ಲಂಡನ್: 2019ರ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ನೀರಸ ಪ್ರದರ್ಶನ ತೋರುತ್ತಿದ್ದು, ಇದಕ್ಕೆ ಪಾಕ್ ತಂಡದ ನಾಯಕ ಸರ್ಫರಾಜ್ ಅಹ್ಮದ್ರನ್ನ ದೂಷಿಸಲಾಗುತ್ತಿದೆ. ಈ ನಡುವೆ ಪಾಕ್ ಅಭಿಮಾನಿಯೊಬ್ಬ ಸರ್ಫರಾಜ್ರನ್ನ ಸಾರ್ವಜನಿಕವಾಗಿ ಅವಮಾನಿಸಿರುವ ವಿಡಿಯೋ ಸಖತ್ ವೈರಲ್ ಆಗಿದೆ.
-
A shameful act by a Pakistani fan with captain Sarfaraz Ahmed, this is how we treat our National Heros. Highly condemnable!! 😡 pic.twitter.com/WzAj0RaFI7
— Syed Raza Mehdi (@SyedRezaMehdi) June 21, 2019 " class="align-text-top noRightClick twitterSection" data="
">A shameful act by a Pakistani fan with captain Sarfaraz Ahmed, this is how we treat our National Heros. Highly condemnable!! 😡 pic.twitter.com/WzAj0RaFI7
— Syed Raza Mehdi (@SyedRezaMehdi) June 21, 2019A shameful act by a Pakistani fan with captain Sarfaraz Ahmed, this is how we treat our National Heros. Highly condemnable!! 😡 pic.twitter.com/WzAj0RaFI7
— Syed Raza Mehdi (@SyedRezaMehdi) June 21, 2019
ಪಾಕ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ತನ್ನ ಮಗನೊಂದಿಗೆ ಮಾಲ್ವೊಂದರಲ್ಲಿ ಶಾಪಿಂಗ್ಗೆ ತೆರಳಿರುವಾಗ ಅಭಿಮಾನಿಯೊಬ್ಬ ಸೆಲ್ಫಿಗಾಗಿ ಸರ್ಫರಾಜ್ರನ್ನ ಕೇಳಿಕೊಳ್ಳುತ್ತಾನೆ. ಜೊತೆಯಲ್ಲಿ ಪುತ್ರನಿರುವ ಕಾರಣ ಸರ್ಫರಾಜ್ ಸೆಲ್ಫಿಗೆ ನಿರಾಕರಿಸುತ್ತಾರೆ.
ಇದರಿಂದ ಕೋಪಗೊಂಡ ಅಭಿಮಾನಿ ಸರ್ಫರಾಜ್ರನ್ನ ನಿಂದಿಸಲು ಪ್ರಾರಂಭಿಸುತ್ತಾನೆ. ನೀವೇಕೆ ಹಂದಿಯಂತೆ ದಪ್ಪಗಿದ್ದೀರಾ ಎಂದು ಜರಿದಿದ್ದಾನೆ. ಈ ವೇಳೆ ತಾಳ್ಮೆ ಪ್ರದರ್ಶಿಸಿದ ಸರ್ಫರಾಜ್ ಏನೊಂದು ಮಾತನಾಡದೇ ಸುಮ್ಮನೆ ತೆರಳುತ್ತಾರೆ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಅಭಿಮಾನಿಯ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ತನ್ನ ದೇಶವನ್ನ ಪ್ರತಿನಿಧಿಸುವ ಒಬ್ಬ ಕ್ರೀಡಾಪಟುವನ್ನ ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಅವಮಾನಿಸೋದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಇತ್ತ ಅಭಿಮಾನಿ ನಿಂದಿಸಿದರೂ ತಾಳ್ಮೆ ಪ್ರದರ್ಶಿಸಿದ ಪಾಕ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ನಡೆಗೂ ಮೆಚ್ಚುಗೆ ವ್ಯಕ್ತವಾಗಿದೆ.
-
This is How We Treat Our National Hero and Our Cricket Team Captain Who Represents Us in the Whole World!
— Sabeel Shahzad(BLESSED WBian 😊) (@SabeelShahzad3) June 21, 2019 " class="align-text-top noRightClick twitterSection" data="
There is a Huge Difference Between Criticizing and Misbehaving. 😡
">This is How We Treat Our National Hero and Our Cricket Team Captain Who Represents Us in the Whole World!
— Sabeel Shahzad(BLESSED WBian 😊) (@SabeelShahzad3) June 21, 2019
There is a Huge Difference Between Criticizing and Misbehaving. 😡This is How We Treat Our National Hero and Our Cricket Team Captain Who Represents Us in the Whole World!
— Sabeel Shahzad(BLESSED WBian 😊) (@SabeelShahzad3) June 21, 2019
There is a Huge Difference Between Criticizing and Misbehaving. 😡
ಕಳೆದ ಕೆಲ ಪಂದ್ಯಗಳಲ್ಲಿ ಸೋಲು ಕಂಡಿರುವ ಪಾಕಿಸ್ತಾನ ತಂಡದ ವಿರುದ್ಧ ಅಭಿಮಾನಿಗಳು ಮತ್ತು ಹಲವು ಮಾಜಿ ಕ್ರಿಕೆಟ್ ಆಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಪಾಕ್ ಆಟಗಾರ ಶೋಯಬ್ ಅಖ್ತರ್ ಕೂಡ ಸರ್ಫರಾಜ್ನದ್ದು ಬುದ್ಧಿಹೀನ ನಾಯಕತ್ವ ಎಂದು ಜರಿದಿದ್ದರು.