ಲಂಡನ್: ಇಂದು ನಡೆಯುವ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಸ್ಮಿತ್ರನ್ನ ಕಿಚಾಯಿಸಲ್ಲ ಎಂದು ಪಾಕ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಹೇಳಿದ್ದಾರೆ.
ಭಾರತ ವಿರುದ್ಧದ ಪಂದ್ಯದಲ್ಲಿ ಅಭಿಮಾನಿಗಳು ಸ್ಮಿತ್ರನ್ನ ಕಿಚಾಯಿಸಿದ್ದರು. ಈ ವೇಳೆ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಬುದ್ದಿ ಹೇಳಿದ್ದರು. ಮುಂದಿನ ಪಂದ್ಯದಲ್ಲಿ ಹೀಗೇ ಆದರೆ ನೀವೇನು ಮಾಡುತ್ತೀರಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸರ್ಫರಾಜ್, 'ಪಾಕಿಸ್ತಾನದ ಜನ ಕ್ರಿಕೆಟನ್ನ, ಕ್ರೀಡಾಪಟುಗಳನ್ನ ಪ್ರೀತಿಸುತ್ತಾರೆ, ಉತ್ತಮ ಆಟಗಾರರನ್ನ ಬೆಂಬಲಿಸುತ್ತಾರೆ. ಆದ್ರೆ ಆಟಗಾರರನ್ನ ಹೀಯಾಳಿಸುವ ಕೆಲಸ ಮಾಡೋದಿಲ್ಲ' ಎಂದಿದ್ದಾರೆ.
-
Reporter "We saw Virat Kohli telling Indian supporters to stop booing Steve Smith. If Pakistani supporters get into Smith & Warner will you do something similar?"
— Saj Sadiq (@Saj_PakPassion) June 11, 2019 " class="align-text-top noRightClick twitterSection" data="
Sarfaraz "I don't think Pakistani people will do that. They love cricket, love to support & love the players"#cwc19 pic.twitter.com/d5PoGrRTIe
">Reporter "We saw Virat Kohli telling Indian supporters to stop booing Steve Smith. If Pakistani supporters get into Smith & Warner will you do something similar?"
— Saj Sadiq (@Saj_PakPassion) June 11, 2019
Sarfaraz "I don't think Pakistani people will do that. They love cricket, love to support & love the players"#cwc19 pic.twitter.com/d5PoGrRTIeReporter "We saw Virat Kohli telling Indian supporters to stop booing Steve Smith. If Pakistani supporters get into Smith & Warner will you do something similar?"
— Saj Sadiq (@Saj_PakPassion) June 11, 2019
Sarfaraz "I don't think Pakistani people will do that. They love cricket, love to support & love the players"#cwc19 pic.twitter.com/d5PoGrRTIe
ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ ಆಸೀಸ್ ವಿರುದ್ಧ ಜಯಗಳಿಸಿಲಿದ್ದು, ಎರಡು ಅಂಕಗಳನ್ನ ಸಂಪಾದಿಸುತ್ತೇವೆ ಎಂದು ಸರ್ಫರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ವೇಳೆ ಸ್ಮಿತ್ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದಾಗ ಕೆಲ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸ್ಮಿತ್ರನ್ನು 'ಚೀಟರ್', 'ಚೀಟರ್' ಎಂದು ಛೇಡಿಸಿದ್ದರು. ಇದನ್ನ ಗಮನಿಸಿದ್ದ ಕೊಹ್ಲಿ ಅಭಿಮಾನಿಗಳತ್ತ ನೋಡಿ, ಈ ರೀತಿ ವರ್ತಿಸದಿರಿ, ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ ಎಂದು ಸನ್ನೆ ಮಾಡಿದ್ದರು.