ETV Bharat / sports

ಕಾಂಗಾರೂ ಹಿಡಿತಕ್ಕೆ ಉಸಿರುಗಟ್ಟಿದ ವಿಂಡೀಸ್‌, ಆಸೀಸ್‌ಗೆ 15ರನ್​ ರೋಚಕ ಗೆಲುವು

author img

By

Published : Jun 6, 2019, 11:59 PM IST

ತೀವ್ರ ಕುತೂಹಲ ಮೂಡಿಸಿದ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಆಸ್ಟ್ರೇಲಿಯಾ ಗೆಲುವಿನ ನಗೆ ಬೀರಿದೆ. ಈ ಮೂಲಕ 2019 ರ ವಿಶ್ವಕಪ್‌ ಕ್ರೆಕೆಟ್‌ನಲ್ಲಿ ಕೆರಿಬಿಯನ್ ತಂಡ ಮೊದಲ ಸೋಲು ಅನುಭವಿಸಿತು.

ಆಸೀಸ್​ಗೆ 15ರನ್​ಗಳ ರೋಚಕ ಗೆಲುವು

ನಾಟಿಂಗ್​ಹ್ಯಾಮ್​: ಇಲ್ಲಿ ನಡೆದ ವೆಸ್ಟ್​ ಇಂಡೀಸ್​ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್​ ಪಂದ್ಯದಲ್ಲಿ ಆಸ್ಟ್ರೇಲಿಯಾ​​ ತಂಡ ವಿಂಡೀಸ್​ ವಿರುದ್ಧ 15 ರನ್​ಗಳ ಅಂತರದಲ್ಲಿ ಗೆಲುವು ದಾಖಲಿಸಿದೆ.

ಆಸ್ಟ್ರೇಲಿಯಾ ತಂಡ ನೀಡಿದ್ದ 289 ರನ್​ಗಳ ಗುರಿ ಬೆನ್ನತ್ತಿದ ವಿಂಡೀಸ್​ ತಂಡಕ್ಕೆ ಆಸೀಸ್​ ತಂಡ ಶಾಕ್​ ನೀಡಿತು,. ಆರಂಭಿಕ ಆಟಗಾರ ಲೆವಿಸ್​ ಮತ್ತು ಕ್ರಿಸ್​ ಗೇಲ್ ಕ್ರೀಸಿಗೆ​ ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿದ್ರು. ಒಂದು ಹಂತದಲ್ಲಿ 31 ರನ್​ಗಳಿಗೆ 2 ವಿಕೆಟ್​ ಕಳೆದುಕೊಂಡು ತಂಡ ತೀವ್ರ ಸಂಕಷ್ಟಕ್ಕೀಡಾಯ್ತು. ಈ ವೇಳೆ ತಂಡಕ್ಕೆ ಆಸರೆಯಾದ ನಿಕೋಲಸ್​ ಪೂರನ್​ 40 ರನ್​ಗಳಿಸಿ ತಂಡದ ಮೊತ್ತ ಹೆಚ್ಚಿಸಿದ್ರು.

ನಂತರ ಜೊತೆಯಾದ ಹೆಟ್ಮಿಯರ್​ ಮತ್ತು ಶಾಯ್​ ಹೋಪ್​ 50 ರನ್​ಗಳ ಜೊತೆಯಾಟದ ಕಾಣಿಕೆ ನೀಡಿದ್ರು. 21 ರನ್​ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಹೆಟ್ಮಿಯರ್​ ರನ್‌ ಔಟ್​ಗೆ ಬಲಿಯಾದ್ರು.

ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಕ್ರೀಸ್​ ಕಚ್ಚಿ ನಿಂತ ಶಾಯ್​ ಹೋಪ್, ಮತ್ತು ಜಾಸನ್​ ಹೋಲ್ಡರ್​ ಅರ್ಧಶತಕ ಗಳಿಸಿ ತಂಡಕ್ಕೆ ಆಸರೆಯಾದ್ರು. ಆದ್ರೆ ಮಿಚೆಲ್​ ಸ್ಟಾರ್ಕ್​ ದಾಳಿಗೆ ತತ್ತರಿಸಿದ ವಿಂಡೀಸ್​ ಆಟಗಾರರು ಪೆವಿಲಿಯನ್​ ಪರೇಡ್​ ನಡೆಸಿದ್ರು. ಅಂತಿಮವಾಗಿ 50 ಓವರ್​ಗಳಿಗೆ 9 ವಿಕೆಟ್​ ಕಳೆದುಕೊಂಡು 273 ರನ್​ ಗಳಿಸಲಷ್ಟೇ ಶಕ್ತವಾಯ್ತು. ಈ ಮೂಲಕ 15 ರನ್​​ಗಳಿಂದ ವಿಂಡೀಸ್​ ಸೋಲೊಪ್ಪಿಕೊಂಡಿತು. ಆಸೀಸ್​ ಪರ ಮಿಚೆಲ್​ ಸ್ಟಾರ್ಕ್​ 5, ಪ್ಯಾಟ್​ ಕಮಿನ್ಸ್ 2 ಮತ್ತು ಆ್ಯಡಮ್​ ಜಂಪಾ ಒಂದು ವಿಕೆಟ್​ ಪಡೆಕೊಂಡಿದ್ದಾರೆ.

ಇದಕ್ಕೂ ಮೊದಲು ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಆಸ್ಟ್ರೇಲಿಯಾ 79 ರನ್‌ಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮಧ್ಯಮ ಕ್ರಮಾಂಕದಲ್ಲಿ ಕಾಲ್ಟರ್​ ನೇಲ್ ಅವರ 92 ರನ್​ ಮತ್ತ ಸ್ಟೀವ್​ ಸ್ಮಿತ್​ 73, ಅಲೆಕ್ಸ್​ ಕ್ಯಾರಿ ಅವರ 45ರನ್​ಗಳ ಕೊಡುಗೆಯಿಂದ 49 ಓವರ್​ಗಳಿಗೆ ಹತ್ತು ವಿಕೆಟ್​ ಕಳೆದುಕೊಂಡು 288 ರನ್​ ಗಳಿಸಿತ್ತು. ವಿಂಡೀಸ್ ಪರ ಬ್ರಾತ್‌ವೈಟ್ 3 ವಿಕೆಟ್, ರಸೆಲ್ 2, ಕಾಟ್ರೆಲ್ 2, ಹಾಗೂ ಒಶೇನ್ ಥಾಮಸ್ 2 ವಿಕೆಟ್​ ಪಡೆದು ಮಿಂಚಿದ್ರು.

Intro:Body:

empty

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.