ಅಹಮದಾಬಾದ್: ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್‌ಗಳ ಸೋಲು ಕಂಡಿದೆ. ಈ ಮೂಲಕ ಸರಣಿಯಲ್ಲಿ 0-1 ಅಂತರದ ಹಿನ್ನಡೆ ಅನುಭವಿಸಿದೆ. ಈ ನಡುವೆ ಭಾರತದ ಲೆಗ್ ಸ್ಪಿನ್ನರ್ ಚಹಾಲ್ ಇಂದಿನ ಪಂದ್ಯದಲ್ಲಿ ಹೊಸ ದಾಖಲೆ ಬರೆದರು.
-
Congratulations & best wishes to @yuzi_chahal who will be playing his 1⃣0⃣0⃣th international game today. 👏👏@Paytm #INDvENG #TeamIndia pic.twitter.com/iTSr6cNfC0
— BCCI (@BCCI) March 12, 2021 " class="align-text-top noRightClick twitterSection" data="
">Congratulations & best wishes to @yuzi_chahal who will be playing his 1⃣0⃣0⃣th international game today. 👏👏@Paytm #INDvENG #TeamIndia pic.twitter.com/iTSr6cNfC0
— BCCI (@BCCI) March 12, 2021Congratulations & best wishes to @yuzi_chahal who will be playing his 1⃣0⃣0⃣th international game today. 👏👏@Paytm #INDvENG #TeamIndia pic.twitter.com/iTSr6cNfC0
— BCCI (@BCCI) March 12, 2021
ಇದನ್ನೂ ಓದಿ: ಕೊಹ್ಲಿ ಪಡೆ ಮೇಲೆ ಆಂಗ್ಲರ ಸವಾರಿ... ಮೊದಲ ಟಿ-20 ಗೆದ್ದು ಬೀಗಿದ ಇಂಗ್ಲೆಂಡ್!
ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಚಹಾಲ್, ಜೋಸ್ ಬಟ್ಲರ್ ವಿಕೆಟ್ ಪಡೆದುಕೊಳ್ಳುವ ಮೂಲಕ ಟಿ-20 ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಪ್ಲೇಯರ್ ಆಗಿ ಹೊರಹೊಮ್ಮಿದ್ದಾರೆ. ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ 50 ಟಿ-20 ಪಂದ್ಯಗಳಿಂದ 59 ವಿಕೆಟ್ ಪಡೆದುಕೊಂಡಿದ್ದಾರೆ. ಆದರೆ ಇಂದಿನ ಪಂದ್ಯದಲ್ಲಿ ಚಹಾಲ್ ಮತ್ತೊಂದು ವಿಕೆಟ್ ಪಡೆದುಕೊಳ್ಳುವ ಮೂಲಕ ಭಾರತದ ಪರ ಟಿ-20ಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಜತೆಗೆ ಬುಮ್ರಾ ದಾಖಲೆಯನ್ನೂ ಬ್ರೇಕ್ ಮಾಡಿದ್ದಾರೆ.
ಚಹಾಲ್ ಇಲ್ಲಿಯವರೆಗೆ ಆಡಿರುವ 46 ಟಿ-20 ಪಂದ್ಯಗಳಿಂದ 60 ವಿಕೆಟ್ ಪಡೆದುಕೊಂಡಿದ್ದು, ಜತೆಗೆ ಇಂದಿನ ಪಂದ್ಯ ಚಹಾಲ್ಗೆ 100ನೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಕೂಡ ಆಗಿದೆ. 2016ರಲ್ಲಿ ಜಿಂಬಾಬ್ವೆ ವಿರುದ್ಧ ಪದಾರ್ಪಣೆ ಮಾಡಿರುವ ಲೆಗ್ ಸ್ಪಿನ್ನರ್ ಇಲ್ಲಿಯವರೆಗೆ 54 ಪಂದ್ಯಗಳಿಂದ 92 ವಿಕೆಟ್ ಪಡೆದುಕೊಂಡಿದ್ದಾರೆ.