, ಮೊದಲ ಪಂದ್ಯ ಅಕ್ಟೋಬರ್ 24ರಂದು ನಡೆಯಲಿದೆ.

T20 WC: India to face arch-rivals Pakistan on October 24
ಕ್ರಿಕೆಟ್​​ ಟಿ20 ವಿಶ್ವಕಪ್‌: ಅಕ್ಟೋಬರ್​ 24ಕ್ಕೆ ಭಾರತ-ಪಾಕ್ ಹಣಾಹಣಿ
author img

By

Published : Aug 4, 2021, 1:34 PM IST

ನವದೆಹಲಿ: ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಪಂದ್ಯ ಅಕ್ಟೋಬರ್ 24ರಂದು ದುಬೈನಲ್ಲಿ ನಡೆಯಲಿದೆ ಎಂದು ಎಎನ್​​ಐ ಸುದ್ದಿಸಂಸ್ಥೆಗೆ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಟಿ20 ವಿಶ್ವಕಪ್ 2021ಕ್ಕೆ ಬಿಸಿಸಿಐ ಆತಿಥ್ಯ ವಹಿಸಲಿದ್ದು, ಪಂದ್ಯಗಳು ಒಮನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ನಡೆಯಲಿವೆ ಎಂದು ಕಳೆದ ತಿಂಗಳು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಘೋಷಣೆ ಮಾಡಿತ್ತು.

ಮಾರ್ಚ್ 20, 2021ರ ವೇಳೆಗೆ ಇದ್ದ ಶ್ರೇಯಾಂಕಗಳ ಆಧಾರದ ಮೇಲೆ ಗುಂಪುಗಳನ್ನು ಆಯ್ಕೆ ಮಾಡಲಾಗಿತ್ತು. ಹಾಲಿ ಚಾಂಪಿಯನ್‌ ವೆಸ್ಟ್ ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೂಪರ್ 12ರ ಗ್ರೂಪ್ ಒಂದರಲ್ಲಿವೆ. ಗ್ರೂಪ್ ಎರಡರಲ್ಲಿ ಭಾರತ ಮತ್ತು ಪಾಕಿಸ್ತಾನ, ನ್ಯೂಜಿಲ್ಯಾಂಡ್, ಅಫ್ಘಾನಿಸ್ತಾನ ಮುಂತಾದ ತಂಡಗಳಿವೆ.

ಇದನ್ನೂ ಓದಿ: Tokyo Olympics Wrestling: ಕುಸ್ತಿಯಲ್ಲಿ ಸೆಮಿ ಫೈನಲ್​ಗೇರಿದ ದೀಪಕ್ ಪೂನಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.