ಮ್ಯಾಂಚೆಸ್ಟರ್: ವಿಶ್ವಕಪ್ ಟೂರ್ನಿಗಾಗಿ ಇಂಗ್ಲೆಂಡ್ ತಲುಪಿರುವ ಮಿ. ನ್ಯಾಗ್ಸ್ ಬಿಡಿಗಾಸಿಲ್ಲದೇ ಅನಾಥನಾಗಿ ಅಲೆದಾಡುತ್ತಿದ್ದರು. ಆದ್ರೆ ಈಗ ಸಾಕಷ್ಟು ಹಣ ಸಂಪಾದನೆ ಮಾಡಿದ್ದು, ಮ್ಯಾಂಚೆಸ್ಟ್ ಫುಟ್ಬಾಲ್ ಕ್ಲಬ್ ಕೊಂಡುಕೊಳ್ಳಲು ಮುಂದಾಗಿದ್ದಾರೆ.
- " class="align-text-top noRightClick twitterSection" data="">
ಇಂಡಿಯನ್ ಪ್ರೀಮಿಯರ್ ಲೀಗ್ ಸಮಯದಲ್ಲಿ ಮಾತ್ರ ಕ್ರಿಕೆಟ್ ಅಭಿಮಾನಿಗಳನ್ನ ರಂಜಿಸುತ್ತಿದ್ದ ಮಿ.ನ್ಯಾಗ್ಸ್, ಈ ಬಾರಿ ವಿಶ್ವಕಪ್ನಲ್ಲೂ ತಮ್ಮ ಮನರಂಜನೆ ಮುಂದುವರೆಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಭಿಕ್ಷೆ ಬೇಡುತ್ತಿದ್ದ ನ್ಯಾಗ್ಸ್, ಇಂಗ್ಲೆಂಡ್ನಲ್ಲಿ ಹೊಸದೊಂದು ವ್ಯಾಪಾರ ಶುರುಮಾಡಿದ್ದಾರೆ.
ಇಂಗ್ಲೆಂಡ್ನಲ್ಲಿ ನ್ಯಾಗ್ಸ್ ಹೆಡ್ ಎಂಬ ಹೋಟೆಲ್ ಪ್ರಾರಂಭ ಮಾಡಿದ್ದು ಸಾಕಷ್ಟು ಹಣ ಗಳಿಸಿದ್ದಾರೆ. ತಾನು ರಜಿನಿಕಾಂತ್ ಅಭಿಮಾನಿಯಾಗಿದ್ದು, ಶಿವಾಜಿ ಚಿತ್ರದಲ್ಲಿ ಒಂದು ರೂಪಾಯಿಯಿಂದ ರಜಿನಿ ಹೇಗೆ ಹಣ ಸಂಪಾದನೆ ಮಾದಿಸಿದ್ರೋ, ಅದೇ ರೀತಿ ನಾನು ಕೂಡ ಹಣ ಸಂಪಾದನೆ ಮಾಡಿದ್ದೇನೆ ಎಂದಿದ್ದಾರೆ.
ಆರ್ಸಿಬಿ ಆಟಗಾರರು ಕ್ರಿಕೆಟ್ ಜೊತೆ ಫುಟ್ಬಾಲ್ ಆಟವನ್ನೂ ಇಷ್ಟಪಡುತ್ತಾರೆ. ಹೀಗಾಗಿ ಮ್ಯಾಂಚೆಸ್ಟರ್ ಫುಟ್ಬಾಲ್ ಕ್ಲಬ್ ಕೊಂಡುಕೊಳ್ಳೋದಕ್ಕೆ ಮುಂದಾಗಿರೋದನ್ನ ನ್ಯಾಗ್ಸ್ ಹಾಸ್ಯಮಯವಾಗಿ ಪ್ರದರ್ಶಿಸಿದ್ದಾರೆ.
ಮಿ.ನ್ಯಾಗ್ಸ್ ಅವರ ಈ ಹೊಸ ವಿಡಿಯೋವನ್ನ ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಯೂಟ್ಯೂಬ್ನಲ್ಲಿ ಸಖತ್ ಸದ್ದು ಮಾಡುತ್ತಿದೆ.