ETV Bharat / sports

T20 World Cup ಅಭ್ಯಾಸ ಪಂದ್ಯ : ಕಿಶನ್, ರಾಹುಲ್ ಬ್ಯಾಟಿಂಗ್ ಅಬ್ಬರ .. ಟೀಂ ಇಂಡಿಯಾಗೆ ಗೆಲುವು - ಭಾರತ vs ಇಂಗ್ಲೆಂಡ್

ಟಿ-20 ವಿಶ್ವಕಪ್​​ನ ಮೊದಲ ಅಭ್ಯಾಸ ಪಂದ್ಯದಲ್ಲಿ ಇಶಾನ್ ಕಿಶನ್ ಮತ್ತು ಕೆ.ಎಲ್​.ರಾಹುಲ್ ಅಬ್ಬರದ ಬ್ಯಾಟಿಂಗ್ ನಡೆಸಿದ್ದು, ಭಾರತ ತಂಡ ಗೆಲುವು ಸಾಧಿಸಿದೆ.

rahul-kishan-power-india-to-seven-wicket-win-over-england-in-warm-up-game
T20 World Cup ಅಭ್ಯಾಸ ಪಂದ್ಯ : ಕಿಶನ್, ರಾಹುಲ್ ಬ್ಯಾಟಿಂಗ್ ಅಬ್ಬರ .. ಟೀಂ ಇಂಡಿಯಾಗೆ ಗೆಲುವು
author img

By

Published : Oct 19, 2021, 12:10 AM IST

ದುಬೈ: ಟಿ-20 ವಿಶ್ವಕಪ್​​ನ ಮೊದಲ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಕೆ.ಎಲ್.ರಾಹುಲ್ ಮತ್ತ ಇಶಾನ್ ಕಿಶನ್ ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ್ದಾರೆ.

ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊಹಮದ್ ಶಮಿ ಮೂರು ವಿಕೆಟ್​​​ಗಳನ್ನು ಗಳಿಸಿದ್ದು, ಏಳು ವಿಕೆಟ್​ಗಳ ಅಂತರದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ.

ಇಶಾನ್ ಕಿಶನ್ 46 ಎಸೆತಗಳಲ್ಲಿ 70 ರನ್ ಮತ್ತು ಕೆ.ಎಲ್.ರಾಹುಲ್ 24 ಎಸೆತಗಳಲ್ಲಿ 51 ರನ್ ಗಳಿಸಿದ್ದು, ರಿಷಬ್ ಪಂತ್​ 14 ಎಸೆತಗಳಲ್ಲಿ 29 ರನ್ ಗಳಿಸಿ ಇಂಗ್ಲೆಂಡ್ ನೀಡಿದ್ದ 188 ರನ್​ಗಳ ಗುರಿಯನ್ನು ಭೇದಿಸಿದ್ದಾರೆ.

ಇಂಗ್ಲೆಂಡ್ ಪರ ಜಾನ್ ಬೇರ್​ಸ್ಟೋ 36 ಎಸೆತಗಳಲ್ಲಿ 49, ಮೊಯಿನ್ ಅಲಿ 20 ಎಸೆತಗಳಲ್ಲಿ 43, ಲಿಯಾಮ್ ಲಿವಿಂಗ್​ಸ್ಟೋನ್ 20 ಎಸೆತಗಳಲ್ಲಿ 30 ರನ್ ಗಳಿಸಿದ್ದು, ಭಾರತಕ್ಕೆ ಬೃಹತ್ ಮೊತ್ತವನ್ನು ಸವಾಲಾಗಿ ನೀಡುವಲ್ಲಿ ಸಫಲರಾಗಿದ್ದರು.

ಭಾರತದ ಪರ ಶಮಿ 40 ರನ್​ಗೆ ಮೂರು ವಿಕೆಟ್​, ಜಸ್​ಪ್ರೀತ್ ಬೂಮ್ರಾ 26 ರನ್​ಗೆ ಒಂದು ವಿಕೆಟ್ ಮತ್ತು ರಾಹುಲ್ ಚಹಾರ್ 43 ರನ್​ಗೆ ಒಂದು ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ: ವಿಶ್ವಕಪ್​ನಲ್ಲಿ ರೋಹಿತ್​ ಜೊತೆ ರಾಹುಲ್ ಇನ್ನಿಂಗ್ಸ್ ಆರಂಭಿಸೋದು ಪಕ್ಕಾ: ದೃಢಪಡಿಸಿದ ಕೊಹ್ಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.