ಬರ್ಮಿಂಗ್ಯಾಮ್: ವಿಶ್ವಕಪ್ ಇತಿಹಾಸದಲ್ಲೇ ಯಾರೂ ಮಾಡಲಾಗದ ಸಾಧನೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ವಿರಾಟ್ ಈ ಮೈಲಿಗಲ್ಲು ತಲುಪಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕ್ಯಾಪ್ಟನ್ ಕೊಹ್ಲಿ ಮತ್ತೊಂದು ಅರ್ಧಶತಕ (66) ಬಾರಿಸಿ ಔಟಾದರು. ಈ ಮೂಲಕ ವಿಶ್ವಕಪ್ನಲ್ಲಿ ಸತತ 5ನೇ ಹಾಫ್ ಸೆಂಚುರಿ ಸಿಡಿಸಿದ ಮೊದಲ ನಾಯಕ್ ಎಂಬ ಹಿರಿಮೆಗೆ ರನ್ ಮಷಿನ್ ಪಾತ್ರರಾದರು. ಇಂಗ್ಲೆಂಡ್ ನೀಡಿರುವ 338 ರನ್ಗಳ ಬೃಹತ್ ಮೊತ್ತ ಬೆನ್ನತ್ತಿರುವ ಟೀಂ ಇಂಡಿಯಾ 8 ರನ್ ಗಳಿಸಿದ್ದಾಗ ಮೊದಲ ವಿಕೆಟ್ ಕಳೆದುಕೊಂಡಿತ್ತು. ಆಗ ಕ್ರೀಸ್ಗೆ ಬಂದ ಕೊಹ್ಲಿ ನಾಯಕನ ಆಟವಾಡಿದರು.
ಇನ್ನು ವಿಶ್ವಕಪ್ನಲ್ಲಿ ಈ ಹಿಂದೆ ದಕ್ಷಿಣ ಆಫ್ರಿಕಾದ ನಾಯಕ ಗ್ರೇಮ್ ಸ್ಮಿತ್ ಹಾಗೂ ಆಸೀಸ್ ಕ್ಯಾಪ್ಟನ್ ಆರೋನ್ ಫಿಂಚ್ ಸತತ 4 ಅರ್ಧಶತಕ ಬಾರಿಸಿದ್ದರು. ಈ ರೆಕಾರ್ಡ್ನ್ನು ಕೊಹ್ಲಿ ಹಿಂದಿಕ್ಕಿದ್ದಾರೆ. ಈ ವರ್ಲ್ಡ್ ಕಪ್ನಲ್ಲಿ ಒಂದೂ ಶತಕ ಗಳಿಸದಿದ್ದರೂ ಕೂಡ 82, 77, 67, 72 ಹಾಗೂ 66 ರನ್ಗಳ ಮೂಲಕ ಕೊಹ್ಲಿ 5ನೇ ಬಾರಿಗೆ ಅರ್ಧಶತಕ ಸಿಡಿಸಿದ್ದಾರೆ.
ಈ ಹಿಂದಿನ ಪಂದ್ಯದಲ್ಲಿ ವಿಂಡೀಸ್ ವಿರುದ್ಧ 72 ರನ್ ಬಾರಿಸಿದ್ದ ವಿರಾಟ್ ವೇಗವಾಗಿ 20,000 ರನ್ ಕ್ಲಬ್ ಸೇರಿದ್ದ ಶ್ರೇಯಕ್ಕೆ ಪಾತ್ರರಾಗಿದ್ದರು.
-
#ViratKohli at #CWC19
— Cricket World Cup (@cricketworldcup) June 30, 2019 " class="align-text-top noRightClick twitterSection" data="
18
82
77
67
72
50*
It's five consecutive half-centuries for India's captain 👏
Is today the day he gets to 💯?#ENGvIND | #TeamIndia pic.twitter.com/vmJAUG4pqF
">#ViratKohli at #CWC19
— Cricket World Cup (@cricketworldcup) June 30, 2019
18
82
77
67
72
50*
It's five consecutive half-centuries for India's captain 👏
Is today the day he gets to 💯?#ENGvIND | #TeamIndia pic.twitter.com/vmJAUG4pqF#ViratKohli at #CWC19
— Cricket World Cup (@cricketworldcup) June 30, 2019
18
82
77
67
72
50*
It's five consecutive half-centuries for India's captain 👏
Is today the day he gets to 💯?#ENGvIND | #TeamIndia pic.twitter.com/vmJAUG4pqF